ಲಿಂಗಸಗೂರು : ಏ , 8.ಬೇಸಿಗೆ ಬಂದಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು ನಮಗೆ ಕುಡಿಯಲು ನೀರುಕೊಡಿ ಎಂದು ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಆಕ್ರೋಶಕ್ಕೆ ಪಿಡಿಓ ಸುಮಾರು 30-40 ಜನ ಗ್ರಾಮಸ್ಥರ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ವಾಪಸ್ ತೆಗೆಯಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು .
ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಬಹಳ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು ಬೇಸಿಗೆ ಬಂದರೆ ಉಲ್ಬಣಿಸುತ್ತದೆ ಅದಕ್ಕಾಗಿ ಗ್ರಾಮಸ್ಥರು ಕುಡಿಯುವ ನೀರಿನ ವ್ಯವಸ್ಥೆ ಪರಿಹಾರ ಮಾಡಬೇಕು ಎಂದು ಪಿಡಿಓ ಗಮನಕ್ಕೆ ತಂದರು ಸಮಸ್ಯೆಯನ್ನು ಸರಿಪಡಿಸದೆ ಇದ್ದಾಗ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಪಂಚಾಯ್ತಿಗೆ ಬಂದು ಪ್ರತಿಭಟನೆ ನಡೆಸಿದರು . ಆಗ ಪಿಡಿಓ ಉಡಾಫೆಯಾಗಿ ಮಾತನಾಡಿದಾಗ ವಿಷಯ ಪೊಲೀಸ್ ಠಾಣೆಗೆ ತಂದು ರಸ್ತೆತಡೆ ಮಾಡುತ್ತೇವೆ ಎಂದಾಗ ಪೊಲೀಸರು ಬಗೆಹರಿಸುತ್ತೇವೆ ಎಂದು ಅವರನ್ನ ವಾಪಸ್ ಕಳಿಸಿದ್ದಾರೆ ಈ ನಡುವೆ ಪಿಡಿಓ ಶೋಭಾರಾಣಿ ಗ್ರಾಮದ ಸುಮಾರು 30-40 ಜನರು ಗಲಾಟೆ ಮಾಡಿದ್ದಾರೆಂದು ಗ್ರಾಮಸ್ಥರ ವಿರುದ್ದ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದು ಅದನ್ನು ಕೂಡಲೇ ರದ್ದು ಪಡಿಸಬೇಕು ಮತ್ತು ನಮಗೆ ಕುಡಿಯುವ ನೀರು ಕೊಡಬೇಕು ಎಂದು ಗ್ರಾಮದ ನೂರಾರು ಜನರು ಒತ್ತಾಯಿಸಿದರು . ಈ ಸಂದರ್ಭದಲ್ಲಿ ಅಮರೇಶ ಸಾಲವಾಡಗಿ,ಬಾಬುರಾಮ,ಬಸವರಾಜ ಗುಂಟಿ, ಸಿದ್ದಮ್ಮ, ಯಂಕಮ್ಮ, ರಿಂದಮ್ಮ, ರಾಮಣ್ಣ ಕೂಡ್ಲೂರು, ಅಮರಪ್ಪ ರತ್ತಾಳ, ಶಿವಪುತ್ರಮ್ಮ ಹುಚ್ಚಪ್ಪ, ಅಂಬಮ್ಮ, ಗಂಗಮ್ಮ ಶಟ್ಟಿ, ಮಲ್ಲಮ್ಮ ಬಿಳವಾರ, ಮಹಾಲಕ್ಷ್ಮಿ ದೇವರಾಜ, ಗುರುರಾಜ, ಯಲ್ಲಪ್ಪ ಕಾವಲಿ ಸೇರಿದಂತೆ ಇದ್ದರು

