*ಸಿಂಧನೂರು ದಿ:ಎ07* ತಾಲೂಕಿನ ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣದ ನಿಟ್ಟಿನಲ್ಲಿ, ಇಂದು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳ ಪ್ರಮುಖ ಸಭೆಯನ್ನು ಆಯೋಜಿಸಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ತಾಲೂಕಾ ವಿ.ಬಿ.ಡಿ ಮೇಲ್ವಿಚಾರಕ ಎಫ್.ಎ.ಹಣಗಿ ಸ್ವಾಗತಿಸಿದರು ಮತ್ತು ಸಭೆಯ ಪೀಠಿಕೆ ನೀಡಿದರು ಹಾಗೂ ವರ್ಷಾದ್ಯಂತ ನಮ್ಮಲ್ಲಿನ ಡೆಂಗ್ಯೂ ತೆರನಾದ ಪ್ರಕರಣಗಳ ಕುರಿತು ಗಮನ ಸೆಳೆದರು.
ಸಭೆಯನ್ನುದ್ದೇಶಿಸಿ ತಾಲೂಕಾರೋಗ್ಯಾಧಿಕಾರಿಗಳು ಮಾತನಾಡುತ್ತಾ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ ಮತ್ತು ಜೆ.ಇ. ರೋಗಗಳ ಪತ್ತೆ ಹಾಗೂ ವರದಿ ಮಾಡುವಿಕೆ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯವಾಗಿ 2026ನೇ ಸಾಲಿನಲ್ಲಿ ವರದಿಯಾದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಪರಾಮರ್ಶಿಸಲಾಯಿತು. ಪ್ರತಿಯೊಂದು ಪಾಸಿಟಿವ್ ಪ್ರಕರಣದ ಕುರಿತು ಸಾಂಕ್ರಾಮಿಕ ರೋಗಶಾಸ್ತ್ರೀಯ ಮತ್ತು ಕೀಟಶಾಸ್ತ್ರೀಯ ತನಿಖೆ ನಡೆಸುವುದು ಹಾಗೂ ಅದರ ವರದಿಯನ್ನು ವಿಳಂಬವಿಲ್ಲದೆ ಅನುಷ್ಠಾನಕ್ಕೆ ಮುಂದಾಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸೂಚಿಸಲಾಯಿತು.
ವಿಶೇಷವಾಗಿ ಐ.ಹೆಚ್.ಐ.ಪಿ. (IHIP) ಪೋರ್ಟಲ್‌ನಲ್ಲಿ ದತ್ತಾಂಶ ನಮೂದಿಸುವಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ತಿಳಿಸಲಾಯಿತು.
ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಮಾದರಿ ಪರೀಕ್ಷೆಯ ದತ್ತಾಂಶಗಳು ಶೂನ್ಯ ತೋರಿಸುತ್ತಿರುವುದರ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.
ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಖಾಸಗಿ ಸಂಸ್ಥೆಗಳು ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳ ಮಾಹಿತಿಯನ್ನು ನಿಖರವಾಗಿ ಹಂಚಿಕೊಳ್ಳಬೇಕು ಮತ್ತು ಕೆ.ಪಿ.ಎಂ.ಇ. (KPME) ನೋಂದಣಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈ ಸಂದರ್ಭದಲ್ಲಿ ತಾಲೂಕಾರೋಗ್ಯಾಧಿಕಾರಿಗಳಾದ ಡಾ.ಅಯ್ಯನಗೌಡ ಎಚ್ಚರಿಕೆ ನೀಡಿದರು. ಅಲ್ಲದೆ, ಬಯೋ ಹಜಾರ್ಡ ಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಮಾಹಿತಿ ಪಡೆದರು ಹಾಗೂ ಸರಿಯಾದ ವಿಲೆವಾರಿ ಯಾಗದ ಬಗ್ಗೆ ಸಭೆಯಲ್ಲಿನ ಖಾಸಗಿ ಪ್ರಯೋಗ ಶಾಲಾ ತಂತ್ರಜ್ಞರ ಮಾಹಿತಿಯಿಂದ ಕಟ್ಟು ನಿಟ್ಟಿನ ಆದೇಶಕ್ಕಾಗಿ ಜಿಲ್ಲೆಯಲ್ಲಿ ಚರ್ಚಿಸಿ ಲೋಪ ಸರಿಪಡಿಸಲು ಸೂಕ್ತ ಕ್ರಮಕ್ಕಾಗಿ ಸಂಭಂದಿಸಿದ ಹಿರಿಯ ಅಧಿಕಾರಿಗಳ ಗಮನ ಸೆಳೆದು ಮನವಿ ಮಾಡಲಾಗುವುದು ಎಂದರು ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ಆನೆಕಾಲು ರೋಗಿಗಳಿಗೆ ಗೃಹ ಆಧರಿತ ಆರೈಕೆಯ (ಎಂ.ಎಂ.ಡಿ.ಪಿ.) ಕಿಟ್‌ಗಳ ವಿತರಣೆಯ ಪ್ರಗತಿಯ ಬಗ್ಗೆಯೂ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು. ಈ ಸಭೆಯಲ್ಲಿ ತಾಲೂಕಿನ ವಿವಿಧ ಆರೋಗ್ಯ ಕೇಂದ್ರಗಳ ಹಾಗೂ ಖಾಸಗಿ ಪ್ರಯೋಗಾಲಯಗಳ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳು,ತಾಲೂಕ ಕಾರ್ಯಾಲಯದ ಅಧಿಕಾರಿಗಳಾದ ರಂಗನಾಥ. ಗುಡಿ,ತ್ರಿವೇಣಿ,ನಿಖಿಲ್ ತಾಲೂಕಾ ಎಪಿಡೆಮಲಾಜಿಸ್ಟ, ಎ.ಆರ್.ಟಿ ಲ್ಯಾಬ್ ಮೇಲ್ವಿಚಾರಕ ಖಾದ್ರಿ, ಎಸ್.ಟಿ.ಎಲ್.ಎಸ್ ಹಮೀದ, ತಾಲೂಕಾ ವಿ.ಬಿ.ಡಿ ಮೇಲ್ವಿಚಾರಕ ಎಫ್.ಎ.ಹಣಗಿ ಉಪಸ್ಥಿತರಿದ್ದರು.

