ಸಿಂಧನೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದುವುದರ ಜೊತೆಗೆ ಸೌಹಾರ್ದತೆಯ ಜೀವನ ಸಾಗಿಸಲು ಸಾಧ್ಯವಾಗುವುದು ಮತ್ತು ಸದಾ ಕ್ರಿಯಾಶೀಲತೆಯಿಂದ ಉತ್ತಮ ಆದರ್ಶ ವಿದ್ಯಾರ್ಥಿಗಳಾಗಲು ಸಾಧ್ಯವೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸ್ಕೌಟ್ ಮಾಸ್ಟರ್ ಬೀರಪ್ಪ ಶಂಭೋಜಿ ಹೇಳಿದರು.
ಅವರು ನಗರದ ಉಪ್ಪಾರವಾಡಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಿಂಧನೂರು, ಅಕ್ಕಮಹಾದೇವಿ ಗೈಡ್ ಘಟಕ ಮುಕ್ತದಳ, ಅಂಬಾದೇವಿ ಗೈಡ್ ಘಟಕ, ರಾಮಕೃಷ್ಣ ಕಬ್ ಮುಕ್ತದಳ ಸಂಯುಕ್ತಾಶ್ರಯದಲ್ಲಿ ಬೇಸಿಗೆ ಶಿಬಿರದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುಗ್ಗಮನಗುಂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಖ್ಯ ಶಿಕ್ಷಕ ಕಬ್ ಮಾಸ್ಟರ್ ಶಂಕರದೇವರು ಹಿರೇಮಠ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಮಯಪಾಲನೆ, ಏಕಾಗ್ರತೆ, ಪರಿಸರ ರಕ್ಷಣೆ ಮಾಡುವ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಿಂಧನೂರಿನ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಗೈಡ್ ಕ್ಯಾಪ್ಟನ್ ಬಸಮ್ಮ ಹಿರೇಮಠ ಮಾತನಾಡಿ ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿಯ ನೀಡಿದ ಉತ್ತಮ ವಿಚಾರಗಳನ್ನು ಅಳವಡಸಿಕೊಳ್ಳಬೇಕೆಂದರು, ನ್ಯಾಯವಾದಿ ಸ್ಕೌಟ್ ಮಾಸ್ಟರ್ ಬಸವರಾಜ್ ಹುಲಿಹೈದರ್ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದಯುವುದರಿಂದ ಉತ್ತಮ ಜೀವನ ಶೈಲಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *