ಮಾನ್ವಿ: ಮಾನ್ವಿ ಪಟ್ಟಣದಲ್ಲಿ ಮೊಟ್ಟ ಮೊದಲ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭ ಮಾಡಿ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಮಧುಸೂದನ್ ಗುಪ್ತಾ ಜಿಯವರು ಮಾನ್ವಿ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಅಪಾರವಾದದ್ದು ಎಂದು ಜಿಶಾನ ಅಕಿಲ್ ಸಿದ್ದಿಕಿ ಸಿಂಡಿಕೇಟ್ ಸದಸ್ಯರು ಆದಿಕವಿ ಶ್ರೀ ಮಹರ್ಷಿ ವಿಶ್ವ ವಿದ್ಯಾಲಯ ರಾಯಚೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪಟ್ಟಣದ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾನ್ವಿಯಲ್ಲಿ ಮೊಟ್ಟಮೊದಲ ಆಂಗ್ಲ ಮಾಧ್ಯಮ ಶಾಲೆಯನ್ನು 1991 ರಲ್ಲಿ ಪ್ರಾರಂಭಿಸಿ ಇಂದು ಬೃಹದಾಕರವಾಗಿ ಬೆಳೆದು ನಿಲ್ಲುವುದಕ್ಕೆ ಮಧುಸೂದಾನ್ ಗುಪ್ತಾ ಜೀ ಯವರ ಶೈಕ್ಷಣಿಕ ಸೇವೆ ಎಂದೆದಿಗೂ ಅಜರಾಮರವಾಗಿದೆ. ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತವಾದ ಸ್ಥಾನಗಳನ್ನು ಪಡೆದು ಕೊಂಡಿದ್ದಾರೆ ಎಂದು ಹೇಳಿದರು.ಇನ್ನೊರ್ವ ಮುಖ್ಯ ಅತಿಥಿಯಾದ ಶಿವಣ್ಣ ವಕೀಲರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯ ರಾಯಚೂರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಳೆ ಬೇರು ಹೊಸ ಚಿಗರು ಎಂಬ ಗಾದೆಯಂತೆ ಹೊಸದಾಗಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಸ್ವಾಗತಿಸುವುದು ಒಂದು ಸಂಪ್ರದಾಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ. ಹೈoದವಿ ಮಾತನಾಡಿ ಸಂಸ್ಥೆ ಕಟ್ಟುವುದು ಬಹಳ ಸುಲಭ ಆದರೆ ಅದನ್ನ ನೆಡೆಸುವುದು ಬಹಳ ಕಷ್ಟ. ಮಧುಸೂದನ್ ಗುಪ್ತಾಜೀಯವರು ಮೊದಲು ಗುಡಿಸಲಲ್ಲಿ ಶಾಲೆಯನ್ನು ಪ್ರಾರಂಭಿಸಿ ಇಂದು ಭವ್ಯವಾದ ಕಟ್ಟದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯುತ್ತ ಇಂದು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷರಾದ ಉಮಾಮಹೇಶ್ವರಿ, ಕಿಶೋರ್ ಕುಮಾರ, ಮಂಜಳಾ, ಡಾ.ಪರಮೇಶ್ವರಪ್ಪ ಗೋಪಶೆಟ್ಟಿ ಪ್ರಾಚಾರ್ಯರು, ಉಪಪ್ರಚಾರ್ಯರಾದ ವೀರಭದ್ರಯ್ಯ ಹಿರೇಮಠ ಉಪನ್ಯಾಸಕರಾದ ಈರಣ್ಣ ಮರ್ಲಟ್ಟಿ,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪಾಲಕರದ ಮಲ್ಲಯ್ಯ ನಸಲಾಪುರ ಮಾನ್ವಿ ತಾಲೂಕಾಧ್ಯಕ್ಷರು ಕನಕ ಗುರುಪೀಠ ತಿಂತಣಿ ಬ್ರಿಡ್ಜ್ , ಶರಣಪ್ಪ ಸಾಹುಕಾರ ಬೀರಪ್ಪನವರು ಬೈಲ್ ಮರ್ಚೆಡ್ ಮತ್ತು ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಿಯದರ್ಶಿನಿ ಮತ್ತು ವನಿತಾ ಪ್ರಶಿಕ್ಷಣಾರ್ಥಿಗಳು ನಿರೂಪಿಸಿದರು. ಸಹನಾ ಪ್ರಾರ್ಥಿಸಿದರು, ಜ್ಯೋತಿ ಸ್ವಾಗತಿಸಿದರು ಚೆನ್ನಬಸಮ್ಮ ವಂದಿಸಿದರು

