ತಾಳಿಕೋಟಿ: ತಾಲೂಕಿನ ಕೊಡಗಾನೂರ ಗ್ರಾಮದವರಾದ ನಿವೃತ್ತ ಶಿಕ್ಷಕ ಸಾಹಿತಿ ಬಸವರಾಜ ಗೊರಜಿ ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ತುಂಬಗಿ-ಸಾಸನೂರಿನ ಪೂಜ್ಯ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಾದ ನೀಡಿದರು. ಇತ್ತೀಚಿಗೆ ತಾಲೂಕಿನ ತುಂಬಗಿ ಗ್ರಾಮದಲ್ಲಿ ಜರುಗಿದ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಮಹಾಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಹರ-ಚರ ಗುರುಮೂರ್ತಿಗಳು ರಾಜಕೀಯ ದುರೀಣರು ಹಾಗೂ ಗಣ್ಯರ ಸಮ್ಮುಖದಲ್ಲಿ ಅವರನ್ನು ಶ್ರೀಮಠದ ವತಿಯಿಂದ ಪರಮ ಪೂಜ್ಯರು ಗೌರವಿಸಿ ಆಶೀರ್ವಾದ ನೀಡಿದರು.

