ಕವಿತಾಳ : ರಸ್ತೆ ವಿಸ್ತರಣೆಗೆ ಪರಿಹಾರ ವಿತರಿಸದೆ ಮನೆ ತೆರವುಗೊಳಿಸಿದ್ದರಿಂದ ನೊಂದು ಕುಟುಂಬಸ್ಥರು ವಿಷ ಸೆವನೆಗೆ ಮುಂದಾದ ಘಟನೆ ಇಂದು ಹಿರೇಹಣಗಿ ಗ್ರಾಮದಲ್ಲಿ ಜರುಗಿದೆ.
ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದಾರಿ ನಿರ್ಮಾಣ ಕಾಮಗಾರಿ ಹಿನ್ನಲೆಯಲ್ಲಿ ಹಿರೇಹಣಗಿ ಗ್ರಾಮದ ನವೀನಕುಮಾರ ಅವರ ಮನೆಯನ್ನು ಏಕಾಏಕಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿಯನ್ನ ತಡೆದು ಪ್ರತಿಭಟಿಸಿದರು.
`ಬೆರೆಯವರ ಹೆಸರಿಗೆ ನೊಟೀಸ್ ನೀಡಲಾಗಿದೆ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಕಡಿಮೆ ಮೊತ್ತದ ಪರಿಹಾರ ವಿತರಿಸಿದ ಬಗ್ಗೆ ತಕರಾರು ಸಲ್ಲಿಸಿದರೂ ಅಧಿಕಾರಿಗಳು ಕಾಳಜಿ ವಹಿಸಿಲ್ಲ, ಇದೀಗ ಇದ್ದಕ್ಕಿದ್ದಂತೆ ಮನೆ ಕೆಡವಿದ್ದಾಋಎ ಇದರಿಂದ ಕುಟುಂಬ ಬೀದಿಗೆ ಬೀಳುವಂತಾಗಿದೆ ತಾವು ಮದುವೆಸಮಾರಮಭದಲ್ಲಿ ಭಾಗಿಯಾಗಿದ್ದು ಮನೆಯಲ್ಲಿದ್ದ್ ವೃದ್ಧೆಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜ್ಯನ್ಯ ಎಸಗಲಾಗಿದೆ ಎಂದು’ ಮನೆ ಮಾಲೀಕ ನವೀನಕುಮಾರ ಆಕ್ರೋಶ ವ್ಯಕ್ತಪಡಿಸಿದರು.
`ಅಷ್ಟೆ ಅಲ್ಲದೆ ಜಮೀನು, ಮನೆಗಳ ಮೌಲ್ಯಮಾಪನದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾಋಎ ಪಕ್ಕದ ಮನೆಗೆ ಹೆಚ್ಚಿನ ಪರಿಹಾರ ನೀಡಿದ್ದು ತಮಗೆ ಕಡಿಮೆ ನೀಡಿದ್ದಾರೆಪ್ರತಿಯೊಂದು ಸಮಸ್ಯೆಗೂ ನ್ಯಾಯಾಲಯಕ್ಕೆ ಹೊಗುವಂತೆ ಸೂಚಿಸುವ ಅಧಿಕಾರಿಗಳು ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ ಎಂದು ಸ್ಥಳಿಯರು ದೂರಿದರು, ಪ್ರಸತುತ ಮನೆ ತೆರವು ಮಾಡಿದ್ದರಿಂದ ಮನೆ ಬಳಕೆಯ ಪಾತ್ರೆಗಳು, ತೊಗರಿ. ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳು, ಚಿನ್ನದ ಆಭರಣಗಳು ಮಣ್ಣು ಪಾಲಾಗಿವೆ ಎಂದು ಅಳಲು ತೊಡಿಕೊಂಡ ಕುಟುಂಬಸ್ಥರು ವಿಷ ಕುಡಿಯಲು ಮುಂದಾಗಿದ್ದು ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಕುಟುಂಬಕ್ಕೆ ಆದ ನಷ್ಟವನ್ನು ಭರಿಸಬೇಕು’ ಎಂದು ಸ್ಥಳಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸ್ಥಳದಲ್ಲಿದ್ದ ಅಧಿಕಾರಿಗಳು ಕುಟುಂಬಸ್ಥರು ವಿಷ ಸೇವಿಸುವುದನ್ನು ತಡೆದರು ಸ್ಥಳಕ್ಕೆ ಆಗಮಿಸಿದ ಭೂ ಸ್ವಾಧೀನ ಅಧಿಕಾರಿ ಸಿದ್ದಯ್ಯ ಹಿರೇಮಠ ಮತ್ತು ಸಿರವಾರ ತಹಸೀಲ್ದಾರ ಅಶೋಕ್ ಪವಾರ್ ಅವರು ಸೂಕ್ತ ಒದಗಿಸಲಾಗುವುದು ಈಗ ಕಾಮಗಾರಿ ಕೈಗೊಳ್ಳಲು ಅವಕಾಶ ನೀವಂತೆ ಮನವಿ ಮಾಡಿದರು, ಅದಕ್ಕೆ ಒಪ್ಪದೆ ಮನೆ ಮಾಲೀಕರು ಪರಿಹಾರ ವಿತರಿಸಿ ಕಾಮಗಾರಿ ಕೂಗೊಳ್ಳುವಂತೆ ಪಟ್ಟುಹಿಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಹಾರ ಸಿಕ್ಕಿಲ್ಲ , ಈಬಗ್ಗೆ ಮಾಃಇತಿ ಇದ್ದರೂ ಕ್ರಮಕೈಗೊಂಡಿಲ್ಲ ಎಂದು ಭೀಮಣ್ಣ, ಶರಣಪ್ಪ, ಶಿವಪ್ಪ ಮತ್ತಿತರರು ಆರೋಪಿಸಿದರು, ಸ್ಥಳದಲ್ಲಿದ್ದ ಸಿಪಿಐ ಶಶಿಕಾಂತ.ಎಂ ಮತ್ತು ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು, ಅಧಿಕಾರಿಗಳು ನಾಳೆಯೇ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳುವ ಬರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.


