ಮಾನ್ವಿ :ಪಟ್ಟಣದ ಶಾರದಾ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಹೈಂದವಿ ಮಧುಸೂದನ್ ಗುಪ್ತಾಜೀ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಭೆ ಇದ್ದರೆ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳುವುದರ ಜೊತೆಗೆ ಹತ್ತನೇ ತರಗತಿ ನಿಮ್ಮ ಯಶಸ್ಸಿನ ಮೊದಲನೇ ಹಂತ ಹೀಗಾಗಿ ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವ ಜೊತೆ ನಿಮ್ಮ ಜೀವನವನ್ನು ಯಶಸ್ವಿಗೊಳಿಸುವ ಹಾಗೂ ನಿಮಗೆ ಇಷ್ಟವಾದ ಕೋರ್ಸ್ ಆಯ್ಕೆ ಮಾಡಿಕೊಂಡು ನಿಮ್ಮ ಮತ್ತು ನಿಮ್ಮ ತಂದೆ ತಾಯಿಯ ಕನಸುಗಳನ್ನು ನನಸು ಮಾಡಿಕೊಂಡು ಜೀವನಕ್ಕೆ ಭದ್ರಬುನಾದಿಯನ್ನು ಹಾಕಿಕೊಳ್ಳಿ ಎಂದು ತಿಳಿಸಿದರು.
ಶಾರದಾ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ 245 ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ವಿದ್ಯಾರ್ಥಿಗಳಲ್ಲಿ ಪ್ರಥಮ ಬಹುಮಾನ 5000 ರೂ ಗಳನ್ನು ಸುಖದೇವ್ ತಂದೆ ಪರಶುರಾಮ್ ಕಟ್ಟಿಮನಿ ದ್ವಿತೀಯ ಬಹುಮಾನ 3000 ರೂ ಗಳನ್ನು ವಿಶಾಲ್ ತಂದೆ ವೀರಭದ್ರಯ್ಯ
ತೃತೀಯ ಬಹುಮಾನ 2000 ರೂ ಗಳನ್ನು ಪ್ರವೀಣ ಪಾಟೀಲ್ ತಂದೆ ಬಸನಗೌಡ ಪಡೆದುಕೊಂಡರು ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಬಿ.ಕಿಶೋರ ಕುಮಾರ್ ಇನ್ನೋರ್ವ ಮುಖ್ಯಸ್ಥರಾದ ಶ್ರೀಮತಿ ಮಂಜುಳಾ ಕಿಶೋರ ಕುಮಾರ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಉಮಾಮಹೇಶ್ವರಿ ಮಧುಸೂದನ್ ಗುಪ್ತಾಜೀ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ವೀರಭದ್ರಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಶ್ರೀ ಮಧುಸೂದನ್ ಗುಪ್ತಾಜೀ ಅವರು ಕಟ್ಟಿ ಬೆಳೆಸಿದ ಈ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಾಣಿಜ್ಯ ಹಾಗೂ ಕಲಾ ವಿ ಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವುದರ ಜೊತೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿದ್ದಾರೆ ಹೀಗಾಗಿ ಮುಂದಿನ ನಿಮ್ಮ ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಳ್ಳಲು ನಮ್ಮ ಕಾಲೇಜಿನಲ್ಲಿ ದಾಖಲಾತಿಯನ್ನು ಪಡೆದು ಕೊಳ್ಳಿರಿ ಎಂದು ಹೇಳುವುದರ ಜೊತೆ ಜೀವನದಲ್ಲಿ ಹಲವು ಕೌಶಲಗಳನ್ನು ಕಲಿಯುವುದರ ಜೊತೆಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀ ಮಹಾಂತಗೌಡ ನಿರೂಪಿಸಿದರು ವಿದ್ಯಾರ್ಥಿನಿ ಲಲಿತಾ ಪ್ರಾರ್ಥಿಸಿದರು ಬಂದೇನವಾಜ್ ಸ್ವಾಗತಿಸಿದರು ಹಾಗೂ ಸುರೇಂದ್ರ ಹೊಂದಿಸಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *