ಲಿಂಗಸಗೂರು : ಏ , 7 ತಾಲೂಕಿನ ಐತಿಹಾಸಿಕ ಪಾರಂಪರೆಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜಲದುರ್ಗಾ ಕೋಟೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಕೋಟೆ ಪ್ರಾಚೀನ ಕಾಲದ ವೈಭವವನ್ನು ಸಾರುವ ಮಹತ್ವದ ಸ್ಮಾರಕವಾಗಿದ್ದು, ಇದನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಆಂಜನೇಯ ಹೆಚ್ ಭಂಡಾರಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು .

ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಉದ್ಯಾನವನ ಹಾಗೂ ಕಲ್ಲು ಬೆಂಚುಗಳನ್ನು ಅಳವಡಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಎಲ್ಲವು ಹಾಳಾಗಿ ಹೋಗಿವೆ. ಪ್ರಸ್ತುತ ಕೋಟೆಯ ಸುತ್ತಮುತ್ತ ಸ್ವಚ್ಛತೆ ಕೊರತೆ, ಸುರಕ್ಷತಾ ವ್ಯವಸ್ಥೆಯ ಅಭಾವ, ಮೂಲಭೂತ ಸೌಕರ್ಯಗಳ ಲೋಪದಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಭೇಟಿ ನೀಡಲು ಅಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಬೇಡಿಕೆಗಳು ಕೈಗೊಳ್ಳಬೇಕು .

ಕೋಟೆಯ ಸುತ್ತಮುತ್ತ ಸ್ವಚ್ಛತೆ ಹಾಗೂ ಸಂರಕ್ಷಣೆ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸಬೇಕು.
ಪ್ರವಾಸಿಗರಿಗಾಗಿ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
ಕೋಟೆಯ ಇತಿಹಾಸವನ್ನು ಪರಿಚಯಿಸುವ ಫಲಕಗಳನ್ನು ಅಳವಡಿಸಬೇಕು.
ಸುರಕ್ಷತಾ ದೃಷ್ಟಿಯಿಂದ ಕಾವಲು ಸಿಬ್ಬಂದಿಯನ್ನು ನೇಮಿಸಬೇಕು.
ಸ್ಥಳೀಯ ಯುವಕರಿಗೆ ಮಾರ್ಗದರ್ಶಕರಾಗಿ ಉದ್ಯೋಗಾವಕಾಶ ಕಲ್ಪಿಸಬೇಕು.
ಜಲದುರ್ಗಾ ಕೋಟೆಯನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯ ಆರ್ಥಿಕತೆ ಬೆಳವಣಿಗೆಯಾಗುವುದರ ಜೊತೆಗೆ, ನಮ್ಮ ಐತಿಹಾಸಿಕ ಪರಂಪರೆ ಸಂರಕ್ಷಿತವಾಗುತ್ತದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಎಲ್ ಭೀಮೇಶ್ ನಾಯಕ್ ಸೇರಿದಂತೆ ಇದ್ದರು .

Leave a Reply

Your email address will not be published. Required fields are marked *