ಮಸ್ಕಿ: ಪಟ್ಟಣದ 23 ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಿ ಅಲ್ಲದೆ ಯಾವುದೇ ಕಾರಣಕ್ಕೂ ಅನಗತ್ಯವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಕೆರೆ ಅಭಿವೃದ್ಧಿಗಾಗಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್ ಸಿದ್ದನಗೌಡ ತುರ್ವಿಹಾಳ ಹೇಳಿದರು.
ಮಸ್ಕಿ ಪಟ್ಟಣದ ಕುಡಿಯುವ ನೀರಿನ ಕೆರೆಗೆ ಸೋಮವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ತುಂಗಭದ್ರಾ ಎಡ ನಾಲೆಯಿಂದ ನೀರನ್ನು ಬಿಡಲಾಗಿದೆ ಆದ್ದರಿಂದ ಕೆರೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಿ ಮುಂಬರುವ ದಿನಗಳಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಲ್ಲದೆ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಜನತೆಗೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಲು ಇನ್ನೊಂದು ಕೆರೆ ನಿರ್ಮಾಣಕ್ಕಾಗಿ ಪುರಸಭೆ ವತಿಯಿಂದ ಸ್ಥಳವನ್ನು ನೀಡಿದರೆ ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರದ ವತಿಯಿಂದ ತಂದು ಕೆರೆ ಅಭಿವೃದ್ಧಿಪಡಿಸಲಾಗುವುದು ಈ ನಿಟ್ಟಿನಲ್ಲಿ ಶಾಸಕರು ಸಹ ಪಟ್ಟಣದ ಜನತೆಗಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಹೊಸ ಕೆರೆ ನಿರ್ಮಿಸಲು ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಮುಂಬರುವ ದಿನಗಳಲ್ಲಿ ಆದಷ್ಟು ಬೇಗ ಕೆರೆ ನಿರ್ಮಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆೆೆ ಈಗಿರುಎರಡು ಕೆರೆಗಳ ಅಭಿವೃದ್ಧಿಗಾಗಿ ನೀಲ ನಕ್ಷೆಯನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮುಂಬರುವ ದಿನಗಳಲ್ಲಿ ಈಗಿರುವ ಕೆರೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಈ ಸಂಬಂಧ ಸಂಬಂಧ ಪಟ್ಟ ಸಚಿವರಿಗೂ ಸಹ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ಇಂಜಿನಿಯರ್ ನರಸಮ್ಮ, ಸಂತೋಷ್ ಹಿರೇದಿನ್ನಿ, ಸೇರಿದಂತೆ ಇನ್ನಿತರರಿದ್ದರು.
ಕೋಟ್:–
ಮಸ್ಕಿ ಪಟ್ಟಣದ ಕುಡಿಯುವ ನೀರಿನ ಕೆರೆಗೆ ವಿದ್ಯುತ್ ದೀಪಗಳ ಕಂಬ ಅಳವಡಿಸುವುದು ಸೇರಿದಂತೆ ಇನ್ನಿತರ ಅಭಿವೃದ್ಧಿಗಾಗಿ ನೀಲ ನಕ್ಷೆಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಇನ್ನೊಂದು ಕೆರೆ ನಿರ್ಮಾಣಕ್ಕಾಗಿ ಈಗಾಗಲೇ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳವನ್ನು ಗುರುತಿಸುವಂತೆ ಸೂಚಿಸಿದ್ದಾರೆ. ಕೆರೆ ನಿರ್ಮಿಸಲು ಬೇಕಾದ ಅನುದಾನವನ್ನು ನೀಡಲಾಗುವುದು – ಆರ್. ಸಿದ್ದನಗೌಡ ತುರುವಿಹಾಳ.
ಅಧ್ಯಕ್ಷರು.ನಗರ ಯೋಜನಾ ಪ್ರಾಧಿಕಾರ ಮಸ್ಕಿ.

