ಕನ್ನಡ ಸಾಹಿತ್ಯದಲ್ಲಿ ವರ್ತಮಾನದ ಕೆಲವೇ ಕೆಲವು ಪುಸ್ತಕಗಳು ದಾಖಲಾಗಿವೆ. ಅದರಲ್ಲಿ ಬಸವಗೀತೆ ವಚನ ಸಂಪುಟವು ಕೂಡ ಒಂದು ಎಂಬುದು ಹೆಮ್ಮೆಯ ವಿಚಾರವಾಗಿದೆ. ಹಿರಿಯ ಪತ್ರಕರ್ತರು ಹಾಗೂ ಸಂಪಾದಕರಾದ ಬಸವರಾಜಸ್ವಾಮಿಯವರು ಈ ಕೃತಿಯಲ್ಲಿ ಅಂತರಂಗದ ಅವಲೋಕನ ಮಾಡಿ ಕೊಳ್ಳಲು ಪರಿಣಾಮಕಾರಿಯಾಗಿ ವಚನಗಳನ್ನು ವಿಮರ್ಶೆ ಮಾಡಿದ್ದಾರೆ ಎಂದು ತುರ್ವಿಹಾಳ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಖಾದರ್ ಭಾಷಾ ಅಭಿಪ್ರಾಯ ಪಟ್ಟರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು, ಬಸವಕೇಂದ್ರ, ಬಸವಪರ, ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸುದ್ದಿಮೂಲ ಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿ ಅವರ ಬಸವಗೀತೆ ವಚನ ಸಂಮಟ-9 ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ಕುರಿತು ಮಾತನಾಡುತ್ತಾ ಒಟ್ಟು ಒಂಬತ್ತು ಸಂಪುಟಗಳಲ್ಲಿ ಈ ಬಸವಗೀತೆ ಹೊರಬಂದಿದ್ದು, 959 ವಚನಗಳ ಸಂವಾದಗಳು
ನೋಡಿದಾಗ, ಬಸವರಸ ಪುಸ್ತಕದಲ್ಲಿ ನಾಯಕನೋ?
ಅಥವಾ ಬಸವಾನಂದ ಸ್ವಾಮಿಗಳು ಅಂದರೆ (ಬಸವರಾಜಸ್ವಾಮಿ) ನಾಯಕರೋ? ಎಂದು ಪ್ರಶ್ನಿಸಿದ ಅವರು, ಸ್ವಾಮಿಗಳು ತಮ್ಮಅನುಭವ ಜನ್ಯ ವಚನಗಳ ವಿಮರ್ಶೆಯನ್ನು ವರ್ತಮಾನದ ರಾಮಾಯಣ, ಮಹಾಭಾರತ, ಪೈಗಂಬರ್, ಕ್ರೈಸ್ತನ ಘಟನೆಗಳೊಂದಿಗೆ ಸಮೀಕರಿಸಿ ಬರೆದಿರುವುದು ವಿಶೇಷ ಈ ಕಾಲದ ಅನೇಕ ಸಾಹಿತಿಗಳು ಮುಖಾಮುಖಿಯಾಗಿ
ಹೋಗುವುದು ಈ ಕೃತಿಯಲ್ಲಿ ಭಾಸವಾಗುತ್ತದೆ. ಬಸವಣ್ಣನವರ ವಚನಗಳನ್ನು ಸ್ವಾಮಿಗಳು ವೈಚಾರಿಕ ನೆಲೆಯಲ್ಲಿ ಬರೆದಿದ್ದಾರೆ.

ಈ ಕೃತಿಯಲ್ಲಿ ಮೌಢ್ಯತೆಯನ್ನು ಎಚ್ಚರಿಸುವ
ಅವರು ಕೃತಿಯೊಂದಕ್ಕೆ ಮುನ್ನುಡಿ ಬರೆದಿರುವುದು ಹೆಗ್ಗಳಿಕೆಯಾಗಿದೆ. ಅಲ್ಲದೇ ಸಾಹಿತಿ ಬಿ.ಜಿ.ಹುಲಿ ಅವರ ಮುನ್ನುಡಿಯು ಸಹ ಕಳಸಪ್ರಾಯವಾಗಿದೆ. ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ ಎಂಬುದು ಲೋಕೋಕ್ತಿ. 12ನೇ ಶತಮಾನದ ಬಸವಣ್ಣನವರ ಇತಿಹಾಸವೇ ಒಂದು ರೋಚಕ ಅವರು ಸಮಾಜದಲ್ಲಿನ ಕಂದಾಚಾರ, ಮೌಢ್ಯಗಳನ್ನು ತಮ್ಮ ಸರಳ ವಚನಗಳ ಮೂಲಕ ಭಿತ್ತಿ, ಜಗತ್ತನ್ನು ತಿದ್ದಲು ಮುಂದಾದಂತೆ ಬಸವರಾಜಸ್ವಾಮಿಯವರು ಸಹ ತಮ್ಮ ಕೃತಿಗಳಲ್ಲಿ ಸಂವಾದಗಳನ್ನು ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಇದರ ಜೊತೆಗೆ ಅಲ್ಲಲ್ಲಿ ಲೋಕದ ಡೊಂಕುಗಳನ್ನು ಸಹ ಕುಟುಕಿದ್ದಾರೆ ಎಂದು ವಿವರಿಸಿದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವಗೀತೆ
ವಚನ ಸಂಪುಟ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಮಾತನಾಡಿ, ಬಸವರಾಜಸ್ವಾಮಿಯವರು ಸಂಪೂರ್ಣ ವಚನಗಳನ್ನು ಮೈಗೂಡಿಸಿಕೊಂಡು ಅಧ್ಯಯನಶೀಲರಾಗಿ, ಬಸವಣ್ಣ ಕುರಿತು ಪುಸ್ತಕಗಳನ್ನು ರಚಿಸಿ ಸಮಾಜಕೆ ಸಂದೇಶ ನೀಡುತಿದ್ದಾರೆ. ಬಸವತತ್ವ ಶತಮಾನ ಶೋಷಣೆ ಮಾಡುವ ವರ್ಗ, ಶೋಷಣೆ ಒಳಗಾಗುವ ವರ್ಗ ಇತ್ತು. ಅಹಂಕಾರ ಶೋಷಣೆ ಮಾಡಿದರೆ, ಕೀಳಿರಿಮೆ ಶೋಷಣೆಗೆ ಒಳಗಾಗುತ್ತದೆ. ಈ ಎರಡನ್ನು ಹೋಗಲಾಡಿಸುವ ಕೆಲಸ ಅಂದಿನ ಕಾಲದಲ್ಲಿ ಬಸವಣ್ಣನವರು ಮಾಡಿದರು.

ಕನ್ನಡಕ್ಕೆ ಬಸವಣ್ಣನ ಕಾಲದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದೆ. ಬಸವಣ್ಣನ ವಿಚಾರದಲ್ಲಿ ಸ್ವತಂತ್ರ ಪ್ರತಿಪಾದನೆ ಸರಿ ಅಲ್ಲ. ಮನುಷ್ಯರೆಲ್ಲರೂ ಒಂದೇ ಎನ್ನುವ ತತ್ವ ಭಾವನೆಯನ್ನು ಬಸವಣ್ಣನವರು ಬಿತ್ತಿದರು. ಬಸವಣ್ಣನವರ ಹೋರಾಟದ ಫಲಿತಾಂಶ ಸಮಾಜದಲ್ಲಿ ಬೆಳವಣಿಗೆಯಾಗಬೇಕು. ಅಂದಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃತಿಕಾರ ಬಸವರಾಜಸ್ವಾಮಿ ಮಾತನಾಡಿ, ಬಸವಗೀತೆಯನ್ನು ಬೆಂಗಳೂರಿನಲ್ಲಿ ಈ ಮೊದಲು ಬಿಡುಗಡೆ ಮಾಡಲಾಯಿತು. 21 ಪುಸ್ತಕಗಳು ಹೊರ ಬಂದರೂ ಸಹ ಬಿಡುಗಡೆಗೆ ಮಹತ್ವ ಕೊಡಲಿಲ್ಲ. ಆದರೆ ಬಸವಗೀತೆ ಮನೆ-ಮನದ ಗೀತೆಯಾಗಲಿ ಎಂಬ ಸದುದ್ದೇಶದಿಂದ ನಾಡಿನ ವಿವಿಧೆಡೆ ಈ ಕೃತಿಯನ್ನು ಓದಿದಾಗ ಅದರ ನೆನಪು ಆಪತ್ಕಾಲದಲ್ಲಿ ಬಂದರೆ ಪುಸ್ತಕ ಸಾರ್ಥಕವಾದಂತೆ ಎಂದರು.

ದೇಹದ ವಿಚಾರಗಳೇ ಈ ಪುಸ್ತಕದಲ್ಲಿ ಅಡಕವಾಗಿವೆ. ಅರಿವು, ಸ್ಥೂಲ, ಹಾಗೂ ಮನೋಮಯ ದೇಹಗಳಿವೆ. ಶರಣರಿಗೆ ಗಂಡು-ಹೆಣ್ಣು ಎನ್ನುವ ಬೇಧವಿಲ್ಲ. ಪ್ರತಿಯೊಬ್ಬರ ಮನಸ್ಸೇ ಹೆಣ್ಣು-ಅರಿವೇ ಗಂಡು. ಕಣ್ಣುಗಳು ಒಂದೇ ಆದರೂ ನೋಡುವ ರೀತಿ ಬೇರೆ ಇರುತ್ತದೆ. ಮನೋಮಯ ದೃಶ್ಯ, ಜ್ಞಾನಮಯ ದೃಶ್ಯ, ಮರಿವಿನ ದೃಶ್ಯ, ಅರಿವನ ದೃಶ್ಯ, ಹೀಗೆ ಅಜ್ಞಾನದಿಂದ ಸುಜ್ಞಾನದ ಕಡೆಗೆ ನೋಡುವುದೇ ಅರಿವಿನ ಆನಂದ ಅರಿವನ್ನು ಬಳಸಿಕೊಂಡವರು ಗುರುವಾದರು. ಮಹಾಜ್ಞಾನಿಗಳಾದರು. ತನುವಿನ ತತ್ವವೇ ಬಸವತತ್ವ ಅಂತರಂಗದ ತತ್ವ ಕೊಳೆಯಾಗದೇ ಶುದ್ಧಿ ಆಗಿರಬೇಕು. ಈ ಹಿನ್ನೆಲೆ ಬಸವಣ್ಣನವರ ವಚನಗಳನ್ನು ಕೃತಿಯಲ್ಲಿ ಸಂವಾದ ಮಾಡಲಾಗಿದೆ. ಪ್ರತಿಯೊಬ್ಬರು ಓದಿ, ಅರ್ಥೈಸಿಕೊಂಡು ಬದುಕಬೇಕು ಎಂದು ವಿಶ್ಲೇಷಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಕುರಕುಂದಿ, ಚಿಂತಕ ಗೋವಿಂದರಾಜ ಬಾರಕೇರ್, ಚಂದ್ರೇಗೌಡ ಹರೇಟನೂರು, ಬಸಲಿಂಗಪ್ಪ ಬಾದರ್ಲಿ, ಡಾ.ಹುಸೇನಪ್ಪ ಅಮರಾಪುರ, ಶರಣಪ ಹೊಸಳ್ಳಿಕ್ಯಾಂಪ್, ರವಿಕುಮಾರ ಸಾಸಲಮರಿ, ವೀರೇಶ ಕನ್ನಾರಿ, ಪರಶುರಾಮ ಮಲ್ಲಾಪುರ ಬಸವಗೀತೆ 9 ಸಂಮಟಗಳ ಒಂದೊಂದು ವಚನ ಹಾಗೂ ಅದರ ಸಂವಾದ ಮಾಡಿದರು.

ವೇದಿಕೆಯಲ್ಲಿ ಬಸವ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಶರಣಪ್ಪತೆಂಗಿನಕಾಯಿ, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಫ್.ಮಸ್ಕಿ, ಮಹಿಳಾ ಬಸವಕೇಂದ್ರದ ಅಧ್ಯಕ್ಷೆ ಸುಮಂಗಲಾ ಚಿಂಚಿರಕಿ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸೇರಿ ಅನೇಕರಿದ್ದರು.

Leave a Reply

Your email address will not be published. Required fields are marked *