ಮಸ್ಕಿ : ಪಟ್ಟಣದಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನದ ದಿನದ ಅಂಗವಾಗಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರು ಧ್ವಜಾರೋಹಣವನ್ನು ನೆರವೇರಿಸಿದರು.

1980ರಲ್ಲಿ ದೇಶಸೇವೆಯ ಸಂಕಲ್ಪದೊಂದಿಗೆ, ನಮ್ಮೆಲ್ಲಾ ಹಿರಿಯ ನಾಯಕರಿಂದ ಸ್ಥಾಪನೆಗೊಂಡ ಪಕ್ಷ, ಅಧಿಕ ಕಾರ್ಯಕರ್ತರ ಅಪ್ರತಿಮ ಪರಿಶ್ರಮದಿಂದ, ವಿಶ್ವದ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ.
ಕಾರ್ಯಕರ್ತರೇ ನಮ್ಮ ಬಲ, ವಿಕಸಿತ ಭಾರತ ನಿರ್ಮಾಣದ ನಮ್ಮ ಗುರಿ ಅಚಲ ಎಂದು ಮಾತನಾಡಿದರು .
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಸುರೇಶ ಅರಸುರು, ಹಿರಿಯ ಮುಖಂಡರಾದ ಮಲ್ಲಪ ಅಂಕುಸದೊಡ್ಡಿ, ಉಮಕಾಂತಪ್ಪ ಸಂಗನಾಳ, ಡಾ. ಮಲ್ಲಿಕಾರ್ಜುನ ಇತ್ಲಿ, ಪದಾಧಿಕಾರಿಗಳಾದ ಜಿ ವೆಂಕಟೇಶ್ ನಾಯಕ್, ಬಸವರಾಜ್ ವಕೀಲರು, ರಮೇಶ್ ಉದ್ಬಾಳ್, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ, ಮಲ್ಲಿಕಾರ್ಜುನ ಬ್ಯಾಳಿ, ಭರತ್ ಕುಮಾರ್, ಕೇಶವಮೂರ್ತಿ, ಬಸವರಾಜ್ ಬುಕ್ಕಣ್ಣ , ಯಮನಪ್ಪ ಬೋವಿ, ಶಿವರಾಜ್ ಪಾಟೀಲ್, ಸಿದ್ದನಗೌಡ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *