ಮಸ್ಕಿ: ಪಟ್ಟಣದ ಕುಡಿಯುವ ನೀರಿನ ಕೆರೆಯನ್ನು ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ಆರ್ ಸಿದ್ದನಗೌಡ ತುರವಿಹಾಳ ರವರು ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ನಂತರ ಪಾಟೀಲ್ ನ್ಯೂಸ್ ಅಲರ್ಟ್ ಸುದ್ದಿಯೊಂದಿಗೆ ಮಾತನಾಡುತ್ತಾ ಪಟ್ಟಣದ ನಾಗರಿಕರು ಕುಡಿಯುವ ನೀರಿನ ಬಳಕೆಯನ್ನು ಆದಷ್ಟು ಸಮರ್ಪಕವಾಗಿ ಮತ್ತು ವ್ಯರ್ಥ ಮಾಡದಂತೆ ಬಳಸಬೇಕು, ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ ಅದನ್ನು ವ್ಯರ್ಥ ಮಾಡದೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಮುಂದಿನ ದಿನಗಳಲ್ಲಿ ಹೆಚ್ಚುವರಿ ಭೂಮಿ ಅವಕಾಶ ಸಿಕ್ಕರೆ ಮತ್ತೊಂದು ಕುಡಿಯುವ ನೀರಿನ ಕೆರೆ ಮಾಡುವುದಾಗಿ ತಿಳಿಸಿದರು. ಮಸ್ಕಿ ಪಟ್ಟಣವು ದಿನದಿಂದ ದಿನಕ್ಕೆ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣವಾಗಿದ್ದು, ಹೀಗಾಗಿ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಲ್ಲರೂ ನೀರನ್ನು ಉಳಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯ ಅಧಿಕಾರಿ ನರಸರೆಡ್ಡಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇದ್ದರು.

