ಆಂದ್ರಪ್ರದೇಶದ ಜನತೆಗೆ ಪುಣ್ಯ ಭೂಮಿ ಕರ್ನಾಟಕ ತಾಯಿ ಪ್ರೀತಿ ಕೊಟ್ಟಿದೆ: ನಾರಾ ಲೋಕೇಶ ಅಭಿಪ್ರಾಯ

ಕುಮಾರಸ್ವಾಮಿ, ನಾರಾ ಲೋಕೇಶರಿಂದ ಭರ್ಜರಿ ರೋಡ್ ಶೋ ಅದ್ದೂರಿ ಸ್ವಾಗತ ಕೋರಿದ ಸಿಬ್ಬಂದಿ

ಸೈನಿಕ ಶಾಲೆ ಉದ್ಘಾಟನೆ, ಎನ್ ಟಿ ಆರ್ ಅವರ ಪುತ್ಥಳಿ ಅನಾವರಣಗೊಳಿಸಲು ಭಾನುವಾರದಂದು ನಗರಕ್ಕೆ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿಕೆ ಹಾಗೂ ಆಂಧ್ರಪ್ರದೇಶ ಸರ್ಕಾರದ ಸಚಿವ ನಾರಾ ಲೋಕೇಶ, ರಾಜ್ಯ ರಕ್ಷಣಾ ಸಚವ ಸಂಜಯ ಸೇಠ್ ಅವರಿಗೆ ಸೈನಿಕ ಶಾಲೆ ಸಿಬ್ಬಂದಿಗಳು ಅದ್ದೂರಿ ಸ್ವಾಗತ ಕೋರಿದರು. ನಗರದ ಪಿಡಬ್ಲ್ಯೂಡಿ ಕ್ಯಾಂಪಿನಿಂದ ಗಾಂಧಿವೃತ್ತದ ತನಕವು ಬೃಹತ್ ಬೈಕ್‌ ರ್ಯಾಲಿ ನಡೆಸಲಾಯಿತು.

ಮಹಾತ್ಮಗಾಂಧಿ ವೃತ್ತದಿಂದ ಕಮ್ಮವಾರಿ ಕಲ್ಯಾಣ ಮಂಟಪದವರೆಗೂ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಾರಿ ಉದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಹಾಲಿ ಮತ್ತು ಮಾಜಿ ಸಚಿವರು ಕಮ್ಮವಾರಿ ಕಲ್ಯಾಣ ಮಂಟಪ ತಲುಪಿದರು.
ಅಲ್ಲಿ ಕಮ್ಮವಾರಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ
ಎನ್.ಟಿ.ರಾಮರಾವ್ ಅವರ ಪುತ್ಥಳಿ ಲೋಕಾರ್ಪಣೆ
ಗೊಳಿಸಿದರು

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಎನ್.ಟಿಆರ್ ಅವರ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದ ಮಣ್ಣಿನ ಋಣ ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ. 1970ರ ದಶಕದಲ್ಲಿ ಕರ್ನಾಟಕಕ್ಕೆ ವಲಸಿಗರಾಗಿ ಬಂದು, ಇಲ್ಲಿ ನೆಲೆಸಿದ ಆಂಧ್ರಪ್ರದೇಶದ ಜನತೆಗೆ ಕರ್ನಾಟಕ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುವ ಮೂಲಕ ತಾಯಿ ಪ್ರೀತಿ, ಮಮತೆಯನ್ನು ನೀಡಿದೆ. ಕನ್ನಡ ಮತ್ತು ಕರ್ನಾಟಕದ ಋಣವನ್ನು ನಮ್ಮ ಆಂದ್ರಪ್ರದೇಶದ ಜನರು ಎಂದಿಗೂ ಮರೆಯಬಾರದು
ಕರ್ನಾಟಕ ತಾಯಿ ಇದ್ದಂತೆ, ತಾಯಿ ಭುವನೇಶ್ವರಿಯ ಮಮತೆಯಲ್ಲಿ ಆಂಧ್ರಪ್ರದೇಶದವರು ಇಲ್ಲಿ ನೆಲೆಸಿ ಬದುಕುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಐಟಿ ಮತ್ತು ಶಿಕ್ಷಣ ಇಲಾಖೆ ಸಚಿವ ನಾರಾ ಲೋಕೇಶ್ ಹೇಳಿದರು.

ನಂತರ ಭಾರಿ ಕೈಗಾರಿಕೆ ಮತ್ತು ಹುಕ್ಕು ಕಾರ್ಖಾನೆ ಸಚಿವ ಕುಮಾರಸ್ವಾಮಿ ಮಾತನಾಡಿ, ರಾಯಚೂರಲ್ಲಿ ಸುಮಾರು ಒಂದೂವರೆ ವರ್ಷದಿಂದ ಏಮ್ಸ್ ಗಾಗಿ ಹೋರಾಟ ನಡೆಸಿದ್ದು, ನನ್ನ ಗಮನಕ್ಕೆ ಇದೆ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಕೇಂದ್ರದಲ್ಲಿ ನಾನು ಒತ್ತಡ ಹಾಕಿ ಏಮ್ಸ್ ಕೊಡಿಸುವ ಪ್ರಯತ್ನ ಮಾಡುವೆ
ಹಾಗೆ ಸ್ಥಳೀಯ ಶಾಸಕರ ಮನವಿಯಂತೆ ಕೈಗಾರಿಕೆಗಳು ಸ್ಥಾಪನೆ ಮಾಡಿ, ವಿದ್ಯಾವಂತರಿಗೆ ಉದ್ಯೋಗ ಕೊಡುವ ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ ಅದನ್ನು ಕೂಡ ಮುಂದಿನ ದಿನಗಳಲ್ಲಿ ಮಾಡುವಂತಹ ಕೆಲಸ ಮಾಡುತ್ತೇನೆ,

ನಾನು ಎರಡನೇ ಬಾರಿಗೆ ಕಾಂಗ್ರೆಸ್ಸಿನವರ ಜೊತೆಗೆ ಮುಖ್ಯಮಂತ್ರಿಯಾಗಿದ್ದೆ, ಆಗ ರಾಜ್ಯದ 9 ಜಿಲ್ಲೆಗಳಲ್ಲಿ ಇಂತಹ ಕೈಗಾರಿಕೆ ಸ್ಥಾಪನೆಯ ಕನಸು ಕಂಡಿದ್ದೆ, ಬೀದರ್ ನಲ್ಲಿ ಕೃಷಿ ಉತ್ಪನ್ನ, ಕಲ್ಬುರ್ಗಿಯಲ್ಲಿ ಸೋಲಾರ್, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಹರಬನ್, ಬಳ್ಳಾರಿಯಲ್ಲಿ ಜೀನ್ಸ್ ಪ್ಯಾಕ್ಟರಿ, ಹೀಗೆ 9 ಜಿಲ್ಲೆಗಳಲ್ಲಿ ಸೂಕ್ತವಾದ ಯುವಕರಿಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಕೊಡುವುದಾಗಿತ್ತು. ಪ್ರತಿಯೊಂದು ಜಿಲ್ಲೆಗೆ 25 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕೊಡುವ ನಿರ್ಧಾರ ಮಾಡಿದ್ದೆ, ಆದರೆ ಬದಲಾದ ಕಾಲದಲ್ಲಿ ಸರ್ಕಾರ ಹೋಯಿತು ಅದು ಕೂಡ ನೆನೆಗುದಿಗೆ ಬಿತ್ತು. ಎಂದು ಮೇಲುಕು ಹಾಕಿದರು.

ಸೈನಿಕ ಶಾಲೆ ಕೊಡುವುದಿಕ್ಕೆ ಕಷ್ಟವಿತ್ತು ಆದರೆ ನಿರಂತರ ಒತ್ತಡ ಹಾಕಿ ಸೈನಿಕ ಶಾಲೆ ಕೊಡಿಸಲಿಕ್ಕೆ ಪ್ರಯತ್ನ ಮಾಡಿದ್ದೇನೆ, ನಾರಾ ಲೋಕೇಶ ಅವರು ಸೌಜನ್ಯ ಸ್ವಭಾದವರು, ಜನರ ಮಧ್ಯೆ ಬಾಂಧವ್ಯ ಬೆಸೆದವರು, ಜನರನ್ನ ಅಪ್ಪಿಕೊಳ್ಳುವ ದೊಡ್ಡ ಶಕ್ತಿ ದೇವರು ಅವರಿಗೆ ಕೊಟ್ಟಿದ್ದಾನೆ ಎಂದು ಕೊಂಡಾಡಿದರು.

ಮಾಜಿ ಸಚಿವ ನಾಡಗೌಡ ಮಾತನಾಡಿ, ಈ ನಾರಾ ಲೋಕೇಶ ಅವರಿಗೆ ದೂರದ ಆಂದ್ರಪ್ರದೇಶ ಜನ್ಮ ಭೂಮಿಯಾದರೆ, ಕರ್ನಾಟಕ ಕರ್ಮ ಭೂಮಿಯಾಗಿದೆ. ಶ್ರೀಕೃಷ್ಣದೇವರಾಯ ಶಾಲೆ ಪ್ರಾರಂಭವಾಗಿ 40 ವರ್ಷ ಕಳೆದಿದೆ. ಹೊಸದಾಗಿ ಸೈನಿಕ ಶಾಲೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದಾಗ ದೇವೆಗೌಡರಿಗೆ ಮಾತನಾಡಿದೆ, ಕುಮಾರಸ್ವಾಮಿಯವರು ಮಾಡಿಸಿ ಕೊಟ್ಟರು ಅವರಿಗೆ ಅಭಿನಂದನೆಗಳು ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಈ ಭಾಗದ ಜೀವನಾಡಿ ತುಂಗಭದ್ರಾ ಆಣೆಕಟ್ಟಿಗೆ ಹೆಚ್ಚು ಕಾಳಜಿ ವಹಿಸಿ ಹೂಳು ತುಂಬಿ 33 ಟಿಎಂಸಿ ನೀರನ್ನು ಸಂಗ್ರಹ ಮಾಡಿ, ರೈತರು ಸಂಪೂರ್ಣ ಎರಡು ಬೆಳೆ ಬೆಳೆಯಲಿಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಇಟ್ಟರು. ರಾಜ್ಯ ರಕ್ಷಣಾ ಸಚಿವ ಸಂಜಯ್ ಸೇಠ್ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿದರು.

(ಬಾಕ್ಸ್:
(ಹೆಚ್ಡಿಕೆ ಅವರನ್ನು ಕೊಂಡಾಡಿದ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ..!

ದೇವೆಗೌಡರ ಕುಟುಂಬಕ್ಕೆ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಚಂದ್ರಬಾಬು ನಾಯ್ಡು ಮತ್ತು ದೇವೆಗೌಡರು ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ಈಗ ನಾನು ಮತ್ತು ಕುಮಾರಸ್ವಾಮಿಯವರು ಜೊತೆ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ಸರ್ಕಾರದಲ್ಲಿ ವೈಜಾಕ್ ಸ್ಟೀಲ್ ಪ್ಯಾಕ್ಟರಿಯನ್ನು ದುರುದ್ದೇಶದ ಕಾರಣದಿಂದ ಅದನ್ನು  ಮುಚ್ಚಿಸಲಾಗಿತ್ತು.

ಕೇಂದ್ರದಲ್ಲಿ ಕುಮಾರಣ್ಣ ಮಂತ್ರಿಯಾದ ಮೇಲೆ ವಿಶೇಷ ಕಾಳಜಿವಹಿಸಿ ಮತ್ತೆ ಸ್ಟೀಲ್ ಪ್ಯಾಕ್ಟರಿಯನ್ನ ಪುನಃ ಆರಂಭಿಸಿದ್ದಾರೆ. ಗ್ರೀನ್ ಪೀಲ್ಡ್, ಗ್ರೀನ್ ಕಂಪನಿ, ಆಂಧ್ರಪ್ರದೇಶದಕ್ಕೆ ಬರಲು ಕುಮಾರಸ್ವಾಮಿಯವರೇ ಕಾರಣ ಎಂದು ತಮ್ಮ ಭಾಷಣದುದ್ದಕ್ಕೂ ಹೆಚ್ಡಿಕೆ ಅವರನ್ನು ಹಾಡಿ ಹೊಗಳಿದರು.)

(ಬಾಕ್ಸ್:
ವಿಶೇಷ ಆಸನ ತೆಗೆಯಿಸಿ ಸರಳ ಸಜ್ಜನಿಕೆ ಮೆರೆದ ನಾರಾ ಲೋಕೇಶ

ಪುತ್ಥಳಿ ಅನಾವರಣ ಹಿನ್ನಲೆಯಲ್ಲಿ ಆಯೋಜಿಸಿದ್ದ ವೇದಿಕೆಯಲ್ಲಿ ನಾರಾ ಲೋಕೇಶ ಅವರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇನ್ನಿತರೆ ಗಣ್ಯರಿಗೆ ಬೇರೆ ಆಸನಗಳನ್ನು ಹಾಕಿಸಲಾಗಿತ್ತು. ವಿಶೇಷ ಆಸನದಲ್ಲಿ ಕುಮಾರಸ್ವಾಮಿಯವರನ್ನು ಕುಳಿತು ಕೊಳ್ಳಲು ನಾರಾ ಲೋಕೇಶ ಒತ್ತಾಯಿಸಿದರು. ಕುಮಾರಸ್ವಾಮಿ ನಿರಾಕರಿಸಿದ ಹಿನ್ನಲೆ ತಾವು ಸಹ ಆ ವಿಶೇಷ ಆಸನದಲ್ಲಿ ಕುಳಿತುಕೊಳ್ಳದೇ ಆಸನವನ್ನು ತೆಗೆಯಿಸಿ, ಸಾಧಾರಣ ಖುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಸರಳತೆ ಮರೆದರು. ವೇದಿಕೆ ಮುಂಭಾಗದಲ್ಲಿ ಇದ್ದವರು ನಾರಾ ಲೋಕೇಶ ಅವರ ಸರಳತೆ ಕಂಡು ಅಭಿಮಾನಿಗಳು ಅವರ ಪರ ಜೈಕಾರ ಹಾಕಿ ಘೋಷಣೆ ಕೂಗಿದ ಪ್ರಸಂಗವು ಒಂದು ಕ್ಷಣ ನಡೆಯಿತು.)

ಈ ವೇಳೆ: ವೇದಿಕೆ ಮೇಲೆ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ವಿಶಾಖಪಟ್ಟಣಂ ಸಂಸದ ಭರತ್, ಬಿ.ವೆಂಕಟರಾವ್, ಕ್ಲಬ್ ಕಾಕತೀಯ ಶ್ರೀನಿವಾಸ, ಕುಮಾರ ನಾಯಕ, ಅಮೃತ ಕನ್ಸಟ್ರಕ್ಸನ್ ಪಿ.ವಿ.ರಾವ್ ಬಿಜಾಪುರ ಸೈನಿಕ ಶಾಲೆಯ ಪ್ರಾಂಶುಪಾಲರಾದ ರಾಜಲಕ್ಷ್ಮಿ, ಸೇರಿದಂತೆ ಅನೇಕ ಗಣ್ಯರಿದ್ದರು.

Leave a Reply

Your email address will not be published. Required fields are marked *