ಸಿಂಧನೂರು ಎಪ್ರಿಲ್ 02: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಆರೋಗ್ಯ ಮತ್ತು ಕ್ಷೇಮ ಮಂದಿರ ಗೌಡನಬಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ಕುರಿತು ಮಾತನಾಡಿದ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ ಅವರು ಬಿಸಿಲಿನ ತಾಪಮಾನದಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ ಅದಕ್ಕಾಗಿ ಪಾಲಕರು ಮಕ್ಕಳ ಆರೋಗ್ಯದ ಕುರಿತು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು ತಿಳಿಸಿದರು.ಸಡಿಲವಾದ ಉಡುಪು ಮತ್ತು ಬಿಳಿ ಬಟ್ಟೆಯನ್ನು ಧರಿಸಬೇಕು, ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡಬೇಕು ಹಣ್ಣು ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು ಬಿಸಿಲಿನಲ್ಲಿ ಹೋಗುವಾಗ ಟೋಪಿ. ಚತ್ರಿ. ಕರವಸ್ತ್ರ .ಟೇವಲ್ ಬಳಿಸಬೇಕು. ಮಧ್ಯಾಹ್ನ 12 ಗಂಟೆಯ ನಂತರ ಸಾಯಂಕಾಲದವರೆಗೆ ನೆರಳಿನಲ್ಲಿರಬೇಕು ಒದ್ದೆ ಬಟ್ಟೆಯನ್ನು ಹಾಕಿ ತಲೆಯನ್ನು ಒರೆಸಿಕೊಳ್ಳಬೇಕು ಒಟ್ಟಾರೆ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ ಎಂದು ತಾಯಿಂದಿರಿಗೆ ಸಲಹೆಗಳನ್ನು ನೀಡಿದರು,
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಬೇಸಿಗೆಯಲ್ಲಿ ಮಕ್ಕಳ ಹಾಗೂ ಹಿರಿಯ ನಾಗರಿಕರ ಆರೈಕೆ ಮುಖ್ಯವಾಗಿದೆ ಬಿಗಿಯಾದ ಬಟ್ಟೆಯನ್ನು ಹಾಕಬಾರದು ರಸ್ತೆ ಬದಿ ತೆರೆದಿಟ್ಟ ಯಾವುದೇ ಆಹಾರವನ್ನು ತಿನ್ನಬೇಡಿ. ಕಾಫಿ ಚಹಾ ಮಧ್ಯಪಾನ ಹಾಗೂ ಅತಿಯಾದ ಸಕ್ಕರೆಯುಕ್ತ ಆಹಾರವನ್ನು ಸೇವನೆ ಮಾಡಬೇಡಿ ಅತಿಯಾದ ತಣ್ಣೀರು ಐಸ್ ಹಾಗೂ ಅತಿಯಾದ ತಂಪು ಬಟ್ಟೆಯಿಂದ ದೇಹವನ್ನು ಒರಿಸಿಕೊಳ್ಳವುದು ಬೇಡ ಶುದ್ದವಾದ ನೀರನ್ನು ಕುಡಿಯಿರಿ ಮತ್ತು ಬಯಲು ಮಲವಿಸರ್ಜನೆ ಮಾಡಬೇಡಿ ಮಧ್ಯಾಹ್ನದ ಬಿಸಿಲಿನಲ್ಲಿ ಅತಿಯಾದ ಶ್ರಮದ ಕೆಲಸವನ್ನು ಮಾಡಬೇಡಿ ಬಿಸಿಲಿನ ಬೆಗಿಯಿಂದ ರಕ್ಷಣೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಗೂ ನಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಪಾರ್ವತಿ. ಆರೋಗ್ಯ ನಿರೀಕ್ಷಣಾಧಿಕಾರಿ ಉದಯಕುಮಾರ. ಆಶಾ ಕಾರ್ಯಕರ್ತರಾದ ಬಸವಲಿಂಗಮ್ಮ. ಲಕ್ಷ್ಮಿ. ಅಂಗನವಾಡಿ ಕಾರ್ಯಕರ್ತರು ಮತ್ತು ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *