ರಾಯಚೂರು ಏಪ್ರಿಲ್ 02 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಬೇಸಿಗೆ ತರಬೇತಿ ಶಿಬಿರ-2026ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಮಕ್ಕಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಶಾಲೆಗಳು 02 ತಿಂಗಳು ರಜೆ ಹಿನ್ನಲೆಯಲ್ಲಿ ಮಕ್ಕಳಿಗೆ ಹೊಸ ಹವ್ಯಾಸ ಅಥವಾ ಕ್ರೀಡೆಯಲ್ಲಿ ಅವರು ಭಾಗವಹಿಸುವಂತೆ ಮಾಡಲು ಸೂಕ್ತ ಸಮಯ ಇದಾಗಿದೆ. 02 ತಿಂಗಳ ರಜೆಯಲ್ಲಿ ಮೊಬೈಲ್, ಮೋಜು-ಮಸ್ತಿ ಎನ್ನುವ ಬದಲು ಜೀವನ ಕೌಶಲ್ಯವಾದಂತಹ ಈಜು ಅಥವಾ ಮಕ್ಕಳಿಗೆ ದುಶ್ಚಟ/ಮೊಬೈಲ್‌ಗಳಿಂದ ಮಕ್ಕಳನ್ನು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸಲು ಕ್ರೀಡೆಗಳಲ್ಲಿ ಅವರನ್ನು ತೊಡಗುವಂತೆ ಮಾಡುವುದು ಏಕೈಕ ಉಪಾಯವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ವತಿಯಿಂದ 6 ವರ್ಷ ಮೇಲ್ಪಟ್ಟು ಹಾಗೂ 16 ವರ್ಷದೊಳಗಿನ ಬಾಲಕ/ಬಾಲಕೀಯರಿಗೆ ಬೆಳಿಗ್ಗೆ ಹಾಗೂ ಸಾಯಾಂಕಾಲ ಕನಿಷ್ಠ ಫೀ-ನಲ್ಲಿ ವಿವಿಧ ರೀತಿಯ ಕ್ರೀಡೆಗಳಾದ ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆ ತಬೇತುದಾರರಾದ ರಾಮಲಿಂಗಪ್ಪ ಮೊಬೈಲ್ ಸಂಖ್ಯೆ: 8971737656, ಟೇಬಲ್ ಟೆನ್ನಿಸ್ ಕ್ರೀಡೆ ತಬೇತುದಾರರಾದ ಎಮ್.ಎನ್ ಈರಣ್ಣ ಮೊಬೈಲ್ ಸಂಖ್ಯೆ: 9448837766, ಈಜು ಕ್ರೀಡೆ ತಬೇತುದಾರರಾದ ಇಬ್ರಾಹಿಮ್ ಮೊಬೈಲ್ ಸಂಖ್ಯೆ: 9739875798, ಬಾಸ್ಕೆಟ್‌ಬಾಲ್ ಕ್ರೀಡೆ ತಬೇತುದಾರರಾದ ದೇವಪ್ಪ ಮೊಬೈಲ್ ಸಂಖ್ಯೆ: 9739686843, ವಾಲಿಬಾಲ್, ಥ್ರೋ-ಬಾಲ್ ಕ್ರೀಡೆ ತಬೇತುದಾರರಾದ ವೆಂಕಟೇಶ್ ಮೊಬೈಲ್ ಸಂಖ್ಯೆ: 8310222353, ಕರಾಟೆ ತಬೇತುದಾರರಾದ ಅನಿರುದ್ಧ್ ಮೊಬೈಲ್ ಸಂಖ್ಯೆ: 8971117995ಗೆ ಸಂಪರ್ಕ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ಕಚೇರಿಗೆ ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *