ಸಿಂಧನೂರು ತಾಲೂಕಿನ ಹೊರವಲಯದ ಇ.ಜೆ ಹೊಸಳ್ಳಿ ಕ್ಯಾಂಪಿನಲ್ಲಿರುವ ಶ್ರೀ ಕೃಷ್ಣದೇವರಾಯ ವಿದ್ಯಾ ಸಂಸ್ಥೆಗೆ ಸೈನಿಕ ಶಾಲೆ ಮಂಜೂರಾಗಿದ್ದು, ಏಪ್ರಿಲ್ 4 ರಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ವೆಂಕಟರಾವ್ ತಿಳಿಸಿದರು

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ರಾಜ್ಯ ಸಚಿವ ಸಂಜಯ್ ಸೇಠ್ ಅವರಿಂದ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಆಂಧ್ರ ಪ್ರದೇಶ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವರಾದ ನಾರಾ ಲೋಕೇಶ ಸೈನಿಕ ಶಾಲಾ ಹಾಸ್ಟೆಲ್ ಮತ್ತು ಎನ್.ಟಿ.ಆರ್. ಅವರ ಪ್ರತಿಮೆ ಅನಾವರಣ ಮಾಡುವರು, ಕರ್ನಾಟಕದಲ್ಲಿ ಮಂಜೂರಾದ 4 ಖಾಸಗಿ ಸೈನಿಕ ಶಾಲೆಗಳಲ್ಲಿ ಸಿಂಧನೂರಿನ ಶ್ರೀ ಕೃಷ್ಣದೇವರಾಯ ಶಾಲೆಯು ಒಂದಾಗಿದ್ದು, ಈ ಸೈನಿಕ ಶಾಲೆಗೆ 120 ಸೀಟುಗಳ ಮಾತ್ರ ಭರ್ತಿಗೆ ಅವಕಾಶವಿದೆ. 30 ಸೀಟುಗಳು ವಿದ್ಯಾರ್ಥಿನಿಯರು, 90 ಸೀಟು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಜೂನ್ 26ರಿಂದ ಪ್ರವೇಶಾತಿ ಪ್ರಾರಂಭಿಸಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿದವರು ಶಾಲೆಗೆ ಬಂದು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

ನಂತರ ಜಿ.ಎಸ್.ಸತ್ಯನಾರಾಯಣ ಮಾತನಾಡಿ, ಖಾಸಗಿ ಶಾಲೆಗೆ ಸೈನಿಕ ಶಾಲೆಯನ್ನು ನೀಡಿರುವುದು ರಾಯಚೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಾಸ್ ಆದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಸೈನಿಕ ಸ್ಕೂಲ್ ವೆಬ್‌ಸೈಟ್ ಲಾಂಚ್ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ
ಶ್ರೀಬಸವೇಶ್ವರರ ಪುತ್ಥಳಿಯನ್ನ ವೈದ್ಯಕೀಯ ಶಿಕ್ಷಣ ಹಾಗ ಕೌಶಲ್ಯ ಅಭಿವೃದ್ಧಿ ಖಾತೆಯ ಕ್ಯಾಬಿನೆಟ್ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಇವರಿಂದ ಡಾ.ರಾಧಾಕೃಷ್ಣ ಕಲಾಧಾಮ ಉದ್ಘಾಟನೆ ನೆರವೇರಿಸುವರು ಎಂದರು.

ಗೌರವ ಅತಿಥಿಗಳಾಗಿ ಮಾತುಕುಮಿಲ್ಲಿ ಶ್ರೀಭರತ್ ಎಂಪಿ ವಿಶಾಖಪಟ್ಟಣಂ ಆಂಧ್ರಪ್ರದೇಶ, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ್, ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಬಸನಗೌಡ ಬಾದರ್ಲಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರು ಕೆಒಎಫ್ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡ, ಕೊಪ್ಪಳ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಪಿ.ವಿ.ರಾವ್ ಅಮೃತಾ ಕನ್ಸಟ್ರಕ್ಸನ್ ಬೆಂಗಳೂರು ಇವರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ಈ ವೇಳೆ: ನಾಗೇಶರಾವ್, ಕೆ.ಸುಬ್ಬರಾವ್, ಚಿಟ್ಟೂರಿ ಶ್ರೀನಿವಾಸ, ಬಿ.ಹರ್ಷ, ಸಾಯಿರಾಂ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *