ಅರಕೇರಾ : ಜೀವನದಲ್ಲಿ ಯಶಸ್ಸು ಸಾಧಿಸಲು ಜ್ಞಾನ ಅತ್ಯಂತ ಮುಖ್ಯ ನಿರಂತಕ ಕಲಿಕೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಜ್ಞಾನವನ್ನು ನವೀಕರಿಸಿಕೊಳ್ಳಬೇಕು ಎಂದು ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಹೇಳಿದರು.
ಅವರು ಅರಕೇರಾ ಪಟ್ಟಣದಲ್ಲಿನ ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗೌರವ ಡಾಕ್ಟರೇಟರ್ ಪದವಿ ಪಡೆದಿರುವ ಇಂಗ್ಲೀಷ ಉಪನ್ಯಾಸಕರಾದ ಮಂಜುನಾಥ ಇವರಿಗೆ ಕೆ.ಶಿವನಗೌಡನಾಯರವರ್ ಅಭಿಮಾನಿ ಬಳಗದವತಿಯಿಂದ ಹಮ್ಮಿಕೊಂಡಿದ್ದ ಅಭಿನಂದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದ ೪೩ನೇ ಘಟಿಕೋತ್ಸವದಲ್ಲಿ ಶ್ರೀ ಮಂಜುನಾಥ ಉಪನ್ಯಾಕಸರು ಇಂಗ್ಲೀಷ ವಿಷಯದಲ್ಲಿ ಪಿ ಎಸ್ ಡಿ ಗೌರವ (ಡಾಕ್ಟರೇಟ್) ಪದವಿಯನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿದ್ದುನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.. ಮಂಜುನಾಥ ಉಪನ್ಯಾಸಕರು ಇನ್ನೂ ಉನ್ನತ ಹುದ್ದೆಗಳು ಲಭಿಸುವಂತಾಗಲಿ ಎಂದು ಹಾರೈಸಿದರು.
ಕೆ.ಶಿವನಗೌಡನಾಯಕ ಅವರ ಅವಧಿಯಲ್ಲಿ ದೇವದುರ್ಗ ಮತ್ತು ಅರಕೇರಾ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಶಾಲಾ ಕಾಲೇಜು ,ಆಶ್ರಮಶಾಲೆ ,ವಸತಿನಿಲಯಗಳ ಕಟ್ಟಡಗಳು ನಿರ್ಮಾಣಗೊಂಡಿವೆ ಅಲ್ಲದೇ ಗ್ರಾಮೀಣಾ ಭಾಗದ ರಸ್ತೆ,ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅಭಿವೃದ್ದಿಗೊಂಡಿವೆ. ಕ,ಶಿವನಗೌಡನಾಯಕರವರ ನೇತೃತ್ವದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕ ಸುಧಾರಣೆಗಳಿಗೆ ಕೆ.ಎಸ್ ಎನ್ ಬಳಗವು ಸದಾ ಸಕ್ರೀಯವಾಗಿರುತ್ತದೆ
ಡಾ. ಎಚ್ ಎ.ನಾಡಗೌಡ ರಾಯಚೂರು ರಿಮ್ಸ್ ಮಾಜಿ ನಾಮನಿರ್ದೇಶಿತ ಸದಸ್ಯರು ಮಾತನಾಡಿ ಮಂಜುನಾಥ ಉಪನ್ಯಾಸಕರು ಡಾಕ್ಟರೇಟರ್ ಪದವಿ ಪಡೆದಿದ್ದು ನಮ್ಮ ಅರಕೇರಾ ತಾಲೂಕಿಗೆ ಹೆಮ್ಮೆಯ ವಿಷಯವಾಗಿದ್ದು ಇವರ ಈ ಸಾಧನೆ ನಮ್ಮ ಗ್ರಾಮೀಣಾ ಪ್ರದೇಶದ ಯುವ ಜನತೆಗೆ ಸ್ಪೂರ್ತೀಯಾಗಲಿ ಎಂದರು.
ವೆಂಕಟೇಶ ನಾಯಕ ದೊರೆ ಅರಕೇರಾ ಬಿಜೆಪಿ ನಗರ ಘಟಕ ಅಧ್ಯಕ್ಷರು ಗೌರವ ಡಾಕ್ಟರೇಟರ್ ಪದವಿ ಪಡೆಯುವದು ಸುಲಭ ಮಾರ್ಗವಲ್ಲ,ಮೇಲಾಗಿ ಇದಕ್ಕಾಗಿ ವಿಶೇಷ ಸಂಶೋಧನೆ ಮತ್ತು ಕಠಿಣ ಪರಿಶ್ರಮ ಹಾಗೂ ವಿಷಯ ಮಂಡನೆಯ ಆಧಾರದ ಮೇಲೆ ಡಾಕ್ಟರೇಟರ್ ಪದವಿ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಮುಖಂಡರಾದ ಸತ್ಯನಾರಾಯಣನಾಯಕ ಪೋಲಿಸ್ ಪಾಟೀಲ್. ಕೆ.ಭಗವಂತ್ರಾಯನಾಯಕ. ಸೀತಣ್ಣನಾಯಕ ಗುರಿಕಾರ, ಹನುಮಂತ್ರಾಯ ಪೂಜಾರಿ,ಜಾವೀದ್ ಆರ್ ಚಿಂಚೋಳಿಕರ್. ಪ್ರಾಚಾರ್ಯರಾದ ಬುದ್ದಿವಂತಿ,ಮೋನಪ್ಪ ಅರಕೇರಾ ತಾಲೂಕು ಅಧ್ಯಕ್ಷರು ಬಂಜಾರ ಸಮಾಜ ಹಾರೂನ್ ಅರಕೇರಾ ಮಂಡಲದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ,ನಾಗರಾಜಕರ್ನಾಳ,,ರವಿನಾಯಕ, ತನುಜಕುಮಾರ ಕುರುಕುಂದಿ,ಅಬ್ದುಲ್ ಮಾಜಿಧ್,ದೇವಿಂದ್ರನಾಯಕ ಜುಟ್ಟಮರಡಿ. ವೆಂಕಟೇಶನಾಯಕ ಕರ್ನಾಳ. ಬೀಮಣ್ಣನಾಯಕ ಕೊಣಚಪ್ಪಳಿ.ವಿಶ್ವನಾಥ ಹೋಸಮನಿ,ಬೀಮಣ್ಣನಗರ, ತಿಮ್ಮಣ್ಣ ಗುರಿಕಾರ,ವಿರೇಶಬೇರಿ, ಬಸವ ಉಪ್ಪಾರ,ಯಲ್ಲಪ್ಪ ಕರ್ನಾಳ ಸುರೇಶ,ಸಂಗಮೇಶ ಬಂಡೆಗುಡ್ಡ, ರಮೇಶ ಪವಾರ, ಬೂದೇಪ್ಪ ರಮೇಶ ಪವಾರ ಸೇರಿದಂತೆ ಕೆ,ಶಿವನಗೌಡನಾಯಕ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.ಸ್ವಾಗತ ಬುದ್ದಿವಂತಿ ಪ್ರಾಚಾರ್ಯರು ಪ್ರಾಸ್ತವಿಕ ನುಡಿ ಆಂಜನೇಯ್ಯ ಉಪನ್ಯಾಸಕರು ನಿರೂಪಸಿ,ಕೊನೆಯಲ್ಲಿ ಸರ್ವರ್ ಖಾನ್ ವಂದಿಸಿದರು.
ಅರಕೇರಾ ಪಟ್ಟಣದಲ್ಲಿನ ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗೌರವ ಡಾಕ್ಟರೇಟರ್ ಪದವಿ ಪಡೆದಿರುವ ಇಂಗ್ಲೀಷ ಉಪನ್ಯಾಸಕರಾದ ಮಂಜುನಾಥ ಇವರಿಗೆ ಕೆ.ಶಿವನಗೌಡನಾಯರವರ ಅಭಿಮಾನಿ ಬಳಗದವತಿಯಿಂದ ಹಮ್ಮಕೊಂಡಿದ್ದ ಅಭಿನಂದಾನ ಸಮಾರಂಭದಲ್ಲಿ ಸನ್ಮಾನಿಸಿ ನೆನೆಪಿನಕಾಣಿಕೆ ನೀಡಲಾಯಿತು.

Leave a Reply

Your email address will not be published. Required fields are marked *