ಸಿಂಧನೂರು ಎ 01 – ತುಮಕೂರಿನ ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚೇತನ ಫೌಂಡೇಶನ್ ಧಾರವಾಡ ಹಾಗೂ ಗಂಧದ ಗುಡಿಸಂಘ ಬೆಂಗಳೂರು ಇವರುಗಳ ವತಿಯಿಂದ ” ತುಮಕೂರು ನುಡಿ ಸಡಗರ ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಸಿಂಧನೂರಿನ ಕಾರುಣ್ಯಾಶ್ರಮದ ಸದಸ್ಯರಾದ ಡಾ.ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಹಾಗೂ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಮತ್ತು ಸಲಹಾ ಸಮಿತಿಯ ಸದಸ್ಯರಾದ ವೀರಭದ್ರಗೌಡ ಗಿಣಿವಾರ ಇವರುಗಳಿಗೆ ” ಸಿದ್ದಗಂಗಾ ರಾಷ್ಟ್ರೀಯ ಸೇವಾ ಸ್ಪೂರ್ತಿ ” ಏನ್ವ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕವಿಗಳಾದ ಡಾ. ಜಯಪ್ಪ ಮಾತನಾಡಿ ಸಿದ್ದಗಂಗಾ ಶ್ರೀಗಳ 119ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ ಇನ್ನೆರಡು ದಿನದಲ್ಲಿ ನೆರವೇರಲಿದ್ದು. ಇಂತಹ ಒಂದು ವಿಶೇಷ ಕ್ಷೇತ್ರದಲ್ಲಿ ಹಲವಾರು ಸಾಧಕರು ಸಿದ್ದಗಂಗಾ ಶ್ರೀಗಳ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು. ನಮ್ಮೆಲ್ಲರಿಗೆ ಶ್ರೀಗಳ ಆಶೀರ್ವಾದದಂತೆ ಈ ಪ್ರಶಸ್ತಿಯನ್ನು ತಾವು ಸ್ವೀಕರಿಸುತ್ತಿದ್ದೀರಿ. ಮತ್ತು ವಿಶೇಷವಾಗಿ ರಾಯಚೂರು ಜಿಲ್ಲೆಯ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬಕ್ಕೆ ಈ ಪ್ರಶಸ್ತಿ ದೊರೆತಿರುವುದು. ಅನೇಕ ಸಾಧಕರಿಗೆ ಸ್ಪೂರ್ತಿಯಾಗಿದೆ. ಕಲ್ಪತರು ನಾಡಿನಲ್ಲಿ ಈ ವಿಶೇಷ ಪ್ರಶಸ್ತಿಯನ್ನು ಸ್ವೀಕಾರ ಮಾಡುವಂತ ಎಲ್ಲಾ ದಾನಿಗಳಿಗೆ ಶುಭವಾಗಲಿ ತಾವು ಸಮಾಜದ ಬಹುದೊಡ್ಡ ಆಸ್ತಿಯಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ಒದಗಿಸುವಂತಹ ಶುಭಾಶೀರ್ವಾದ ತಮಗೆ ದೊರೆಯಲಿ ಎನ್ನುವ ಹಾರೈಕೆ ನನ್ನದು ಎಂದು ಅರ್ಥಪೂರ್ಣವಾಗಿ ಮಾತನಾಡಿ ಎಲ್ಲಾ ಸಾಧಕರುಗಳಿಗೆ ಶುಭ ಕೋರಿದರು. ನಂತರ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ ಕಾರುಣ್ಯ ಆಶ್ರಮಕ್ಕೆ ದೊರೆತಿರುವ ಪ್ರಶಸ್ತಿಗಳು ಸನ್ಮಾನಗಳು ಗೌರವಗಳು ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಮಹಾದಾನಿಗಳಿಗೆ ಅರ್ಪಣೆ ಸಿದ್ದಗಂಗಾ ಶ್ರೀಗಳು ತಮ್ಮ ಜೋಳಿಗೆಯ ಮೂಲಕ ವಿಶ್ವ ಕಂಡಂತಹ ತ್ರಿವಿಧ ದಾಸೋಹಿ ಮೂರ್ತಿಗಳಾಗಿ ಮಾನವ ಧರ್ಮದ ನಡೆದಾಡುವ ದೇವರುಗಳಾಗಿದ್ದರು ಇಂತಹವರ ಪುಣ್ಯಭೂಮಿಯಲ್ಲಿ ಇಂತಹ ಗೌರವ ಸನ್ಮಾನಗಳು ನಮ್ಮನ್ನು ಇನ್ನೂ ಹೆಚ್ಚಿನ ಸೇವೆ ಮಾಡಲು ಆಶೀರ್ವದಿಸಿದಂತಾಗಿದೆ. ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮವು ಸಿದ್ದಗಂಗಾ ಕ್ಷೇತ್ರದ ಲಿಂಗೈಕ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಹಾಗೂ ಒಳಬಳ್ಳಾರಿಯ ಲಿಂಗೈಕ್ಯ ಶ್ರೀ ಮ.ನಿ. ಪ್ರ.ಚನ್ನಬಸವ ಮಹಾಶಿವಯೋಗಿಗಳ ಮತ್ತು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂಗೈಕ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದದಂತೆ ನಿರಂತರ ಅವರ ಧ್ಯಾನದೊಂದಿಗೆ ಕಾರುಣ್ಯ ಕುಟುಂಬದ ಸೇವೆ ಜರುಗುತ್ತಿದೆ. ನಮ್ಮ ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹಿ ಮೂರ್ತಿಗಳಾಗಿ ಅಕ್ಷರ ಅನ್ನ ಜ್ಞಾನ ದಾಸೋಹ ಮಾನವ ಧರ್ಮಕ್ಕೆ ಅರ್ಪಿಸಿದರೆ ಕಾರುಣ್ಯ ಕುಟುಂಬದ ಜೋಳಿಗೆ ಅನಾಥರಿಗೆ ತಮಗರಿವಿಲ್ಲದ ಮಾನವ ಜೀವಿಗಳಿಗೆ ಮತ್ತು ನೊಂದ ಜೀವಿಗಳಿಗೆ ನಾಡಿಮಿಡಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸೇವೆಗೆ ಸಹಾಯ ಸಹಕಾರ ಮಾಡುವ ದಾನಿಗಳೇ ನಮ್ಮ ನಡೆದಾಡುವ ದೇವರುಗಳಾಗಿದ್ದಾರೆ. ಸದಾವಕಾಲ ತಮ್ಮೆಲ್ಲರ ಹರಕೆ ಹಾರೈಕೆ ಆಶೀರ್ವಾದ ಸಿಂಧನೂರಿನ ನಿಮ್ಮೆಲ್ಲರ ಕರುಣೆಯ ಕಾರುಣ್ಯ ಕುಟುಂಬದ ಮೇಲಿರಲಿ ಎಂದು ಭಾವನಾತ್ಮಕವಾಗಿ ಮಾತನಾಡಿ ಇನ್ನುಳಿದ ಎಲ್ಲಾ ಸಾಧಕರುಗಳಿಗೆ ಅಭಿನಂದನೆಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ರಂಗಸ್ವಾಮಿ ಶಿಕ್ಷಕರು ಮತ್ತು ಸಮಾಜ ಸೇವಕರು ತುಮಕೂರು ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಉದ್ಘಾಟಕರಾಗಿ ಡಾ.ಜಯಪ್ಪ ಹೊನ್ನಾಳಿ ಮೈಸೂರು ನಾಡಿನ ಸುಪ್ರಸಿದ್ದ ಕವಿಗಳು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಗಮನಾಥ ಪಿ ಸಜ್ಜನ ಇವರ ತುಕ್ಕುಬುಕ್ಕು ರೈಲು ಮಕ್ಕಳ ಕವನ ಸಂಕಲನ ಕೃತಿಯ ಅನಾವರಣವನ್ನು ಡಾ. ಪ್ರಕಾಶ. ಗ.ಖಾಡೆ ಸಾಹಿತಿ ಸಂಸ್ಕೃತಿ ಚಿಂತಕರು ಬಾಗಲಕೋಟೆ ಇವರು ಕೃತಿ ಅನಾವರಣ ಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಬಿ.ಅಜಮುತುಲ್ಲಾ ಪ್ರಾಂಶುಪಾಲರು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು. ರಮಾ. ಆರ್.ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಬೆಂಗಳೂರು. ಎಲ್. ಐ. ಲಕ್ಕಮ್ಮನವರು ರಾಜ್ಯ ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಬೆಂಗಳೂರು. ಡಾ.ಚಂದ್ರಶೇಖರ ಮಾಡಲಗೇರಿ ಸುದ್ದಿ ಸಂಪಾದಕರು ವಿಸ್ಮಯವಾಣಿ ದಿನಪತ್ರಿಕೆ ಸಂಪಾದಕರು. ಹಾಗೂ ಸಂಸ್ಥಾಪಕರು ಚೇತನ ಫೌಂಡೇಶನ್ ಧಾರವಾಡ. ಸಂಗಮನಾಥ ಸಜ್ಜನ ಕೃತಿಕಾರರು. ಶೇಖರಪ್ಪ ವಿ. ಡಿ.ವೈ. ಎಸ್.ಪಿ. ಅಬಕಾರಿ ಇಲಾಖೆ ರಾಣೇಬೆನ್ನೂರು. ಎಂ ಆರ್ ಮಲ್ಲಿಕಾರ್ಜುನಯ್ಯ. ರಾಜ್ಯ ಕೋಶ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು. ವೀರೇಶ ಕೆ. ಎಸ್.ಸಂಚಾಲಕರು ಚೇತನ ಫೌಂಡೇಶನ್ ಧಾರವಾಡ. ಕು.ಭಾಗ್ಯಶ್ರೀ ರಜಪೂತ ಕಾರ್ಯಾಧ್ಯಕ್ಷರು ಚೇತನ ಫೌಂಡೇಶನ್ ಧಾರವಾಡ. ಚಂದ್ರಕಾಂತ ಬಿರಾದಾರ ಹಿರಿಯ ಲೇಖಕರು ಪತ್ರಕರ್ತರು ಭಾಲ್ಕಿ ಬೀದರ್. ಡಾ.ಬಿ ತೇಜಸ್ವಿ ಕಿರಣ್ ಲೇಖಕರು ಸಮಾಜ ಸೇವಕರು ತುಮಕೂರು ಅಣ್ಣಪ್ಪ ಗೌಡ ಮೇಟಿ ಗೌಡ್ರು ಸಂಪಾದಕರು ಸಂಜೆ ವಾಹಿನಿ ಮತ್ತು ಭತ್ತದ ನಾಡು ಕನ್ನಡ ದಿನಪತ್ರಿಕೆ ಮತ್ತು ಸಂಸ್ಥಾಪಕರು ಬೆಳಕು ಸಂಸ್ಥೆ ರಾಯಚೂರು. ವಿರುಪಮ್ಮ ಹಿರೇಮಠ ಶಿಕ್ಷಕರು ಜಗಳೂರು ರೋಣ. ಹಾಗೂ ಕಾರುಣ್ಯ ಆಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್. ರೇಣುಕಾ ಸ್ವಾಮಿ ಬಿ.ಎಸ್.ಎನ್.ಎಲ್.ಅಧಿಕಾರಿಗಳು ಸಿಂಧನೂರು.ಮತ್ತು ವೀರಭದ್ರಗೌಡ ಗಿಣಿವಾರ ಅಂಬು ಪಾಟೀಲ್ ರೇಖಲಮರಡಿ. ಶರಣಪ್ಪ ನಾಯಕ ಕಸಬಾ ಲಿಂಗಸೂರು. ಹಾಗೂ ಅನೇಕ ಸಾಹಿತಿಗಳು ಕವಿಗಳು ಸಾಹಿತಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *