ಜಾಲಹಳ್ಳಿ : ಗ್ರಾಮದಲ್ಲಿ ದಿನಾಂಕ 29.03.2026 ರಂದು (ರವಿವಾರ) ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪಕ್ಷಾತೀತ ಪ್ರಗತಿಪರ ರೈತರ ಒಕ್ಕೂಟ ಭರ್ಜರಿ ಜಯ ಸಾಧಿಸಿದೆ.
ಒಟ್ಟು 12 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಬಿರುಸಿನ ಮತದಾನ ನಡೆಯಿತು. ಬಳಿಕ ಸಂಜೆ 4:30ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ, ರಾತ್ರಿ 8:30ಕ್ಕೆ ಬಹುತೇಕ ಎಲ್ಲಾ ಫಲಿತಾಂಶಗಳು ಪ್ರಕಟವಾಗಿವೆ.
ಈ ಚುನಾವಣೆಯಲ್ಲಿ ಪಕ್ಷಾತೀತ ಪ್ರಗತಿಪರ ರೈತರ ಒಕ್ಕೂಟವು 10 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದೆ.
🏆 ಗೆಲುವು ಸಾಧಿಸಿದ ಅಭ್ಯರ್ಥಿಗಳು
ಸಾಲಗಾರರ ಕ್ಷೇತ್ರ:
1. ಖುರಸಿದ್ ಪಟೇಲ್ – ಸಾಮಾನ್ಯ ಕ್ಷೇತ್ರ
2. ಶಿವಬಸಪ್ಪ ರಾಮ್ ಪಾಳಿ – ಸಾಮಾನ್ಯ ಕ್ಷೇತ್ರ
3. ಶಿವರಾಜ್ ವಿಭೂತಿ – ಸಾಮಾನ್ಯ ಕ್ಷೇತ್ರ
4. ಗಿರೀಶ್ ಮಾಲಿ ಪಾಟೀಲ್ – ಸಾಮಾನ್ಯ ಕ್ಷೇತ್ರ
5. ನವೀನ್ ಪಾಟೀಲ್ – ಸಾಮಾನ್ಯ ಕ್ಷೇತ್ರ
6. ಈಶಣ್ಣ ಕಾಟಮಳ್ಳಿ – ಪರಿಶಿಷ್ಟ ಜಾತಿ ಕ್ಷೇತ್ರ
7. ಗೋವಿಂದಪ್ಪ ಹಲಗೇರಿ – ಪರಿಶಿಷ್ಟ ಪಂಗಡ ಕ್ಷೇತ್ರ
8. ವೆಂಕೂಬ ಪೂಜಾರಿ – ಹಿಂದುಳಿದ ವರ್ಗ ಕ್ಷೇತ್ರ
9. ಅಮರೆಗೌಡ ಪೊಲೀಸ್ ಪಾಟೀಲ್ – ಹಿಂದುಳಿದ ವರ್ಗ (ಬಿ) ಕ್ಷೇತ್ರ
10. ಶ್ರೀಮತಿ ಶಾಂತಮ್ಮ ಜಂಬಲದಿನ್ನಿ – ಮಹಿಳಾ ಕ್ಷೇತ್ರ
11. ಶ್ರೀಮತಿ ಸರಸ್ವತಿ ನಾಡಗೌಡ – ಮಹಿಳಾ ಕ್ಷೇತ್ರ
ಸಾಲಗಾರರಲ್ಲದ ಕ್ಷೇತ್ರ:
12) ವೆಂಕೋಬ ಯರಕಮಟ್ಟಿ – ಸಾಮಾನ್ಯ ಕ್ಷೇತ್ರ
ಚುನಾವಣೆ ಅಧಿಕಾರಿಯಾಗಿರುವ ಅಂಬರೀಶ್ ಹಾಗೂ ಸಿಬ್ಬಂದಿ ವರ್ಗದವರು ಮತದಾನಕ್ಕೆ ಹಾಗೂ ಮತ ಎಣಿಕೆಗೆ ಸೂಕ್ತ ವ್ಯವಸ್ಥೆ ಮಾಡಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿದರು, ಜಾಲಹಳ್ಳಿ ಪಿಎಸ್ಐ ಆಗಿರುವ ವೈಶಾಲಿ ಜಳಕಿಯವರು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿ ಚುನಾವಣೆಯನ್ನ ಯಶಸ್ವಿ ಪೂರೈಸಿದರು
ವಿಜಯೋತ್ಸವ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ವೀರಣ್ಣ ಬಳೆ ಸಾಹುಕಾರ್ ಮಾತನಾಡಿ,
“ರೈತರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ರೈತ ಬಾಂಧವರ ಅಪಾರ ಬೆಂಬಲದಿಂದ 10 ಸ್ಥಾನಗಳನ್ನು ಗೆದ್ದಿದ್ದೇವೆ. ಸಂಪೂರ್ಣ ಬಹುಮತ ನೀಡಿದ ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದು ಹೇಳಿದರು.
ಅವರು ಮುಂದುವರೆದು,
“ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದೇ ನಮ್ಮ ಮುಖ್ಯ ಗುರಿ,” ಎಂದು ತಿಳಿಸಿದ್ದಾರೆ.
ಈ ವಿಜಯೋತ್ಸವದಲ್ಲಿ ವೀರಣ್ಣ ಬಳೆ ಸಾಹುಕಾರ್, ಅಮರೇಶ್ ಪಾಟೀಲ್, ಶಿವು ಪಾಣಿ ಸಾಹುಕಾರ್, ರಾಮನಗೌಡ ಕರಡಿಗುಡ್ಡ ಮುರಳಿಧರ್ ಬಾಗುರು,ಡಾಕ್ಟರ್ ವೀರನಗೌಡ ಹೇರುಂಡಿ, ಕಾಂತಯ್ಯ ಸ್ವಾಮಿ ಏರುಂಡಿ, ಭೀಮಣ್ಣ ನಾಡಗೌಡ ಚಿಂಚೋಡಿ ಅಯ್ಯಣ್ಣ ಬಂಕಲ್ ದೊಡ್ಡಿ, ಶಂಕರ್ ಗೌಡ ಮಾಲಿ ಪಾಟೀಲ್, ರಂಗಣ್ಣ ಮಾಸ್ಟರ್ ಬಂಕಲ್ ದೊಡ್ಡಿ ಕರಿಯಪ್ಪ ಮುಂಕಲದೊಡ್ಡಿ, ಚೆನ್ನಮ್ಮಮಠ ತಾತ, ರಂಗನಾಥ ಮಾಕಾಶಿ, ಚಂದಪ್ಪ ಬುದ್ದಿನ್ನಿ, ಗೌಡಪ್ಪ ವಡ್ಡರ್, ರಮೇಶ್ ಆನ್ವರಿ, ಗಂಗಪ್ಪ ತಗ್ಗಳ್ಳಿ, ಆನಂದ್ ಪಾಟೀಲ್ ಮದುರಂಗಪ್ಪ ವಟರ್, ಅಮರಣ್ಣ ಲಿಂಗದಳ್ಳಿ ಮಾಳಪ್ಪ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೀರೇಶ ಅರಕೇರಿ ಹಾಗೂ ಸದಸ್ಯರಾದ ಸಲಭಣ್ಣ ಹಂಪರಗುಂದಿ ಮತ್ತು ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.


