ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಬಂಧುಗಳು ಮತ್ತು ವನಸಿರಿ ಫೌಂಡೇಷನ್ ಸಹಯೋಗದಲ್ಲಿ ವಿಶ್ವಕರ್ಮ ಬಂಧುಗಳ ಆರತಕ್ಷತೆ ಸಮಾರಂಭದಲ್ಲಿ 501 ಸಸಿ ವಿತರಣೆ ಮತ್ತು ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲಾಯಿತು.

ಪರಿಸರ ಜಾಗೃತಿಯು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ಮಾಲಿನ್ಯ ತಡೆಯಲು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಅತ್ಯಗತ್ಯವಾಗಿದೆ.ಇದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದ್ದು,ಶಿಕ್ಷಣ,ಮರ ನೆಡುವಿಕೆ,ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಸಾಮಾಜಿಕ ಮೌಲ್ಯಗಳಾದ ಜವಾಬ್ದಾರಿಯುತ ನಡವಳಿಕೆಯ ಮೂಲಕ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದನ್ನು ಒಳಗೊಂಡಿದೆ.”ಕಾಡಿದ್ದರೆ ನಾವು,ನಾವಿದ್ದರೆ ನಾಡು” ಎಂಬ ತತ್ವದ ಅಡಿಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ,ಜಲಮೂಲಗಳ ರಕ್ಷಣೆ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ ಮಾಡುವುದು ಪರಿಸರ ಸಂರಕ್ಷಣೆಯ ಜವಾಬ್ದಾರಿಯಾಗಿದೆ.ಎಂದು ಚನ್ನಪ್ಪ ವಿಶ್ವಕರ್ಮ ತಿಳಿಸಿದರು.

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಚನ್ನಪ್ಪ ವಿಶ್ವಕರ್ಮ ಅವರು ಶ್ರಮಿಕರಿಗೆ ನೆರಳಾಗಲೆನ್ನುವ ಆಶಯದೊಂದಿಗೆ ವಿಶ್ವಕರ್ಮ ಬಂಧುಗಳ ಆರತಕ್ಷತೆ ಸಮಾರಂಭದಲ್ಲಿ 501 ಸಸಿಗಳ ವಿತರಣೆ ಮಾಡಿ ಪರಿಸರ ಸ್ನೇಹಿಯಾಗಿ ಸಸಿ ನೆಡುವ ಮೂಲಕ ಆಚರಿಸುವುದಾಗಿ ಜೊತೆಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ಕೂಡಾ ನೀರಿನ ಅಹಕಾರ ಇರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿದರು.

ವಿನೂತನವಾಗಿ ವಿವಾಹವಾಗುತ್ತಿರುವ ಸಂಗೀತಾ ಜೊತೆ ಶ್ರೀನಾಥ ಅವರ ಆದರ್ಶವಾಗಿ ಪರಿಸರ ಪ್ರೇಮಿಯಾಗಿ ಆಚರಿಸುತ್ತಿರುವುದು ಗ್ರಾಮದಲ್ಲಿ ನಡೆದ ವಿಶೇಷ ಪ್ರಯತ್ನ ಎನ್ನಬಹುದಾಗಿದೆ.
ಇದೇ ವೇಳೆ ಮಹಿಳೆಯರು ಪರಿಸರ ಪ್ರೇಮಿಗಳು ಅತ್ಯಂತ ಉತ್ಸಾಹದಿಂದ ಸಸಿಗಳನ್ನು ಕೊಂಡೋಯ್ದರು.ಈ ಕಾರ್ಯಕ್ರಮವು ಸರಳ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ನಡೆಯಿತು. ಪರಿಸರವನ್ನ ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ಮುಗ್ಧ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ಗುರುಹಿರಿಯರು,ವನಸಿರಿ ಪೌಂಡೇಷನ್ ಸದಸ್ಯರು,ಗ್ರಾಮ ಪಂಚಾಯತ ಸದಸ್ಯರು,ಕುಟುಂಬದ ಸದಸ್ಯರು,ಕುಟುಂಬ ಹಿತೈಷಿಗಳು, ಊರಿನ ಹಿರಿಯರು, ಶ್ರೀ ಶರಣಬಸವೇಶ್ವರ ಯುವಕ ಮಂಡಳಿ ಸದಸ್ಯರು,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *