ರಾಯಚೂರು ಮಾರ್ಚ್ 27 (ಕರ್ನಾಟಕ ವಾರ್ತೆ): ಜಿಲ್ಲೆಯ ಮಾನವಿ ಪಟ್ಟಣದ ಪುರಸಭೆಯಿಂದ 2026-27ನೇ ಸಾಲಿಗಾಗಿ ಶೇ.7.25 ಯೋಜನೆಯಡಿ ಇತರೆ ಜನಾಂಗದವರಿಗೆ ಎಸ್.ಎಫ್.ಸಿ. ಅನುದಾನದಲ್ಲಿ ಶಸ್ತ್ರ ಚಿಕಿತ್ಸೆ ಒಳಪಟ್ಟ ರೋಗಿಗಳಿಗೆ ಸಹಾಯ ಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು, ಅರ್ಜಿಯೊಂದಿಗೆ 2 ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್, ಆಸ್ಪತ್ರೆಯಲ್ಲಿ ಅಡಮಿಟ್ ಆದ ಮತ್ತು ಡಿಸ್ಚಾರ್ಜ ಆದ ಕಾರ್ಡಗಳು, ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ವೈದ್ಯಕೀಯ ಎಕ್ಸ-ರೇ, ಸ್ಕ್ಯಾನಿಂಗ್, ರಕ್ತಪರೀಕ್ಷೆಗಳ ದಾಖಲೆಗಳು, ಜಿಲ್ಲಾ ಅಥವಾ ತಾಲ್ಲೂಕು ಸರಕಾರಿ ವೈಧ್ಯಿಕಾರಿಗಳಿಂದ ದೃಢೀಕರಣ ಪತ್ರ, ವೈದ್ಯಕೀಯಕ್ಕೆ ಸಂಬಂಧಿಸಿದ ಬಿಲ್‌ಗಳು, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಏಪ್ರಿಲ್ 15 ರೊಳಗಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *