ರಾಯಚೂರು ಮಾರ್ಚ 25 (ಕ.ವಾ.): ರಾಯಚೂರು ಪ್ರವಾಸದಲ್ಲಿ ಮಾರ್ಚ 25ರಂದು ವಿವಿಧೆಡೆ ಭೇಟಿ ಕೈಗೊಂಡ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸಂಜೆ 6 ಗಂಟೆ ವೇಳೆಗೆ ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ಖುದ್ದು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆ ಪ್ರವೇಶದ ವೇಳೆ, ಒಬ್ಬ ರೋಗಿಯು ಟ್ರಾಲಿ ಮೇಲೆ, ಮತ್ತೊಬ್ಬರು ನೆಲದ ಮೇಲೆ ಮಲಗಿರುವುದನ್ನು
ಅಧ್ಯಕ್ಷರು ಹಾಗೂ ಸದಸ್ಯರು ನೋಡಿ, ರೋಗಿಗಳ ಅಹವಾಲು ಆಲಿಸಿದರು. ನಾವು ನೆನ್ನೆಯೇ ಬಂದಿದ್ದೇವೆ. ಇದುವರೆಗೆ ಬೆಡ್ ನೀಡಿಲ್ಲ. ಮರುದಿನ ಬೆಳಗ್ಗೆ ರಕ್ತ ಪರೀಕ್ಷೆ ಮಾಡಿದ್ದಾರೆ ಎಂದು ರೋಗಿಯೊಬ್ಬರು ತಿಳಿಸಿದರು.
ಇದುವರೆಗೆ ಯಾಕೆ ಬೆಡ್ ನೀಡಿಲ್ಲ? ಈ ರೀತಿ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರ ಕಾರ್ಯವೈಖರಿಗೆ
ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.ರಿಮ್ಸ್ ನಿರ್ದೇಶಕರಾದ ಡಾ.ರಮೇಶ, ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಸಾಗರ್ ಅವರು ಆಗಮಿಸಿ ಆಯೋಗಕ್ಕೆ ಮಾಹಿತಿ ನೀಡಿದರು. ಈ ವೇಳೆ ಡಾ.ಮುರಳೀರಾವ್, ಡಾ.ಗೋಪಿನಾಥ, ಡಾ.ಮಂಜುನಾಥ ಹಟ್ಟಿ, ಡಾ.ವೀರೇಶ ಇದ್ದರು.

Leave a Reply

Your email address will not be published. Required fields are marked *