ಮಸ್ಕಿ: ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮಾ.೨೫ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿ ಸಮಾವೇಶಕ್ಕೆ ತಾಲೂಕಿನಿಂದ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಛಲವಾದಿ ಮಹಾಸಭಾದ ತಾಲೂಕಾಧ್ಯಕ್ಷ ಮೌನೇಶ ದೊಡ್ಮನಿ ಅಮೀನಗಡ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನ್ಯಾಯಮೂರ್ತಿ ನಾಗಮೋಹನ್‌ದಾಸ ಆಯೋಗದ ಅವೈಜ್ಞಾನಿಕ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು. ಆದ್ದರಿಂದ ಮಾ.೨೫ ರಂದು ಹಮ್ಮಿಕೊಂಡಿರುವ ಬಲಗೈ ಸಮುದಾಯದ ಬೃಹತ್ ರ‍್ಯಾಲಿ ಸಮಾವೇಶಕ್ಕೆ ತಾಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿಗೂ ತೆರಳಿ ಜಾಗೃತಿ ಮೂಡಿಸಿದ್ದೇವೆ. ಮಾ.೨೪ ರಂದು ಬೆಂಗಳೂರಿಗೆ ತಾಲೂಕಿನಿಂದ ಸುಮಾರು ೫೦೦ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಮಸ್ಕಿ ಸಾರಿಗೆ ಇಲಾಖೆ ಘಟಕದಿಂದ ಈಗಾಗಲೇ ೨ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಈ ರ‍್ಯಾಲಿ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಾಗಮೋಹನ್‌ದಾಸರ ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿ ರ‍್ಯಾಲಿ ಸಮಾವೇಶಯನ್ನು ಯಶ್ವಸಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಮಲ್ಲಪ್ಪ ಗೋನಾಳ, ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಹಸಮಕಲ್, ಶಿವರಡ್ಡಿ ಕಟ್ಟಿಮನಿ, ನೀಲಕಂಠಪ್ಪ ರಂಗಾಪೂರ ಇದ್ದರು.

