ಮಾನ್ವಿ : ದೇಶದಲ್ಲಿ ಅನೇಕ ಮಹಾತ್ಮರು, ಸಾಧು ಸಂತರು ಹುಟ್ಟಿ ವಿಚಾರಗಳನ್ನು ಸಾರಿದರೂ, ಬಾಬಾಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿ ಸ್ವತಃ ಅವಮಾನ ಮತ್ತು ನೋವುಗಳನ್ನು ಅನುಭವಿಸಿ, ಬಹುಜನರು ಘನತೆ ಮತ್ತು ಗೌರವದಿಂದ ಬದುಕಲು ಸಂವಿಧಾನಬದ್ಧ ಹಕ್ಕುಗಳನ್ನು ನೀಡಿದ ಶೋಷಿತರ ವಿಮೋಚಕ ಎಂದು ಬಹುಜನ ಸಂಘರ್ಷ ಸಮಿತಿ ರಾಯಚೂರು ಜಿಲ್ಲಾಧ್ಯಕ್ಷ ಸಂಪತ್ತುರಾಜ್ ಜಾಗೀರಪನ್ನೂರ ಹೇಳಿದರು. ಅವರು ತಾಲೂಕಿನ ಮದ್ಲಾಪೂರ ಗ್ರಾಮದ ಬಿ.ರಾಣಿ–ಭೀಮಣ್ಣ ಅವರ ಮನೆಯಲ್ಲಿ ಸೋಮವಾರ ಆಯೋಜಿಸಿದ್ದ 123ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ದಲಿತರು ಮತ್ತು ಶೋಷಿತರು ಮೌಢ್ಯಗಳನ್ನು ಬಿಟ್ಟು ಉತ್ತಮ ಶಿಕ್ಷಣ ಪಡೆದು ಜಾಗೃತರಾಗಿ ಸ್ವಾಭಿಮಾನದ ಬದುಕು ನಡೆಸಬೇಕು ಎಂದು ಅವರು ಕರೆ ನೀಡಿದರು. ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆ ಮನೆಗೆ ತಲುಪಿ ಮಹಿಳೆ ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಸರಳ ರೀತಿಯಲ್ಲಿ ಅಂಬೇಡ್ಕರ್ ವಿಚಾರಗಳನ್ನು ತಲುಪಿಸುವುದು ಮಹತ್ವದ ಕಾರ್ಯವಾಗಿದ್ದು, ರಾಜ್ಯಾದ್ಯಂತ ಶೋಷಿತರ ನಿಜವಾದ ಇತಿಹಾಸವನ್ನು ಪರಿಚಯಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಾದ ಕಮಲ, ಜಯಲಲೀತಾ ಮತ್ತು ಕೀರ್ತನಾ ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿ (ಬಿ.ಕೆ. ಬಣ) ತಾಲೂಕ ಸಂಚಾಲಕ ಭೀಮಣ್ಣ ಮದ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕುಮಾರ್ ಕಾತರಕಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಯಮುನಪ್ಪ ಜಾಗೀರಪನ್ನೂರ, ಬಸವರಾಜ್ ಗವಿಗಟ್, ಮರಿಸ್ವಾಮಿ ಅಮರಾವತಿ, ಶಿವರಾಜ ಮರಾಟ, ಹುಸೇನಪ್ಪ ಜಗ್ಲಿ ಜಾಗೀರಪನ್ನೂರ, ರವಿಕುಮಾರ್ ಮದ್ಲಾಪೂರ, ಹನುಮೇಶ್, ಇಮಾನ್ ವೇಲ್, ಹುಸೇನಪ್ಪ (ಗ್ರಾಮ ಪಂಚಾಯಿತಿ ಸದಸ್ಯ), ಮಹಾದೇವ, ಬೆಂಜಮೀನ್, ಅನಿಲ್ ಕುಮಾರ್, ಎಲ್ಲೇಶ್, ಬೈಲಪ್ಪ, ನರಸಪ್ಪ, ದುರುಗಪ್ಪ ಸಾದಾಪೂರ, ಶಾಂತರಾಜ್, ಕವಿತಾ, ಸುಮಂಗಲ, ಲಲಿತಮ್ಮ ಮದ್ಲಾಪೂರ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *