ಮಾನವಿ: ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ವಿ ನಗರದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದ ಮುಂಭಾಗದಲ್ಲಿ ನಡೆದ ಈದ್ ಸಂಭ್ರಮ ಭಕ್ತಿಭಾವ, ಸಂತೋಷ ಮತ್ತು ಸಹೋದರತ್ವದ ವಾತಾವರಣದಲ್ಲಿ ನೆರವೇರಿತು. ಬೆಳಗಿನ ನಮಾಜ್ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಾಸಕ ಜಿ. ಹಂಪಯ್ಯ ನಾಯಕ್ ಸಾಹುಕಾರ್ ಅವರು ಮಾತನಾಡಿ, ರಂಜಾನ್ ಹಬ್ಬವು ತ್ಯಾಗ, ಸಹನೆ ಮತ್ತು ದಾನ ಧರ್ಮಗಳ ಮಹತ್ವವನ್ನು ಸಾರುವ ಮಹತ್ತರ ಹಬ್ಬವಾಗಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಎಲ್ಲ ಸಮುದಾಯದ ಜನರು ಒಂದಾಗಿ ಹಬ್ಬವನ್ನು ಆಚರಿಸುತ್ತಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವಾಗಿದ್ದು, ಇದು ನಮ್ಮ ದೇಶದ ಏಕತೆಯ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಚಿವ ಎನ್ಎಸ್ ಬೋಸರಾಜು , ಸಂಸದ ಕುಮಾರ್ ನಾಯಕ್, ಹಾಗೂ ವಿವಿಧ ರಾಜಕೀಯ, ಸಾಮಾಜಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು, ತಾಲೂಕ ದಂಡಾಧಿಕಾರಿಗಳಾದ ಭೀಮರಾಯ ರಾಮಸಮುದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದರಾಮಯ್ಯ ನೀರ್ (ಮಾನ್ವಿ), ಎ. ಬಾಲಸ್ವಾಮಿ ಕೊಡಲಿ, ಗೌಡ್ರು ಮಹಾಂತೇಶ್ ಸ್ವಾಮಿ, ಶಾಸಕರ ಸುಪುತ್ರರಾದ ಶಿವರಾಜ್ ನಾಯಕ ವಕೀಲರು, ರಾಜ ಸುಭಾಷ್ ಚಂದ್ರ ನಾಯಕ್, ರಾಜಶೇಖರ್ ಪಾಟೀಲ್ ಜಾನೇಕಲ್, ರೇವಣಸಿದ್ದಯ್ಯ ಸ್ವಾಮಿ, ಹುಸೇನಪ್ಪ ಜಗಲಿ, ಡಿ. ರಾಮಕೃಷ್ಣ, ಶಂಕರ್ ಜಗಲಿ, ರವಿ ಪುಟ್ಟು, ಪ್ರವೀಣ್ ಕುಮಾರ್, ಪ್ರೀತಮ್ ಕೊಡ್ಲಿ, ಚಂದ್ರಶೇಖರ್ ಕಾಜಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ಹಂಚಿಕೊಳ್ಳಲಾಗಿದ್ದು, ಎಲ್ಲರೂ ಪರಸ್ಪರ ಸ್ನೇಹಭಾವದಿಂದ ಒಂದಾಗಿ ಹಬ್ಬವನ್ನು ಆಚರಿಸಿದರು. ಈದ್ ಹಬ್ಬವು ಧರ್ಮಗಳ ಮಧ್ಯೆ ಪ್ರೀತಿ, ನಂಬಿಕೆ ಮತ್ತು ಬಾಂಧವ್ಯವನ್ನು ಬಲಪಡಿಸುವ ಪವಿತ್ರ ಕ್ಷಣವಾಗಿ ಈ ಕಾರ್ಯಕ್ರಮವು ಎಲ್ಲರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿತು.

Leave a Reply

Your email address will not be published. Required fields are marked *