ಅರಕೇರಾ: ತಾಲೂಕು ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಅದರಲ್ಲೂ ಅರಕೇರಾ ಪಟ್ಟಣದಲ್ಲಿ ಟಿಪ್ಪುಸುಲ್ತಾನ ಕಾಲೋನಿಯ ಹತ್ತಿರದಲ್ಲಿರುವ ಹನುಮಂತ್ರಾಯ ತಂದೆ ರಾಚಪ್ಪ ಜಾಗಟಗಲ್ ಇವರ ಮನೆಯ ಹಿಂದೆ ಗಿಡಕ್ಕೆ ಕಟ್ಟಿಹಾಕಿದ ಹಸುವಿನ ಕರುವನ್ನು ಬೆಳಿಗ್ಗಿನ ಜಾವ ೪ಗಂಟೆಗೆ ಚಿರತೆ ಬಂದು ಕಚ್ಚಿ ರಕ್ತವನ್ನು ಕುಡಿದು ಕೊಂದ ಘಟನೆ ಅರಕೇರಾ ಪಟ್ಟಣದಲ್ಲಿ ಜರುಗಿದೆ
ಅರಕೇರಾ ದೇವದುರ್ಗ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಇವರ ಮನೆಯಲ್ಲಿ ಕಟ್ಟಿಹಾಕಿರುವ ಹಸುವಿನಕರುವನ್ನು ತಿನ್ನಲು ಬಂದಾಗ ಅವರ ತಾಯಿ ಸಿದ್ದಮ್ಮ ಗಂಡ ರಾಚಪ್ಪಜಾಗಟಗಲ್ ಇವರು ಹಸುವಿನಕರು ಒದ್ದಾಡುತ್ತಿರುವದನ್ನು ಶಬ್ದವನ್ನು ಮನೆಯಿಂದ ಹೊರಗಡೆ ಬಂದು ನೋಡಿದ್ದಾಳೆ ಚಿರತೆಯು ತಿನ್ನುವದನ್ನು ನೋಡಿ ಕೂಗುತ್ತಾ ಮನೆಯೊಳಗೆ ಹೋಗಿದ್ದಾಳೆ. ಕರುವನ್ನು ಅಲ್ಲಿಗೆ ಬಿಟ್ಟು ಚಿರತೆ ಹೋಡಿಹೋಗಿದೆ. ಅಕ್ಕಪಕ್ಕದ ಜನರು ಕೂಗಿರುವ ಶಬ್ದವನ್ನು ಕೆಳಿಸಿಕೊಂಡಿರುವ ಜನರು ಮನೆಯ ಹತ್ತಿರ ಗುಂಪು ಗುಂಪಾಗಿ ಬಂದು ನೋಡಿದದರು.
ಚಿರತೆಯ ಹೆಜ್ಜೆಗುರುತ್ತು ಕೂಡ ನೋಡಿ ಜನರು ಭಯಬೀತರಾದರು, ಇನ್ನೂ ಪಕ್ಕದಲ್ಲಿ ಎರಡು ಹಸುಗಳನ್ನು ಕಟ್ಟಿಹಾಕಿದರು ಅದೃಷ್ಟವಶಾತ್ ಅವುಗಳಿಗೆ ಯಾವುದೇ ತೊಂದರೆಯಾಗಿಲ್ಲ.ಮುಖ್ಯರಸ್ತೆಯ ಬದಿಯಲ್ಲಿ ಚಿರತೆ ಓಡಾಡಿರುವದಕ್ಕೆ ಆಂತಕ ತಂದಿದೆ ಇದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷö್ಯ ಕಾರಣವೆಂಬ ಗಂಬೀರ ಆರೋಪವೋ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಜಾನುವಾರುಗಳನ್ನು ತಿಂದು ಬಿಟ್ಟುಹೋದ ಮೇಲೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ.ಈಗಾಗಲೇ ಚಿರತೆಹಾವಳಿಗೆ ಹಸು,ನಾಯಿ ಬಲಿಯಾಗುತ್ತಿರುವದು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದರು.
ದಿನಾಂಕ೧೦-೩-೨೦೨೬ರಂದು ಕೆ. ಹನುಮಂತ್ರಾಯ ನಗರ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುವನ್ನು ರಾತ್ರಿ ಸಮಯದಲ್ಲಿ ಚಿರತೆ ದಾಳಿ ಮಾಡಿ ತಿಂದುಹಾಕಿದೆ. ಈ ಪ್ರದೇಶದ ಸಮೀಪದಲ್ಲಿ ಗುಡ್ಡಗಾಡು ಪ್ರದೇಶವಿದ್ದು ಹಗಲು ಅಲ್ಲಿ ವಾಸಮಾಡಿ ರಾತ್ರಿ ಆಹಾರಕ್ಕಾಗಿ ಚಿರತೆ ಹೊರಗೆಡೆ ಬರುತ್ತಿದೆ. ರಾತ್ರಿ ವೇಳೆ ಹೊಲ, ಗದ್ದೆಗಳಿಗೆ ನೀರು ಹಾಯಿಸುವುದಕ್ಕೆ ಹೋಗಲು ಜನರು ಹೆದರುತ್ತಿದ್ದಾರೆ.
ನಿಂಗನದೊಡ್ಡಿ,ಬಂಡೆ ಗುಡ್ಡ,ಗೋಲುಗುಡ್ಡ ಮೂರುಕಡೆ ಸೇರಿದಂತೆ ದೊಡ್ಡ ದೊಡ್ಡಬಂಡೆಗಳಲ್ಲಿ ಗವಿಗಳಿವೆ,ಹಗಲಿನ ವೇಳೆ ಈ ಗವಿಯಲ್ಲಿ ಚಿರತೆ ವಾಸಮಾಡುತ್ತದೆ,ಗುಡದ ಸಮೀಪದಲ್ಲಿರುವ ಜಮ್ಮೀನಿನಲ್ಲಿ ಬ್ಯಾರಗಳಲ್ಲಿ ಜಾನುವಾರುಗಳಿಗೆ ಕುಡಿಯಲು ತುಂಬಿಟ್ಟ ನೀರನ್ನುಕುಡಿದು ಚಿರತೆ ಕೂಡಿದುಹೋಗುತ್ತದೆ ಎಂದು ತೀಳಿದು ಬಂದಿದೆ.
ಅರಕೇರಾ ಪಟ್ಟಣದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೈಅಲರ್ಟ ಘೋಷಿಸಿದ್ದಾರೆ ದೇವದುರ್ಗ ಪ್ರಾದೇಶಿಕ ಅರಣ್ಯ ವಲಯದ ಅರಣ್ಯ ಅಧಿಕಾರಿ ಮಹ್ಮದ ಅಲ್ಲಾವುದ್ದಿನ ನೇತೃತ್ವದ ಜನ ತಂಡವು ಪ್ರದೇಶವನ್ನು ಪರಿಶೀಲಿಸಿದ್ದು ಚಿರತೆ ಸೆರೆ ಹಿಡಿಯಲು ಈಗಾಗಲೇ ಬೋನ್ ಮತ್ತು ಕ್ಯಾಮೆರಾ ಟ್ರಾಪ್ ಗಳನ್ನು ಅಳವಡಿಸಲಾಗಿದೆ ,ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರು ರೈತರು ಜಮ್ಮೀನಿನಲ್ಲಿ ರಾತ್ರಿ ಸಮಯದಲ್ಲಿ ಒಬ್ಬೊಬ್ಬರಾಗಿ ತಿರುಗಾಡಬಾರದು ಎಂದು ತಿಳಿಸಿದ್ದಾರೆ. ೪ಚಿರತೆ ಸೆರೆಗೆ ಬೋನುಗಳನ್ನು ಇರಿಸಿ ಕಾರ್ಯಪಡೆಯನ್ನು ರಚಿಸಿದ್ದೇವೆ ಜನರು ಭಯಪಡುವ ಬದಲು ಮುಂಜಾಗೃತಾ ಕ್ರಮಗಳನ್ನು ಪಾಲಿಸಿ,ಜೀವ ಹಾನಿಯಾಗುವುದನ್ನು ತಪ್ಪಿಸಲು ಅರಣ್ಯ ಇಲಾಖೆಯಯೊಂದಿಗೆ ಸಹಕರಿಸಬೇಕು.ಎಂದು ತಿಳಿಸಿದ್ದಾರೆ.
ಸಂದರ್ಭದಲ್ಲಿ ಅರಣ್ಯವನಪಾಲಕರಾದ ಗುದ್ದಪ್ಪ, ಸಂಗಪ್ಪ, ಹುಸೇನಬಾಷ, ಬಾಬು ಪಟ್ಟಣದ ನಿವಾಸಿಗಳಾದ ಮಂಜುನಾಥ ಗೌಡ,ಶಿವಗೇನಿ ಗುಜಪು, ವಿರೇಶಬೇರಿ,ರಂಗಪ್ಪಗಾಲಿ, ಸಾಬಣ್ಣನಾಯಕ ಮದಕಲ್, ಹನುಮಣ್ಣಗರ‍್ನಮೆಂಟ್, ಸುರೇಶಗೌಡ, ವೆಂಕಟೇಶಗೌಡ, ಅಮರೇಶಬೋವಿ, ನಾಗೇಶ, ವೆಂಕಟೇಶಸರಗಿನ,ಶಿವರಾಜ ಪಿ,ಹನುಮಂತ್ರಾಯ ಜಾಗಟಗಲ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *