ಅರಕೇರಾ :
ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಇಂದು ತ್ಯಾಗ ಮತ್ತು ಶಾಂತಿಯ ಸೌಹಾರ್ದತೆಯ ಪ್ರತಿಕ,ಸಹೋದರತೆ ಸಮಾನತೆ ಪರೋಪಕಾರ ಸಂದೇಶ ಸಾರುವ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ ಹಬ್ಬವನ್ನು ಇಂದು ಬಿ.ಗಣೇಕಲ್ ನ ಮುಸ್ಲಿಂ ಸಮುದಾಯದವರು ಅತ್ಯಂತ ವಿಜೃಂಬಣೆಯಿಂದ ಆಚರಿಸಿದರು.

ಮುಂಜಾನೆ ಕೇಂದ್ರ ಸ್ಥಾನ ಮಸೀದಿಯಿಂದ ಪ್ರಮುಖ ಬೀದಿಗಳಲ್ಲಿ ಧರ್ಮ ಪಠಣ ಗೀತೆಗಳನ್ನು ಜಪ ಮಾಡುತ್ತಾ ಕಾಲ್ನಡಿಗೆ ಮುಖಾಂತರ ಈದ್ಗಾವರೆಗೆ ತಲುಪಿದರು ನಂತರ ಎಲ್ಲಾ ಮುಸ್ಲಿಂ ಬಾಂಧವರಿಗೆ ಮೌಲ್ವಿಯವರಿಂದ ರಂಜಾನ್ ಹಬ್ಬವು ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಈ ರಂಜಾನ್ ತಿಂಗಳಲ್ಲಿ ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಕೆಟ್ಟ ವಿಚಾರಗಳನ್ನು ಕೆಟ್ಟ ಕೆಲಸಗಳನ್ನು ಮಾಡದಿರುವುದು ಅದೆ ರೀತಿ ನಮ್ಮ ಸುತ್ತಮುತ್ತಲೂ ಇರುವ ಎಲ್ಲ ಸರ್ವ ಧರ್ಮದ ಜನಾಂಗವನ್ನು ಸಹೋದರತ್ವದ ಭಾವನೆಯಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸಾಗುವುದು ರಂಜಾನ್ ಹಬ್ಬದ ಪ್ರಧಾನ ತಿರುಳಾಗಿದೆ ಎಂದು ಧರ್ಮ ಭೋಧಕರಾದ ಎಂ.ಡಿ ಮಸೂದ್ ಭೋಧನೆ ನೀಡಿದರು.

ಇಸ್ಲಾಂ ಧರ್ಮವು ಮುಖ್ಯವಾಗಿ ಐದು ಪ್ರಮುಖ ಮೂಲತತ್ವಗಳನ್ನು ಪ್ರತಿಪಾದಿಸುತ್ತದೆ. ಅವುಗಳೆಂದರೆ, ನಿರಾಕಾರನಾದ ಏಕದೇವನಲ್ಲಿ ಹಾಗೂ ಅವನ ಪ್ರವಾದಿಯಲ್ಲಿ ವಿಶ್ವಾಸವಿಡುವುದು. ದಿನದ ಐದು ಹೊತ್ತು ತಪ್ಪದೇ ನಮಾಜ್ ಮಾಡುವುದು. ಪ್ರತಿಯೊಬ್ಬ ವ್ಯಕ್ತಿ ತಾನು ವರ್ಷವಿಡೀ ದುಡಿದು ಗಳಿಸಿದ ಸ್ವತ್ತು, ಸಂಪತ್ತಿನಲ್ಲಿ ಶೇ 2.5ರಷ್ಟು ಮೊತ್ತವನ್ನು ಬಡವರಿಗೆ, ಸಾಲದಲ್ಲಿ ಮುಳುಗಿದವರಿಗೆ, ಅಸಹಾಯಕರಿಗೆ ದಾನ (ಝಕಾತ್) ಮಾಡುವುದು. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಒಂದು ತಿಂಗಳು ಉಪವಾಸ (ರೋಜಾ) ಆಚರಿಸುವುದು ಮತ್ತು ಆರ್ಥಿಕವಾಗಿ ಅನುಕೂಲತೆಗಳಿದ್ದರೆ ಬದುಕಿನಲ್ಲಿ ಒಂದು ಸಲ ಹಜ್ ಯಾತ್ರೆಯನ್ನು ಕೈಗೊಳ್ಳುವುದು.
ರಂಜಾನ್ ಇದು ವಿಶ್ವದಾದ್ಯಂತ ಇಸ್ಲಾಂ ಧರ್ಮೀಯರು ಖುಷಿಯಿಂದ ಆಚರಿಸುವ ಹಬ್ಬವಾಗಿದೆ ಕಠಿಣ ಉಪವಾಸದ ಮೂಲಕ ಎಲ್ಲರೂ ರಂಜಾನ್ ಮಾಸವನ್ನು ಬಹಳ ಶೃದ್ಧಾ ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ ಎಂದು ರಂಜಾನ್ ಕುರಿತು ವಿಶೇಷ ಭೋಧನೆ ನೀಡಿದರು.

ನಂತರ ಮುಸ್ಲಿಂ ಬಾಂಧವರೆಲ್ಲ ಸೇರಿ ನಮಾಜ್ ಮಾಡುವ ಮುಖಾಂತರ ವಿಶೇಷ ಪಾರ್ಥನೆ ಸಲ್ಲಿಸಿ ನಂತರ ಗ್ರಾಮದ ಸರ್ವ ಜನಾಂಗದವರಿಗೆ ಅಪ್ಪುಗೆ ನೀಡಿ ಹಸ್ತಲಾಘವ ನೀಡುವ ಮುಖಾಂತರ ರಂಜಾನ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಾದ ಅಹ್ಮದ ಸಾಬು ಸಯ್ಯದ ಸಾಬು ಹಮಿದ್.ಕೆ.ಎಸ್ ಜೈರುದ್ದಿನ್ ನದಿಮ್ ಸಾಬು ಸೋಫಿಸಾಬು ಸದ್ದಾಂ ಹುಸೇನ್ ನನ್ನೆಸಾಬು ಇಸ್ಮಾಯಿಲ್ ಕಮಲಸಾಬು ಕಾಸಿಂಸಾಬು ಅಬ್ದುಲ್ ಸಾಬು ಬಂದೆಸಾಬು ಹಾಜಿಸಾಬು ಅಲ್ಲಿಸಾಬು ಸದ್ದಾಂ ಹುಸೇನ್ ಹಾಗೂ ಯುವಕರು ಭಾಗವಹಿಸಿದ್ದರು.

ಹಿಂದೂ ಮುಸ್ಲಿಂ ಬಾವೈಕ್ಯ ಮೆರೆಯುವ ಹಬ್ಬ ರಂಜಾನ ಹಬ್ಬವಾಗಿದೆ ಈ ಹಬ್ಬವು ಎಲ್ಲಾ ಸರ್ವಧರ್ಮಿಯರಿಗೆ ದೇವರು ಒಳಿತನ್ನು ಮಾಡಲಿ ವಿಶೇಷವಾಗಿ ನಮ್ಮ ದೇಶ ಶಾಂತಿ ಸೌಹರ್ದತೆಯ ತವರುಮನೆ ದೇಶದಲ್ಲಿ ಶಾಂತಿ ನೆಲಸಲಿ ವಿಶೇಷವಾಗಿ ಕಾಲಕಾಲಕ್ಕೆ ಮಳೆ ಬೆಳೆ ಬೆಳೆಯುವ ಮೂಲಕ ರೈತರ ಬದುಕು ಹಸನಾಗಲಿ ಸಮಸ್ತ ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಷಯಗಳು.
ಸಯ್ಯದಸಾಬು ಬಿ.ಗಣೇಕಲ್

Leave a Reply

Your email address will not be published. Required fields are marked *