ರಾಯಚೂರು : ಮಾ 20 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಅಬ್ದುಲ್ ಜಬ್ಬಾರ್ ಅವರ ಆದೇಶದ ಮೇರೆಗೆ, ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್ ಅವರ ಶಿಫಾರಸ್ಸಿನ ಆಧಾರದ ಮೇಲೆ, ಮೊಹಮ್ಮದ್ ಮುಜಾಹಿದ್ ಮರ್ಚೆಡ್ ಅವರನ್ನು ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ನೂತನವಾಗಿ ಜವಾಬ್ದಾರಿ ವಹಿಸಿಕೊಂಡ ಮುಜಾಹಿದ್ ಮರ್ಚೆಡ್ ಅವರು ತಮ್ಮ ಬೆಂಬಲಿಗರೊಂದಿಗೆ ಶಾಸಕ ಬಸನಗೌಡ ದದ್ದಲ್ ಅವರನ್ನು ಭೇಟಿಯಾಗಿ ಯುಗಾದಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಾಸಕ ದದ್ದಲ್ ಅವರು ಎಲ್ಲರಿಗೂ ಮುಂಚಿತವಾಗಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಮೊದಲು ಮುಜಾಹಿದ್ ಮರ್ಚೆಡ್ ಅವರು ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಪಕ್ಷನಿಷ್ಠೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಶಾಸಕ ದದ್ದಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೈಯದ್ ಸಾಬ್ ಮನ್ಸಲಾಪೂರು, ಬಷೀರ್ ಅಹ್ಮದ್ ಹಳ್ಳಿ, ಎಪಿಎಂಸಿ ಉಪಾಧ್ಯಕ್ಷರು, ಮಲ್ಲಿಕಾರ್ಜುನ ನಾಯಕ್, ಡಾ. ತಬರೇಜ್, ಸಾದಿಕ್ ಕಾಡ್ಲೂರು, ದೌಲತ್ ಗಣಮೂರು, ಮಹೇಬೂಬ್ ಮರ್ಚೆಡ್, ಗೌಸ್ ಪಟೇಲ್, ಬಾಬು ಖಾದ್ರಿ, ಮಾಸೂಮ್ ಶರೀಫ್, ಮೈನು, ಅನ್ವರ್ ಶೇಖ್, ಶೇಖ್ ಹಸನ್, ರಫಿ ಬುಲೆಟ್, ಫಯಾಜ್ ನವಲಕಲ್, ನಿಜಾಮ್ ಮರ್ಚೆಡ್, ಸಮೀರ್, ಮೊಹಮ್ಮದ್ ಇಸ್ಮಾಯಿಲ್, ಯಾಸೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

