ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಮಾನವ ಧರ್ಮಕ್ಕೆ ಮಾದರಿಯಾಗಿರುವಂತಹ ಮಹಾನ್ ಶರಣ – ಡಾ. ಚನ್ನಬಸವ ಸ್ವಾಮಿ ಹಿರೇಮಠ

ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಸಯ್ಯದ್ ಪೀರ್ ಪಾಷಾ ಖಾಜಿ ಅವರ ಕುಟುಂಬದಿಂದ ಕಾರುಣ್ಯಾಶ್ರಮದಲ್ಲಿ ಹೊಸ ಬಟ್ಟೆ ವಿತರಣೆ

ಸಿಂಧನೂರು – ತಾಲೂಕಿನ ರವಡಕುಂದ ಗ್ರಾಮದ ಸಯ್ಯದ್ ಪೀರ್ ಪಾಷಾ ಖಾಜಿ ಇವರ ಕುಟುಂಬದಿಂದ ಪ್ರತಿ ವರ್ಷದ ಪದ್ಧತಿಯಂತೆ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿರುವ ಆಶ್ರಯದಾತರುಗಳಿಗೆ ಹೊಸ ಬಟ್ಟೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಿ ಮಹಾಪ್ರಸಾದ ಸೇವೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರನ್ನು ಅವರ ಕುಟುಂಬದಿಂದ ಸನ್ಮಾನಿಸಿ ಗೌರವಿಸಿದರು. ನಂತರ ಆಶ್ರಮದ ಕಾರ್ಯಧ್ಯಕ್ಷರಾದ ಡಾ. ಚನ್ನಬಸವಸ್ವಾಮಿ ಹಿರೇಮಠ ಮಾತನಾಡಿ ನಮ್ಮ ರವಡಕುಂದ ಗ್ರಾಮದ ಸಯ್ಯದ್ ಪೀರ್ ಪಾಷಾ ಖಾಜಿ ಧಣಿಯವರು ಪ್ರತಿ ವರ್ಷವೂ ಕೂಡ ಪವಿತ್ರ ರಂಜಾನ್ ಹಬ್ಬವನ್ನು ಕಾರುಣ್ಯ ಆಶ್ರಮದಲ್ಲಿ ವಿಶೇಷ ಸೇವೆ ಸಲ್ಲಿಸುವುದರ ಮೂಲಕ ಮಾಡಿ ಕಾರುಣ್ಯಾಶ್ರಮದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಬರೀ ಹಬ್ಬ ಹರಿದಿನಗಳಲ್ಲಿ ಅಲ್ಲದೆ ಆಶ್ರಮದ ಕಷ್ಟಕ್ಕೆ ನಿರಂತರ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಇವರ ಮಾರ್ಗದರ್ಶನ ನಿರಂತರವಾಗಿ ಕಾರುಣ್ಯ ಆಶ್ರಮಕ್ಕೆ ದೊರೆಯುತ್ತಿರುವುದು ನಮಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅನುಕೂಲವಾಗುತ್ತಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಮಾನವ ಧರ್ಮಕ್ಕೆ ಮಾದರಿಯಾಗಿರುವಂತಹ ಮಹಾನ್ ಶರಣರು ಮಾನವರಲ್ಲಿ ನಂಬಿಕೆ ಪ್ರೀತಿ ವಿಶ್ವಾಸ ಸೇವೆ ಮಾಡುವುದರಲ್ಲೇ ತಾವು ದೇವರನ್ನು ಕಾಣಬಹುದು ಖುರಾನ್ ಗ್ರಂಥವು ಯಾವುದೇ ಜಾತಿ ಧರ್ಮಗಳಿಗೆ ಮೀಸಲಿಲ್ಲದೆ ಮಾನವನ ಸಂಸ್ಕೃತಿ ಸಂಸ್ಕಾರದ ಒಂದು ಅಧ್ಯಯನವಾಗಿದೆ ಎಂದು ಹೇಳಿರುವುದು ಪ್ರತಿಯೊಬ್ಬರೂ ಕೂಡ ಖುರಾನ್ ಗ್ರಂಥವನ್ನು ಪಠಣ ಮಾಡಬಹುದು. ಸುಮಾರು ವರ್ಷಗಳಿಂದ ಸಿಂಧನೂರಿನ ಜಮಾಆತೆ ಇಸ್ಲಾಮಿ ಹಿಂದ್ ನ ಗುರು ಹಿರಿಯರು ಕಾರುಣ್ಯ ಆಶ್ರಮಕ್ಕೆ ಕನ್ನಡ ಖುರಾನ್ ನೀಡಿ ಗೌರವಿಸಿದ್ದಾರೆ. ಭಗವದ್ಗೀತೆ ಖುರಾನ್ ಬೈಬಲ್ ಈ ಮೂರು ಗ್ರಂಥಗಳು ಹಸಿದವರಿಗೆ ಹಸಿವು ನೀಗಿಸು ಕಷ್ಟದಲ್ಲಿರುವವರಿಗೆ ಕೈ ಹಿಡಿದು ಮುನ್ನಡೆಸು ನ್ಯಾಯಪರವಾದ ನಿಲುವುಗಳನ್ನು ಸ್ವೀಕರಿಸು ಎನ್ನುವ ಹಲವಾರು ಸಂದೇಶಗಳನ್ನು ಮಾನವರಿಗೆ ತಿಳಿಯಪಡಿಸುತ್ತವೆ. ಪವಿತ್ರ ರಂಜಾನ್ ಹಬ್ಬವು ಬರಿ ಇಸ್ಲಾಂ ಧರ್ಮದವರಿಗಷ್ಟೇ ಅಲ್ಲ ಪ್ರತಿಯೊಬ್ಬ ಮಾನವರು ಕೂಡ ಈ ಹಬ್ಬವನ್ನು ಆಚರಿಸಿದರೆ ಮಾನವೀಯತೆಗೆ ಸಂಪೂರ್ಣ ಅರ್ಥ ಸಿಗುತ್ತದೆ. ನಮ್ಮ ರವಡಕುಂದ ದಣಿಯವರು ಪ್ರತಿಯೊಬ್ಬ ಸಮಾಜದ ಗುರುಹಿರಿಯರ ಪ್ರೀತಿ ವಿಶ್ವಾಸವನ್ನು ಗಳಿಸಿ ನಮ್ಮಂತಹ ನೊಂದ ಜೀವಿಗಳ ನಾಡಿಮಿಡಿತವಾಗಿದ್ದಾರೆ ಎಂದು ಭಾವನಾತ್ಮಕವಾಗಿ ಮಾತನಾಡಿ ಸಮಸ್ತ ಇಸ್ಲಾಂ ಬಂಧುಗಳಿಗೆ ಮತ್ತು ನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಸಯ್ಯದ್ ನಬಿಲ್ ಖಾಜಿ. ಖಾದರ್ ಭಾಷಾ. ಸೈಯದ್ ಬಷೀರ್ ಪಾಷಾ. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಮೀನಾಕ್ಷಮ್ಮ. ಲಕ್ಷ್ಮಿ. ಜ್ಯೋತಿ. ಹಾಗೂ ಹಲವಾರು ಇಸ್ಲಾಂ ಧರ್ಮದ ಗುರುಹಿರಿಯರುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *