ಸಿರವಾರ: ಪವಿತ್ರ ರಂಜಾನ್ ಮಾಸದ ಅಂಗವಾಗಿ ಉಪವಾಸ ವ್ರತ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಪರವಾಗಿ ಆದರ್ಶ ನಾಯಕ ಅವರು ಇಂದು ಹಣ್ಣು-ಹಂಪಲು ವಿತರಿಸುವ ಮೂಲಕ ಮಾನವೀಯತೆ ಹಾಗೂ ಸೌಹಾರ್ದತೆಯನ್ನು ಮೆರೆದರು.

ಪಟ್ಟಣದ ನೂರಾನಿ ಮಸೀದಿ, ಮದೀನಾ ಮಸೀದಿ, ತಕ್ವಾ ಮಸೀದಿ, ಜಾಮೀಯಾ ಮಸೀದಿಯಲ್ಲಿ ಉಪವಾಸ ಮಾಡಿದ ನೂರಾರು ಜನರಿಗೆ ಹಣ್ಣಿನ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, “ರಂಜಾನ್ ಹಬ್ಬವು ಶಾಂತಿ, ಸಹಬಾಳ್ವೆ ಮತ್ತು ದಾನದ ಮಹತ್ವವನ್ನು ಸಾರುತ್ತದೆ. ಸಮಾಜದ ಎಲ್ಲ ವರ್ಗದ ಜನರು ಪ್ರೀತಿ-ವಿಶ್ವಾಸದಿಂದ ಬದುಕಿದಾಗ ಮಾತ್ರ ನಾಡು ಸಮೃದ್ಧಿಯಾಗಲು ಸಾಧ್ಯ. ಈ ಪವಿತ್ರ ಮಾಸದಲ್ಲಿ ಸೇವೆಯ ಭಾಗವಾಗಿ ಕಿರು ಕಾಣಿಕೆ ನೀಡುತ್ತಿರುವುದು ನನ್ನ ಸೌಭಾಗ್ಯ” ಎಂದು ತಿಳಿಸಿದರು.

ಸೌಹಾರ್ದತೆಯ ಸಂಗಮ:

ಜಾತಿ-ಮತದ ಭೇದವಿಲ್ಲದೆ ನಡೆದ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಶಾಸಕರ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಫ್ತಿಯಾರ್ ಸಮಯದಲ್ಲಿ ಹಣ್ಣುಗಳ ವಿತರಣೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಕಾರಿಯಾಯಿತು.

ಈ ಸಂದರ್ಭದಲ್ಲಿ ಮೂಕಯ್ಯ ನಾಯಕ, ರಾಮಾಚಾರಿ, ಸತ್ತಾರ್ ಸಾಬ್, ಶಿವುಗೌಡ ಲಕ್ಕಂದಿನ್ನಿ, ಮಾ. ಪ್ರ. ಕಾರ್ಯದರ್ಶಿ ದಾನಪ್ಪ ಸಿರವಾರ, ನಗರ ಘಟಕ ಅಧ್ಯಕ್ಷ ರಂಜೀತ್, ಬಂದೇನವಾಜ್, ಲಕ್ಷ್ಮಣ, ರಾಮು ಗಿಂಡಿ, ಶಾಂತಪ್ಪ ಪಿತಗಲ್, ಎಂ.ಡಿ ಇಸ್ಮಾಯಿಲ್, ಯಲ್ಲಪ್ಪ ದೊರೆ, ಶರಣಬಸವ ಮುಚ್ಚಳ ಗುಡ್ಡ ಕ್ಯಾಂಪ್, ಅಯ್ಯಪ್ಪ ನಾಯಕ , ಹರಿಮುಚ್ಚಳ ಗುಡ್ಡ ಕ್ಯಾಂಪ್, ಮೌಲಾಸಾಬ್ ಮಾನವಿ, ಇಸ್ಮಾಯಿಲ್, ಶರೀಫ್ ಮರಾಠ, ದೇವು, ಜಮಸೀರ್, ಸೇರಿದಂತೆ ಸಮುದಾಯದ ಪ್ರಮುಖರಾದ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *