ಲಿಂಗಸಗೂರು : ಮಾ 20 .

ಯುಗಾದಿ ಹಾಗೂ ರಂಜಾನ್ ಹಬ್ಬ ಆಚರಣೆ ಶಾಂತಿ ರೀತಿಯ ದೈವಭಕ್ತಿ ಹಬ್ಬವಾಗಿ ಪರಿವರ್ತನೆ ಗೊಳ್ಳಬೇಕು ಅದು ಯಾವುದೇ ದ್ವೇಷ ಮೋಜು ಮಸ್ತಿ ಹಬ್ಬವಾಗಬಾರದು. ಒಂದು ವೇಳೆ ಕಾನೂನಿನ ನಿಯಮ ಉಲ್ಲಂಘಿಸದೆ ಇಲಾಖೆ ಜೊತೆ ಕೈಜೋಡಿಸಬೇಕು, ಅದನ್ನು ಮೀರಿ ಯಾರಾದರು ಶಾಂತಿ ಕದಡುವಂತೆ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಶಾಂತಿ ಸಭೆಯ ಪೂರ್ವಭಾವಿ ಸಭೆಯಲ್ಲಿ ಸಿ ಪಿ ಐ ಹೊಸಕೇರಪ್ಪ ಹೇಳಿದರು.

ಅವರಿಂದು ಪಟ್ಟಣದ ಪೊಲೀಸ್ ಠಾಣೆ ಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಶಾಂತಿ ಸಭೆಯನ್ನ ಆಯೋಜಿಸಿ ಮಾತನಾಡುತ್ತಾ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಬ್ಬವನ್ನು ಆದಷ್ಟು ಮುಂಜಾಗ್ರತೆ ಕ್ರಮದಿಂದ ಹಿಂದೂ ಮುಸ್ಲಿಂ ಸಹೋದರರ ರೀತಿ ಸೌಹಾರ್ದತೆಯಿಂದ ಕೂಡಿ ಹಬ್ಬ ಆಚರಿಸಬೇಕು ಇದನ್ನು ಪಟ್ಟಣ ಹಾಗೂ ತಾಲೂಕಿನ ನಾಗರಿಕರು ಸಮಯ ಪ್ರಜ್ಞೆಯಿಂದ ಶಾಂತ ರೀತಿಯಿಂದ ಆಚರಿಸಬೇಕು ಯಾವುದೇ ರೀತಿ ಅಹಿತಕರ ಘಟನೆ ಆಗದಂತೆ ಇಲಾಖೆಯ ಜೊತೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿ ತಾಲೂಕಿನಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು
ಈ ಒಂದು ಶಾಂತಿ ಸಭೆಯ ಉದ್ದೇಶ ಪ್ರತಿಯೊಬ್ಬರೂ ತಮ್ಮ ಇಷ್ಟಾರ್ಥ ಪ್ರಾರ್ಥನೆಯನ್ನು ಸಲ್ಲಿಸಿ, ದೇವರ ಕೃಪೆಗೆ ಪಾತ್ರರಾಗಲು ಹಬ್ಬ ಆಚರಣೆಯಾಗಬೇಕು,
ಮುಂದಿನ ಪೀಳಿಗೆಗೆ ತಾವು ದೈವಭಕ್ತರೆಂದು ತೋರಿಸಿಕೊಡವ ಹಬ್ಬವಾಗಬೇಕು ತಾಲೂಕಿನಲ್ಲಿ ಇದುವರೆಗೂ
ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಇಲಾಖೆಯ ಜೊತೆ ಕೈಜೋಡಿಸಿದ್ದು ಇಲ್ಲಿ ಶ್ಲಾಘನಿಯವಾಗಿ ಸ್ಮರಿಸಬಹುದಾಗಿದೆ ಎಂದರು .
ಈ ಸಂದರ್ಭದಲ್ಲಿ ಖಾದರ್ ಭಾಷಾ , ಬಾಬಾ ಖಾಜಿ , ಯುನೊಸ್ ಮುಫ್ತಿ ಸಾಬ್, ಹನುಮಂತ ನಾಯಕ್ , ಬಾಲನಗೌಡ , ರಾಜು ತಂಬಾಕೆ , ಮಹಮ್ಮದ್ ಅಭೀಬ್ ಸೇಠ ವಕೀಲರು, ರಫೀ , ಸತ್ತಾರ್ ಸಾಬ್ಅ ನ್ಸರುದ್ದೀನ್ , ಭಾಷಾ ಸಲೀಂ ,ಗೌಸ್ , ಬಾಬಾ ಜಾನಿ , ಸೇರಿದಂತೆ ಅನೇಕರು ಇದ್ದರು .

Leave a Reply

Your email address will not be published. Required fields are marked *