ಆರೋಗ್ಯವಂತ ವಿದ್ಯಾರ್ಥಿಯಿಂದ ಶೈಕ್ಷಣಿಕ ಸಾಧನೆ ಸಾಧ್ಯವಿದ್ದು, ಶಿಕ್ಷಣದೊಂದಿಗೆ ಕ್ರೀಡೆಯತ್ತಲ್ಲೂ ಗಮನಹರಿಸಬೇಕಿದೆ ಎಂದು ಕೊಪ್ಪಳ ವಿವಿ ಕುಲಸಚಿವ ಕೆ.ರಮೇಶ ಹೇಳಿದರು.ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೊಪ್ಪಳ ವಿವಿ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿ ಮಟ್ಟದ ಅಂತರ ಪದವಿ ಕಾಲೇಜುಗಳ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಸದಢ ದೇಹದಲ್ಲಿ ಸದಢ ಆರೋಗ್ಯ ಸಾಧ್ಯವಿದ್ದು, ಆಟೋಟಗಳ ಮೂಲಕ ಬಲಿಷ್ಟರಾಗಬೇಕಿದೆ. ಸದೃಢ ಆರೋಗ್ಯಕ್ಕೆ ಕಾರಣವಾದ ಕ್ರೀಡೆಯೊಂದಿಗೆ ಶಿಕ್ಷಣ, ಸಂಶೋಧನೆಗೂ ವಿವಿ ಆದ್ಯತೆ ನೀಡುತ್ತಿದ್ದು, ಕ್ರೀಡೆಗಳಲ್ಲೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲ್ಕುಂದಿ ಮಾತನಾಡಿ, ಕ್ರಿಕೆಟ್ ಹಾವಳಿಯಲ್ಲಿ ದೇಸಿ ಕ್ರೀಡೆಗಳು ಮರೆಯಾಗುತ್ತಿದ್ದು, ಖೋಖೋಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆಯಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಮಾತನಾಡಿದರು. 2 ದಿನಗಳ ಪಂದ್ಯಾವಳಿಯಲ್ಲಿ 25ಕ್ಕೂ ಹೆಚ್ಚು ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿ ಆಡಳಿತಾಧಿಕಾರಿ ತಿಮ್ಮಾರೆಡ್ಡಿ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಸಿಡಿಸಿ ಸದಸ್ಯರಾದ ಸೋಮಶೇಖರ್ ಕಂಪ್ಲಿ, ರವಿ ಯಲಬುರ್ತಿ, ದೀಪಕ್ ಬಾಂಠಿಯಾ, ಮಂಜುನಾಥ, ಕ್ರೀಡಾ ವಿಭಾಗದ ನಿರ್ದೇಶಕರಾದ ಕೆ.ಶೋಭಾ, ಅನಿಲಕುಮಾರ ಎಡ್ವರ್ಡ, ಪ್ರಾಧ್ಯಾಪಕರಾದ ಅಣ್ಣೋಜಿರೆಡ್ಡಿ, ದೊರೆಬಾಬು, ಅಶೋಕ, ಡಾ.ಬಸವರಾಜ ಗಡಾದ್ ಇತರರಿದ್ದರು.

