ರಾಯಚೂರು ಮಾರ್ಚ್ 16 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಬಿಳಿಜೋಳವನ್ನು ಬೆಳೆದಿರುವ ರೈತರು ಈಗಾಗಲೇ ತಮ್ಮ ಎಫ್‌ಐಡಿ ಯೊಂದಿಗೆ ನೋಂದಣಿ ಮಾಡಿಕೊಂಡಿದ್ದು, ಮಾರ್ಚ್ 17 ರಿಂದ ಜಿಲ್ಲೆಯಲ್ಲಿರುವ ಎಲ್ಲಾ ಖರೀದಿ ಕೇಂದ್ರಗಳಲ್ಲಿ ವಿದ್ಯುಕ್ತವಾಗಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಲಾದ ಅನುಕ್ರಮವಾರು ಮೊದಲು ಮುಂಗಾರು ಋತುವಿನಲ್ಲಿ ಬೆಳೆದ ರೈತರಿಂದ ಖರೀದಿಯನ್ನು ಮಾಡಲಾಗುವುದು. ರೈತರು ಆತುರ ಪಡದೇ ಅಥವಾ ನೂಕು ನುಗ್ಗಲು ಮಾಡದೇ ತಮಗೆ ಖರೀದಿ ಕೇಂದ್ರದಿಂದ ನೀಡಲಾಗುವ ದಿನಾಂಕವಾರು ತಾವು ಬೆಳೆದಿರುವ ಜೋಳವನ್ನು ಸರಬರಾಜು ನೀಡುವುದು. ಅಲ್ಲದೇ ಖರೀದಿ ಕೇಂದ್ರಕ್ಕೆ ಬರುವ ಮುಂಚಿತವಾಗಿಯೇ ದಾಸ್ತಾನಿನ ಗುಣಮಟ್ಟ, ತೇವಾಂಶ ಹಾಗೂ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
ಈಗಾಗಲೇ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸರ್ವೆ ನಂ ಹಾಗೂ ಎಫ್‌ಐಡಿಗಳನ್ನು ಬೆಳೆದರ್ಶಕ ಆಪ್ ಮುಖಾಂತರ ನೈಜ್ಯತೆಯನ್ನು ಪರಿಶೀಲಿಸಲಾಗಿ, ಸಂಶಾಯತ್ಮಾಕ ಹಾಗೂ ಬಿಳಿ ಜೋಳವನ್ನು ಬೆಳೆಯದೇ ಇರುವ ಸರ್ವೆ ನಂ. ವಾರು ಎಫ್‌ಐಡಿ ಗಳನ್ನು ಬ್ಲಾಕ್ ಮಾಡಲು ಕ್ರಮವಹಿಸಲಾಗಿದೆ ಇದಕ್ಕೆ ಆಕ್ಷೇಪಣೆಗಳೇನಾದರು ಇದ್ದಲ್ಲಿ, ಸರ್ಮಥನೀಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಮತ್ತು ಬಿಳಿ ಜೋಳವನ್ನು ಬೆಳೆಯದೇ ನೋಂದಣಿ ಮಾಡಿಕೊಂಡು ಖರೀದಿ ಕೇಂದ್ರಗಳಿಗೆ ಜೋಳವನ್ನು ಸರಬರಾಜು ಮಾಡಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನತ್ಮಕ ಕ್ರಮವನ್ನು ಕೈಗೊಳ್ಳುವುದಲ್ಲದೇ ಈ ಖರೀದಿಯ ಹಣವನ್ನು ತಡೆಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

