ಸಿಂಧನೂರು: ಪಟ್ಟಣದ ಸೈಯದ್ ಹಾರೂನ್ ಜಾಗೀರ್ದಾರ್ ಅವರು ತಮ್ಮ ಮನೆಯಲ್ಲಿ ದಿನಾಲೂ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದ್ದು 24ನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವು ಆತ್ಮೀಯ ಹಾಗೂ ಸೌಹಾರ್ದ ವಾತಾವರಣದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ರಾಜಶೇಖರ್ ಹಿಟ್ನಾಳ್ ಅವರು ಭಾಗವಹಿಸಿ ಇಫ್ತಾರ್ ಕೂಟವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಜಾನ್ ಮಾಸವು ಸಹೋದರತ್ವ, ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲ ಧರ್ಮಗಳ ಜನರು ಒಂದಾಗಿ ಬದುಕುವ ಸಂಸ್ಕೃತಿ ಮತ್ತಷ್ಟು ಬಲವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿ ಸಿಂಧನೂರಿನ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠಿತ ‘ದತ್ತಿ ಅಭಿಮನ್ಯು’ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಚಂದ್ರಶೇಖರ್ ಬೆನ್ನೂರು ಅವರನ್ನು ಸಂಸದರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಜಯ್ ಕುಮಾರ್ ಜೈನ್, ಕಂಪ್ಲಿಯ ಸ್ನೇಹಿತರು, ಸಮುದಾಯದ ಹಿರಿಯರು, ಯುವಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ನಂತರ ಸೈಯದ್ ಹಾರೂನ್ ಜಾಗೀರ್ದಾರ್ ಅವರು ಆಗಮಿಸಿದ ಸಂಸದರಿಗೆ, ಪತ್ರಕರ್ತರಿಗೆ, ಸ್ನೇಹಿತರಿಗೆ ಹಾಗೂ ಸಮುದಾಯದ ಬಂಧುಗಳಿಗೆ ಧನ್ಯವಾದಗಳನ್ನು ತಿಳಿಸಿದರು



