ಮಸ್ಕಿ ಅಭಿನಂದನ್ ಸ್ಪೂರ್ತಿ ಧಾಮವು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳ ಬಳಗವು ಮಾನ್ಯ DGM ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಮಸ್ಕಿಯ ಅಭಿನಂದನ್ ಸ್ಪೂರ್ತಿಧಾಮಕ್ಕೆ ಭೇಟಿ ನೀಡಿ, ಮಕ್ಕಳ ಕುಶಲೋಪರಿ ವಿಚಾರಿಸಿದ ನಂತರ ಎಲ್ಲಾ ಅಧಿಕಾರಿಗಳು ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಒಂದು ಗುಂಟೆ ಭೂಮಿಯನ್ನು ಖರೀದಿಸಲು 1,22,500 ರೂ. ಮೊತ್ತದ ದೇಣಿಗೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿಯ DGM ವಿಜಯಕುಮಾರ್ ಶೆಟ್ಟಿ ಅವರು ಮಾತನಾಡಿ ಅಭಿನಂದನ್ ಸ್ಪೂರ್ತಿಧಾಮವು ಕೇವಲ ಮಸ್ಕಿ ಮಾತ್ರವಲ್ಲದೇ ರಾಯಚೂರು ಜಿಲ್ಲೆಯಲ್ಲೇ ಒಂದು ಅತ್ಯುತ್ತಮ ಹೆಸರನ್ನು ಪಡೆದುಕೊಂಡು ಸೇವೆಯಲ್ಲಿ ತೊಡಗಿರುವದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಲ್ಲಿನ ಮಕ್ಕಳಿಗೆ ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ವಿಷಯಗಳಲ್ಲಿ ಕೌಶಲ್ಯಗಳನ್ನು ನೀಡುತ್ತಿರುವುದು ಬಹಳ ಉತ್ತಮ ಬೆಳವಣಿಗೆಯಾಗಿದೆ.
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಅಧಿಕಾರಿಗಳು, ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

