ಸಿಂಧನೂರು — ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ. ರಾಜಶೇಖರ ಹಿಟ್ನಾಳ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಎಲ್ಲಾ ಕೋಣೆಗಳು ವೀಕ್ಷಿಸಿ ಆಶ್ರಯದಾತುರುಗಳಿಗೆ ಆತ್ಮಸ್ಥೈರ್ಯ ತುಂಬಿ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಸಂಸದರಾದ ಕೆ. ರಾಜಶೇಖರ ಹಿಟ್ನಾಳ ಇವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ವಿತರಿಸಲಾಯಿತು. ನಂತರ ಸಂಸಾರದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರುಣ್ಯ ಎನ್ನುವ ಆಶ್ರಮವು ಕರುಣೆಯ ಕುಟುಂಬವಾಗಿ ಅನಾಥರಿಗೆ ಸಮಾಜದಿಂದ ತಿರಸ್ಕೃತಗೊಂಡವರಿಗೆ ತಮಗರಿವಿಲ್ಲದ ವಯಸ್ಕರ ಬುದ್ಧಿಮಾಂದ್ಯರಿಗೆ ಬದುಕು ಕಟ್ಟಿಕೊಟ್ಟಿರುವುದು ಮಾನವ ಧರ್ಮದ ಮಾನವೀಯತೆಗೆ ಮೆರುಗು ತಂದಿದೆ. ಹರೇಟನೂರು ಗ್ರಾಮದ ಬಡ ಜಂಗಮರಾದ ವೇದಮೂರ್ತಿ ಅಮರಯ್ಯ ಸ್ವಾಮಿ ಅವರು ಸಮಾಜದಲ್ಲಿನ ಅಂಧ-ಅನಾಥರ ಬಾಳಿಗೆ ಬೆಳಕಾಗಿದ್ದಾರೆ. ಕಾರುಣ್ಯಾಶ್ರಮದ ಸೇವೆಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಹಕರಿಸಿದಾಗ ಮಾತ್ರ ಈ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಜನಪರ ಕಾರ್ಯಗಳು ನೆರವೇರಲಿವೆ. ಸರ್ಕಾರದ ಮಟ್ಟದಲ್ಲಿ ಹಾಗೂ ವೈಯಕ್ತಿಕವಾಗಿಯೂ ಕೂಡ ನಾನು ಕಾರುಣ್ಯಾಶ್ರಮಕ್ಕೆ ಸಹಾಯ ಮಾಡುತ್ತೇನೆ. ನಮ್ಮ ಚನ್ನಬಸಯ್ಯ ಸ್ವಾಮಿ ಸಮಾಜದ ಒಬ್ಬ ಆದರ್ಶ ವ್ಯಕ್ತಿಯಾಗಿ ನಮ್ಮ ಜೀವನವನ್ನೇ ಸಮಾಜಕ್ಕೆ ಮುಳುಪಾಗಿಟ್ಟು . ಇಂತಹ ಸಂಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಮೂಲಕ ಇರುವ ಎಲ್ಲಾ ಆಶ್ರಯದಾತರುಗಳ ಹಿಂದಿನ ನೋವುಗಳನ್ನು ಅವರುಗಳಿಗೆ ಹಂಚುತ್ತಿರುವ ಪ್ರೀತಿಯು ಅರಣ್ಯ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿಕೊಟ್ಟಿದೆ. ಇಂತಹ ಕರುಣೆಯ ಕಾರುಣ್ಯ ಕುಟುಂಬವನ್ನು ಇದರ ಸೇವೆಯನ್ನು ನೋಡಿ ನನಗೆ ಅಚ್ಚರಿಯನ್ನುಂಟು ಮಾಡಿದೆ. ಇಂದಿನ ಕಾಲದಲ್ಲಿ ಸ್ವಂತ ಕುಟುಂಬದ ನಿರ್ವಹಣೆಯ ಕಷ್ಟವಾಗಿರುವಾಗ ನಿರಂತರ ತಮ್ಮ ಜೋಳಿಗೆಯ ಮೂಲಕ ಅದೆಷ್ಟೋ ಅಂದ ಅನಾಥರಿಗೆ ಹಸಿವು ನೀಗಿಸುವ ಈ ಕಾರುಣ್ಯ ಆಶ್ರಮದ ಸೇವೆ ಸ್ವರ್ಗದಂತಿದೆ.ಮುಂದಿನ ದಿನಮಾನಗಳಲ್ಲಿ ಈ ನಮ್ಮ ಕಾರುಣ್ಯ ಆಶ್ರಮಕ್ಕೆ ನಮ್ಮ ಕುಟುಂಬದಿಂದ ನಿರಂತರ ಸಹಾಯ ಸಹಕಾರವಿರುತ್ತದೆ. ಈ ಸೇವೆಯು ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರದ ಹೆಮ್ಮೆಯ ವಿಷಯವಾಗಿದೆ ಎಂದು ಮಾತನಾಡಿ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಂತರ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ನಾಗವೇಣಿ ಎಸ್ ಪಾಟೀಲ್ ಮಾತನಾಡಿ ಈ ನಮ್ಮ ಕಾರುಣ್ಯಾಶ್ರಮವು ಸುಮಾರು ವರ್ಷಗಳಿಂದ ಸರ್ಕಾರದ ಯಾವುದೇ ಸಹಾಯವಿಲ್ಲದೆ ಬರೀ ಅನಾಥರ ಸೇವೆ ಮಾಡುವುದಲ್ಲದೆ ಅನೇಕ ಹಲವಾರು ಸಮಾಜಪರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಆದ್ದರಿಂದ ಸಂಸದರಾದ ತಾವುಗಳು ಕೇಂದ್ರ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಮತ್ತು ಆಶ್ರಮಕ್ಕೆ ಸ್ವಂತ ಜಾಗ ಒದಗಿಸುತ್ತೀರಿ ಎನ್ನುವ ಭರವಸೆ ನಮ್ಮೆಲ್ಲರಲ್ಲಿದೆ. ಈ ಸಂಸ್ಥೆಗೆ ಸರ್ಕಾರದ ಮಟ್ಟದಲ್ಲಿ ಏನಾದರೂ ಸಹಾಯ ಸಹಕಾರ ದೊರೆತಲ್ಲಿ ರಾಜಕ್ಕೆ ಇನ್ನು ಹೆಚ್ಚಿನ ಸೇವೆಗಳು ದೊರೆಯುತ್ತವೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಸಂಸ್ಥಾಪಕರಾದ ವೇದಮೂರ್ತಿ ಅಮರಯ್ಯ ಸ್ವಾಮಿ ಹಿರೇಮಠ. ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್. ಸಲಹಾ ಸಮಿತಿ ಹಿರಿಯರಾದ ವೇದಮೂರ್ತಿ ವೀರೇಶ ಯಡಿಯೂರು ಮಠ ಶ್ರೀ ಶಾಂಭವಿ ಪುಣ್ಯಾಶ್ರಮ ಸಿಂಧನೂರು. ಹನುಮೇಶ ಬಾಗೋಡಿ ಕಾಂಗ್ರೆಸ್ ಯುವ ಮುಖಂಡರು ಮಸ್ಕಿ ವಿಧಾನಸಭಾ ಕ್ಷೇತ್ರ. ಹನುಮಂತಪ್ಪ ಸಿ.ಡಿ.ಪಿ.ಓ. ಹೊಸಗೇರಪ್ಪ ಗೊರೆಬಾಳ ಅಧ್ಯಕ್ಷರು ಶ್ರೀ ಹುಲಿಗಮ್ಮ ದೇವಿ ದೇವಸ್ಥಾನ ಸಮಿತಿ. ಅಶೋಕ ಮಸ್ಕಿ. ಮಾಳಪ್ಪ ಮಾಡಗಿರಿ. ಮೂಕಪ್ಪ ಬನ್ನದ. ನಿಂಗಪ್ಪ ಬನ್ನದ. ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ. ಮೀನಾಕ್ಷಮ್ಮ ಲಕ್ಷ್ಮಿ. ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *