ರಾಯಚೂರು ಮಾರ್ಚ್ 13 (ಕರ್ನಾಟಕ ವಾರ್ತೆ): ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತು ಸಭಾ ನಾಯಕರಾದ ಎನ್.ಎಸ್.ಭೋಸರಾಜು ಅವರು ಮಾರ್ಚ್ 14, 15ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಾರ್ಚ್ 14ರ ಬೆಳಿಗ್ಗೆ 8ಗಂಟೆಗೆ ರಾಯಚೂರಿನಿಂದ ರಸ್ತೆ ಮಾರ್ಗವಾಗಿ ನಿರ್ಗಮಿಸಿ, ಬೆಳಿಗ್ಗೆ 9ಗಂಟೆಗೆ ತೆಲಂಗಾಣ ರಾಜ್ಯದ ಗದ್ವ್ವಾಲ್ ಕ್ಷೇತ್ರದ ಶಾಸಕರಾದ ಬಂಡ್ಲಾ ಕೃಷ್ಣಮೋಹನ್ ರೆಡ್ಡಿ ಅವರ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗಿಯಾಗುವರು.
ಬೆಳಿಗ್ಗೆ 10ಗಂಟೆಗೆ ಗದ್ವಾಲ್‌ನಿಂದ ರಸ್ತೆ ಮಾರ್ಗವಾಗಿ ನಿರ್ಗಮಿಸಿ, 11ಕ್ಕೆ ರಾಯಚೂರಿಗೆ ಆಗಮಿಸಿಲಿದ್ದಾರೆ. 11.30ಕ್ಕೆ ರಾಯಚೂರಿನಿಂದ ನಿರ್ಗಮಿಸಿ, 12ಕ್ಕೆ ಜಿಲ್ಲೆಯ ಮಾನವಿಗೆ ಪ್ರಯಾಣ ಬೆಳೆಸಿ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು.
ಸಂಜೆ 4ಗಂಟೆಗೆ ಮಾನವಿಯಿಂದ ನಿರ್ಗಮಿಸಿ, ಸಂಜೆ 5ಗಂಟೆಗೆ ರಾಯಚೂರಿನಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು.
ಮಾರ್ಚ್ 15ರ ಮಧ್ಯಾಹ್ನ 3ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ, ಸಂಜೆ 4ಕ್ಕೆ ಮಾನವಿಗೆ ಆಗಮಿಸಿ ಸಂಜೆ 6ಗಂಟೆಗೆ ಮಾನವಿ ಪಟ್ಟಣದ ಈದ್ಗಾ ಶಾದಿಮಹಲ್‌ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಸಿರುವ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸುವರು.
ರಾತ್ರಿ 8ಗಂಟೆಗೆ ರಾಯಚೂರಿಗೆ ಆಗಮಿಸಿ, ಬಳಿಕ ರೈಲ್ವೆ ಮಾರ್ಗವಾಗಿ ರಾಯಚೂರಿನಿಂದ ಕೇಂದ್ರ ಸ್ಥಾನ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *