ರಾಯಚೂರು:ಮಾ.12:
ಕ್ಷಯರೋಗ ತಡೆಗೆ ಕಫ ಪರೀಕ್ಷೆ ಹಾಗೂ ಆಸ್ಪತ್ರೆಗಳಲ್ಲಿ ಎಕ್ಸ್-ರೆ ಮೇಷಿನ್ ಮೂಲಕ ಪರೀಕ್ಷೆ ಮಾಡುವ ಜೊತೆ ಜೊತೆಗೆ ದೂರದ ಸ್ಥಳಗಳು ಅಥವಾ ಕೊಳಚೆ ಪ್ರದೇಶದ ಜನತೆಯು ಪರೀಕ್ಷೆಗೆ ಬರಲು ಅನಾನೂಕೂಲತೆಯನ್ನು ತಡೆಯಲು ದುರ್ಗಮ ಪ್ರದೇಶಗಳಲ್ಲಿ ಸಮುದಾಯದೊಂದಿಗೆ ಸ್ಥಳದಲ್ಲಿಯೇ ವಿಕಿರಣ ಚಿತ್ರಣ ( ಎಕ್ಸ್-ರೇ ) ಪ್ರತಿಯನ್ನು ಒದಗಿಸುವ ಮೂಲಕ ಕ್ಷಯರೋಗ (ಟಿಬಿ) ಪತ್ತೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಹ್ಯಾಂಡ್‌ಹೆಲ್ಡ್ ಸಾಧನದ ಬಳಕೆಯನ್ನು ಪರಿಣಾಮಕಾರಿಯಾಗಿಸಲು ಯಾವುದೇ ಮಾಹಿತಿಯ ಕೊರತೆಯಾಗದಂತೆ ತರಬೇತಿ ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿ, ಎಸ್‌ಟಿಎಸ್ ಹಾಗೂ ಎಸ್‌ಟಿಎಲ್‌ಎಸ್ ರವರಿಗೆ ಹಮ್ಮಿಕೊಂಡ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಮೆಷಿನ್ ಬಳಕೆಯ ತರಬೇತಿ ಶಿಬಿರದಲ್ಲಿ ಮಾತನಾಡುತ್ತಾ, ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ ಎಲ್ಲ ತಾಲೂಕುಗಳಲ್ಲಿ ಜಿಲ್ಲೆಯ ಜನತೆಯು ಪರೀಕ್ಷೆಗಾಗಿಯೇ ಆಸ್ಪತ್ರೆಗಾಗಿ ಬರುವ ಸಮಯ, ಸಾರಿಗೆ ವೆಚ್ಚವನ್ನು ಉಳಿಸಿ ಸಮುದಾಯದ ಹತ್ತಿರವೇ ಹೋಗಿ ಶಂಕೀತರನ್ನು ಪರೀಕ್ಷೆ ಮಾಡಲು ಅತ್ಯುಪಯುಕ್ತವಾಗುವ ಉಪಕರಣವಾಗಿದ್ದು, ತ್ವರಿತ ರೋಗ ಪತ್ತೆಗೆ ಸಹಕಾರಿಯಾಗಿರುವ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಮೆಷಿನ್ ಸದ್ಭಳಕೆಯಾಗಿಸಿ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್ ಮಾತನಾಡಿ, ಸದರಿ ಮೆಷಿನ್ ಮೂಲಕ ಪರೀಕ್ಷೆ ಕೈಗೊಂಡ ನಂತರ ಸ್ಥಳದಲ್ಲಿಯೇ ವರದಿಯನ್ನು ನೀಡಲಾಗುವ ವ್ಯವಸ್ಥೆಯಿದ್ದು, ಕ್ಷಯರೋಗದ ಶಂಕೀತ ವರದಿಗಳು ಕಂಡು ಬಂದಲ್ಲಿ ಅಂತವರಿಗೆ ಒಂದು ಬಾರಿ ಕಫ ಪರೀಕ್ಷೆ ಮಾಡಿಸಿ ಖಚಿತಪಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಆರಂಭಿಸಲಾಗುವುದು ಎಂದರು.
ಅನುಕೂಲತೆಗಳು:
ಗ್ರಾಮೀಣ ಪ್ರದೇಶದ ಹಳ್ಳಿಗಳು, ಕೊಳೆಗೇರಿಗಳು ಅಥವಾ ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳಿಗೆ ಸುಲಭವಾಗಿ ಸಾಗಿಸಬಹುದು, ಅನ್ಯ ಕಾಯಿಲೆಯಿಂದ ಬಳಲುವ ವ್ಯಕ್ತಿಗಳಿಗೆ ಅವರ ಬಳಿಯೆ ತೆರಳಿ ಪ್ರಕರಣ ಪತ್ತೆ ಹಚ್ಚಲು ಸಹಕಾರಿಯಾಗುವುದು.
ಈ ಸಂದರ್ಭದಲ್ಲಿ ಜಿಲಾ ಅರ್‌ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ಡಿಪಿಡಿಓ ಡಾ ಚಂದ್ರಶೇಖರ ಸ್ವಾಮಿ, ಎನ್‌ಪೊರ್ಸಮೆಂಟ್ ಅಧಿಕಾರಿ ಡಾ ಶಿವಕುಮಾರ ನಾರಾ ಹಾಗೂ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ್ ಸೇರಿದಂತೆ ಕ್ಷಯರೋಗ ವಿಭಾಗದ ಸಿಬ್ಬಂದಿಯವರು ಉಪಸ್ಥಿತರಿದ್ದರು.

