ಸಿಂಧನೂರು ಮಾರ್ಚ್ 13: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಪ್ರೌಢಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಹೆಚ್. ಪಿ ವಿ ಲಸಿಕೆಯನ್ನು ಹಾಕಿಸಲು . 14 ವರ್ಷದ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆ ಜವಳಗೇರಾದಲ್ಲಿ ಜಾಗೃತಿ ಮೂಡಿಸಲಾಯಿತು
ನಂತರ ಮಾತನಾಡಿದ ವೈದ್ಯಾಧಿಕಾರಿಗಳಾದ ಡಾಕ್ಟರ ಪ್ರೀತಾ ಪಾಟೀಲ ಅವರು ಹೆಚ್.ಪಿ.ವಿ ಲಸಿಕೆಯಿಂದ ಕ್ಯಾನ್ಸರ್ ತಡೆಗಟ್ಟುತ್ತದೆ ಹೆಣ್ಣು ಮಕ್ಕಳು ಈ ನಾಡಿನ ಸುಭದ್ರತೆ ಭವಿಷ್ಯದ ಬುನಾದಿಯಾಗಿದಾರೆ. ಪ್ರಸ್ತುತ ಸದರಿ ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಭಾರತ ಸರಕಾರದ ಮಾರ್ಗ ಸೂಚಿಗಳ ಅನುಸಾರ ಲಸಿಕೆಯನ್ನು ನೀಡಲಾಗುತ್ತದೆ. ಸದರಿ ಲಸಿಕೆಯನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ತಜ್ಞ ವೈದ್ಯರ ಮೂಲಕ ಲಸಿಕೆಯನ್ನು ನೀಡಲಾಗುತ್ತದೆ ಎಂದರು.
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವುದರೊಂದಿಗೆ ಸುರಕ್ಷಿತ ಲಸಿಕೆ ಸುಂದರ ಭವಿಷ್ಯ ನಮ್ಮ ಹೆಣ್ಣು ಮಕ್ಕಳ ಆರೋಗ್ಯ ನಮ್ಮ ಆದ್ಯತೆ ಎಂಬ ಘೋಷ ವಾಕ್ಯದೊಂದಿಗೆ 14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಹೆಚ್ ಪಿ ವಿ ಲಸಿಕೆಯನ್ನು ಹಾಕುವುದರ ಮೂಲಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಸಮಾಜ ಪ್ರತಿಯೊಬ್ಬರಿಗೆ ತಲುಪುವ ನಿಟ್ಟಿನಲ್ಲಿ ಲಸಿಕೆಯನ್ನು ಪಡೆಯುವಂತೆ ಮನವಿಯನ್ನು ಮಾಡುತ್ತೇವೆ. ಹೆಚ್ ಪಿ ವಿ ಲಸಿಕೆವು ಇದು ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯುತ್ತದೆ. ಭಾರತದಲ್ಲಿ ಉಚಿತವಾಗಿ ಹೆಚ್. ಪಿ .ವಿ ಲಸಿಕೆಯನ್ನು ನೀಡಲಾಗುತ್ತದೆ ಈ ಲಸಿಕೆಯಿಂದ ಅಡ್ಡ ಪರಿಣಾಮವೂ ಇರುವುದಿಲ್ಲ ಹೆಚ್. ಪಿ.ವಿ ಲಸಿಕೆಯನ್ನು ಪಡೆದ ಮಕ್ಕಳಿಗೆ ಯೂ ವಿನ್ ತಂತ್ರಾಂಶಗಳಲ್ಲಿ ನೊಂದಣಿ ಮಾಡಿ ಪ್ರಮಾಣ ಪತ್ರ ನೀಡಲಾಗುವುದು ಅದಕ್ಕಾಗಿ ವಿದ್ಯಾರ್ಥಿನಿಯರು ಆಧಾರ್ ಕಾರ್ಡ್ ಮತ್ತು ಪೋನ್ ನಂಬರ್ ತೆಗೆದುಕೊಂಡು ಬರಲು ಮಾಹಿತಿ ಶಿಕ್ಷಣ ನೀಡಲಾಯಿತು
ನಂತರ ಮಾತನಾಡಿದ ಶಿಕ್ಷಕರಾದ ಅನ್ನಮ್ಮ ಅವರು ನಿಮ್ಮ ಉಜ್ಜಲ್ ಭವಿಷ್ಯಕ್ಕಾಗಿ ಮಕ್ಕಳು ತಪ್ಪದೇ ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಕೊಳ್ಳಿ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಜಿ. ಎಸ್ ಪಾಟೀಲ್ ಶಿಕ್ಷಕರಾದ ಪ್ರೀಯಾ. ಅನ್ನಮ್ಮ. ನಂದಾದೀಪ . ವಿ ಎಸ್ . ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಮಹೇಶ .ಅಂಬಮ್ಮ. ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು



