ಲಿಂಗಸಗೂರು ಪಟ್ಟಣಕ್ಕೆ ಮಂಜೂರಾಗಿರುವ 50 ಬೆಡ್‌ಗಳ ತೀವ್ರ ನಿಗಾ ಘಟಕ ಆಸ್ಪತ್ರೆಯನ್ನು ಕರಡಕಲ್ ಹೊರವಲಯದಲ್ಲಿ ನಿರ್ಮಿಸಬೇಕೆಂದು ಒತ್ತಾಯಿಸಿ ಜಾಂಬವ ಯುವ ಸೇನೆ ತಾಲೂಕ ಅಧ್ಯಕ್ಷ ಶಶಿಕುಮಾರ್ ಸಹಾಯಕ ಆಯುಕ್ತ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರಡಕಲ್ ಹೊರ ವಲಯದ ಸರ್ವೇ ನಂ. 411ರಲ್ಲಿ ಆರು ಎಕರೆ ಜಮೀನು ಆಸ್ಪತ್ರೆ ಕಟ್ಟಡಕ್ಕಾಗಿ ಮಂಜೂರಾಗಿದ್ದು ಅದೇ ಸ್ಥಳದಲ್ಲಿ ನಿಗಾ ಘಟಕ ನಿರ್ಮಾಣ ಮಾಡಬೇಕು. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 50ಹಾಸಿಗೆ ಆಸ್ಪತ್ರೆ ಕಟ್ಟಡ ಕಟ್ಟುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಕರಡಕಲ್ ಹೊರವಲಯದಲ್ಲಿಯೇ ಆಸ್ಪತ್ರೆ ನಿರ್ಮಿಸಬೇಕು, ತಾಯಿ-ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡ ಪೂರ್ಣಗೊಂಡು ಐದಾರು ತಿಂಗಳು ಕಳೆದಿದ್ದು ಶೀಘ್ರ ಉದ್ಘಾಟನೆಗೊಳಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು . ಈ ಸಂದರ್ಭದಲ್ಲಿ ಅಮರೇಶಗೋಸ್ಲೆ ಯಲ್ಲಾಲಿಂಗ ಕುಣಿಕೆಲ್ಲೂರು, ಅಮರೇಶ ಡಿ.ಪವಾರ, ಮಲ್ಲಿಕಾರ್ಜುನ ಸರ್ಜಾಪುರ, ಬಸವರಾಜ ಕುಣಿಕೆಲ್ಲೂರು ಸೇರಿದಂತೆ ಇತರರಿದ್ದರು .

