ಹಟ್ಟಿ : ಸಮೀಪದ ಗುರುಗುಂಟಾ ಗ್ರಾಮಕ್ಕೆ ಜಿ.ಪಂ ಸಿಇಒ ಈಶ್ವರ ಕಾಂದೂ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ಸಂಜೆ ಜರುಗಿದೆ.
ಗುರುಗುಂಟಾ ಗ್ರಾಮದಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕ ಕಾಮಗಾರಿ ನನೆಗುದಿದೆ ಬಿದ್ದಿದ್ದು, ತಾ.ಪಂ ಇಒ, ಗ್ರಾ.ಪಂ ಪಿಡಿಒ, ಜೆಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿ ಹಾಗೂ ಗುತ್ತಿಗೆದಾರನಿಗೆ ಮಾ.31ರ ಒಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ವಿವಿದ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರಿಂದ ದೂರುಗಳು ಬಂದಿವೆ. ಬೇಸಿಗೆ ಮುಗಿಯುವರೆಗೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೊಡಿಕೊಳ್ಳಿ ಎಂದು ತಾಕೀತು ಮಾಡಿದರು.
ಈ ವೇಳೆ ತಾ.ಪಂ ಇಒ ಉಮೇಶ, ವಿವಿಧ ಇಲಾಖೆಯ ಅಧಿಕಾರಿಗಳಾದ ವೆಂಕಟೇಶ ದೇಸಾಯಿ, ಪಂಪನಗೌಡ ಪಾಟೀಲ, ಮಹೀಬೂಬ್, ಹನುಮಂತಪ್ಪ, ಮಹಾದೇವಪ್ಪ, ಬಾಲಪ್ಪ, ಪಿಡಿಒ ಶಿವಪ್ಪ, ಜಾವಿದ್ ಪಾಶ ಇತರರು ಉಪಸ್ಧಿತರಿದ್ದರು.

