ಮಾನವಿ : ಕರ್ನಾಟಕ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಂಚೇತಕರಾದ ಶ್ರೀ ಸಲೀಂ ಅಹಮದ್ ಅವರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಎಸ್. ಫಯಾಜೊದ್ದಿನ್ ಹಾಗೂ ಸತ್ತರ್ ಬಂಗ್ಲೆವಾಲೆ ಅವರ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದರು.
ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಸೈಯದ್ ಖಾಲಿದ್ ಖಾದ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀ ಸಲೀಂ ಅಹಮದ್ ಅವರು, ಖಾಲಿದ್ ಖಾದ್ರಿ ಅವರ ತಂದೆಯವರ ನಿಧನದ ವಿಚಾರ ತಿಳಿದು ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ದುಃಖದ ಸಂದರ್ಭದಲ್ಲಿ ಕುಟುಂಬದವರಿಗೆ ಧೈರ್ಯ ಹಾಗೂ ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹುಸೇನ್ ಪಾಷಾ ಕೊಡಲಿ, ಅಸ್ಲಾಂ ಪಾಷಾ ಸಿರವಾರ್, ರಜಾಕ್ ಉಸ್ತಾದ್, ಸೈಯದ್ ನಜರುದ್ದೀನ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ಚಾಂದ್ ಪಾಷಾ ಗುತ್ತೇದಾರರು, ಸಲೀಂ ಪಾಷಾ ರುಮಾಲ್ ವಾಲೆ, ಸೈಯದ್ ಉಬೇದ್ ಖಾದ್ರಿ, ಸೈಯದ್ ಮುಜ್ತಬಾ ಖಾದ್ರಿ, ಹಿದಾಯತ್ ನಾಯಕ್, ರೇವಣಸಿದ್ದಯ್ಯ ಸ್ವಾಮಿ, ಏಸಾಸ್ ಖಾದ್ರಿ, ಸೈಯದ್ ಆರೀಫ್ ಜಾಗೀರ್ದಾರ್, ಹೆಚ್.ಬಿ.ಎಂ. ಬಾಷಾ, ರಸೂಲ್ ಖುರೇಶಿ, ಸೈಯದ್ ಸಯೀದ್ ಖಾದ್ರಿ, ಅಬ್ಬು ಪಟೇಲ್, ಪಾಶು ಮಾಲ್ದಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಮೃತರಿಗೆ ಗೌರವ ನಮನ ಸಲ್ಲಿಸಿದರು.

