ಮಾನವಿ : ಸಮಾಜ ಕಲ್ಯಾಣ ಇಲಾಖೆ ಮಾನ್ವಿ ಹಾಗೂ ಜನ ಸೇವಾ ಗ್ರಾಮೀಣಾಭಿವೃದ್ಧಿ ( ರಿ) ನಕ್ಕುಂದಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮಗಳಲ್ಲಿ ಅಸ್ಪೃಶ್ಯತೆ ಬೀದಿ ನಾಟಕ ಮಾಡಿ ಅಸ್ಪೃಶ್ಯತೆ ಎಂಬುದು ಭಾರತ ದೇಶದ ದೊಡ್ಡ ಪಿಡುಗು ಗ್ರಾಮಸ್ಥರು ಮತ್ತು ಹಿರಿಯರು ಬುದ್ಧಿಜೀವಿಗಳು ಇಂತಹ ಅಸ್ಪೃಶ್ಯತೆ ಆಚರಣೆಯನ್ನು ಮಾಡಲು ನಾವು ಯಾವತ್ತಿಗೂ ಮುಂದಾಗಬಾರದು ಸಮಾಜದಲ್ಲಿ ಎಲ್ಲಾ ವರ್ಗದವರು ಎಲ್ಲ ಜಾತಿ ಜನಾಂಗದವರು ಸಮಾನತೆ ಕಾಣುವ ಗ್ರಾಮವನ್ನು ನಾವು ಬದಲಾವಣೆ ಮಾಡಬೇಕಾಗಿದೆ ಇಂಥ ಅಸ್ಪೃಶ್ಯತೆ ಗ್ರಾಮಗಳು ಕಂಡು ಬಂದರೆ ಕಾನೂನು ಪ್ರಕಾರ ದೊಡ್ಡ ಅಪರಾಧವಾಗುತ್ತದೆ ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಪ್ರಕಾರ ಅಪರಾಧ ಅಪರಾಧವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ನಕ್ಕುಂದಿ ಮಾತನಾಡಿದರು
ಕಲಾವಿದರು ಪ್ರದರ್ಶನ ಮಾಡಿ ಹೋಟೆಲ್ ಗಳಲ್ಲಿ ದೇವಸ್ಥಾನಗಳಲ್ಲಿ ದಲಿತರನ್ನು ಒಳಗೆ ಬಿಡಬೇಕು ಮತ್ತು ಅವರಿಗೆ ಸಮಾನವಾಗಿ ಕಾಣುವಂತಾಗಬೇಕು
ಮತ್ತು ಇನ್ನೂ ಕಟಿಂಗ್ ಶಾಪ್ ಗಳಲ್ಲಿ ಯಾವುದೇ ಭೇದಭಾವ ಮಾಡದೆ ಪರಿಶಿಷ್ಟ ಜಾತಿ ಜನಾಂಗದವರಿಗೆ ಕಟಿಂಗ್ ಮಾಡುವ ಮುಖಾಂತರ ಸಮಾನತೆಯನ್ನು ತೋರಿಸಬೇಕು
ಕೆಲವು ಗ್ರಾಮಗಳಲ್ಲಿ ನಿಮ್ಮ ಈ ಬೀದಿ ನಾಟಕದಿಂದ ನಮಗೆ ತಿಳುವಳಿಕೆ ಬಂದಿದೆ ನಾವು ಕೂಡ ಮುಂದೆ ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಆಚರಣೆ ಮಾಡೋದಿಲ್ಲ ಎಂದು ಗ್ರಾಮದ ಮುಖಂಡರುಗಳು ಹರ್ಷ ವ್ಯಕ್ತಪಡಿಸಿದರು
ಸಂಕಲ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಶುರಾಮ್ ಬಾಗಲವಾಡ ಅನಿಲ್ ಕುಮಾರ್ ಕಲಾವಿದರಾದ ರಾಜಪ್ಪ ಜ್ಯೋತಿ ಮಾದರ ಸುರೇಶ ಬಾಗೇಶ ಪ್ರಕಾಶ ಕಮಲ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿರಿದ್ದರು

Leave a Reply

Your email address will not be published. Required fields are marked *