ಲಿಂಗಸಗೂರು : ಮಾ 9 .
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣದ ಕಾಂಪ್ಲೆಕ್ಸ್ ಎದುರುಗಡೆ ಇರುವ “ಜೀಶನ್ ಅಪನಾ ಹೈದರಾಬಾದ್” ರೆಸ್ಟೋರೆಂಟ್ ಕಟ್ಟಡದ ಮಾಲೀಕರು ಯಾವುದೇ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ರಸ್ತೆಯನ್ನು ಅಗೆದಿದ್ದಾರೆ.
ಸಾರ್ವಜನಿಕ ರಸ್ತೆಯನ್ನು ಅನಧಿಕೃತವಾಗಿ ಅಗೆದು ಹಾನಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಧಿಕಾರಿಗಳಿಗೆ
ದ ಸಂ ಸ ತಾಲೂಕ ಅಧ್ಯಕ್ಷ ಮೋಹನ್ ಗೋಸ್ಲೆ ಮನವಿಯನ್ನು ಸಲ್ಲಿಸಿದರು.
ಈ ರಸ್ತೆಯು ಇತ್ತೀಚೆಗಷ್ಟೇ ಹೊಸದಾಗಿ ನಿರ್ಮಾಣಗೊಂಡಿದ್ದು, ಮಾಲೀಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ರಸ್ತೆಯನ್ನು ಕಿತ್ತು ಹಾಕಿರುವುದರಿಂದ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುವ ಭೀತಿಯಿದೆ.
ಸಂಬಂಧಪಟ್ಟ ರೆಸ್ಟೋರೆಂಟ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಕ್ಕೆ ಅವರಿಗೆ ದಂಡ ವಿಧಿಸಬೇಕು.
ಕೂಡಲೇ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಾಗೂ ಕೂಡಲೇ ತಾವು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು . ಈ ಸಂದರ್ಭದಲ್ಲಿ
ರಾಜು ತಂಬಾಕೆ
ಸಮಾಜ ಸೇವಕರು
ಹಾಗೂ ವಾರ್ಡ್ ನಂ, 17 ಸ್ಥಳೀಯ ನಿವಾಸಿ ಇದ್ದರು .

