ಲಿಂಗಸಗೂರು : ಮಾ 9 .

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೊ ಗ್ರಾಮ ಪಂಚಾಯತ್ ಗುರುಗುಂಟದ ಮಲ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮಲ ತ್ಯಾಜ್ಯ ವಿಲೇವಾರಿ ಘಟಕ ವನ್ನು ಮಾರ್ಚ್ 31 ರೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಉಪ ವಿಭಾಗ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಘನ ತ್ಯಾಜ್ಯ ವಿಲೇವಾರಿ ಘಟಕ ವನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಗುತ್ತೇದಾರ ಇವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಉಮೇಶ, ಸಹಾಯಕ ನಿರ್ದೇಶಕರು (ಗ್ರಾ. ಉ ) ವೆಂಕಟೇಶ್ ದೇಸಾಯಿ, ಸಹಾಯಕ ನಿರ್ದೇಶಕರು (ಪಂ. ರಾಜ್ ) ಪಂಪನಗೌಡ ಪಾಟೀಲ್, ತಾಲೂಕು ಯೋಜನಾಧಿಕಾರಿಗಳು ಮಹಿಬುಬ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಉಪ ವಿಭಾಗ , ಹಣಮಂತಪ್ಪ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಪರಮೇಶ್ವರ್, ಶಾಖಾಧಿಕಾರಿಗಳು ಮಹದೇವಪ್ಪ, ಕಲ್ಲಿನಾಥ್ ಗುತ್ತೇದಾರ ಪ್ರತಿನಿಧಿ, ತಾಂತ್ರಿಕ ಸಂಯೋಜಕರು ಹನಮನಗೌಡ, ತಾಲೂಕು ಐ. ಇ. ಸಿ. ಸಂಯೋಜಕರು ಬಾಲಪ್ಪ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಪ್ಪ, ತಾಂತ್ರಿಕ ಸಹಾಯಕ ಜಾವಿದ್ ಪಾಷ, ಅಜಿಮ್ ಪಾಷ, ಅರುಣ ಕುಮಾರ, ಕರವಸಲಿ ಗಾರರು, ಹಾಜರಿದ್ದರು

Leave a Reply

Your email address will not be published. Required fields are marked *