ಕಲ್ಯಾಣ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಶರಣಬಸವೇಶ್ವರ ವಿದ್ಯಾಸಂಸ್ಥೆ ಬಹುದೊಡ್ಡ ಕ್ರಾಂತಿ ಮಾಡಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿದರು,ಶರಣಬಸವೇಶ್ವರ ದೇವಸ್ಥಾನ ಆವರಣದ ಡಾ.ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂ, ಡಾ.ಶರಣಬಸವಪ್ಪ ಅಪ್ಪಾ ಫ್ಯಾಮಿಲಿ ಟ್ರಸ್ಟ್, ಶರಣಬಸವೇಶ್ವರ ಸಂಸ್ಥಾನದಿಂದ ಶುಕ್ರವಾರ ಆಯೋಜಿಸಿದ್ದ ಅಪ್ಪ ಪ್ರಶಸ್ತಿ, ಶರಣ ವೈದ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ನರ್ಸರಿಯಿಂದ ಆದಿಯಾಗಿ ಉನ್ನತ ಶಿಣದವರೆಗೆ ಕಲ್ಯಾಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಈ ನಾಡಿನ ಪ್ರತಿಯೊಬ್ಬ ಮಗುವಿಗೂ ಶಿಣ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
8ನೇ ಪೀಠಾಧಿಪತಿ ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪ ಅವರು ದೂರದೃಷ್ಟಿವುಳ್ಳವರಾಗಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ನಂತರ ಸಂಸ್ಥೆ ಅಡಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ ಈ ಭಾಗದ ಮಕ್ಕಳಿಗೆ ಉನ್ನತ ಶಿಣ ದೊರಕಿಸಿ ಕೊಡುವಲ್ಲಿನ ಅವರ ಪರಿಶ್ರಮ ಸ್ಮರಣೀಯ ಎಂದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದು, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ದೊಡ್ಡ ಶ್ರಮ ಇದರಲ್ಲಿ ಅಡಗಿದೆ. ಕಲಬುರಗಿಯನ್ನು ಶೈಕ್ಷಣಿಕ ಹಬ್ ಮಾಡುವಲ್ಲಿ ಅಪ್ಪಾ ಅವರ ಸೇವಾ ಕಾರ್ಯ ಅತ್ಯಂತ ಶ್ಲಾನೀಯ ಎಂದು ಬಣ್ಣಿಸಿದರು.ಮುಗಳನಾಗಾವಿಯ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಗೆ ಅಪ್ಪ ಪ್ರಶಸ್ತಿ ನೀಡಲಾಯಿತು. ಶರಣಬಸವ ವಿವಿ ವಿಶ್ರಾಂತ ಕುಲಪತಿ ಡಾ.ನಿರಂಜನ್ ನಿಷ್ಠಿ ಉದ್ಘಾಟಿಸಿದರು. ದಾಸೋಹ ಮತ್ತು ಮಾನವೀಯತೆ ಹಾಗೂ ಶರಣಸತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಭವಾನಿ ಅಪ್ಪ, ಶಿವಾನಿ ಅಪ್ಪ, ಮಹೇಶ್ವರಿ ಅಪ್ಪ ಪ್ರಾರ್ಥಿಸಿದರು. ಶರಣಬಸವ ವಿವಿ ಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವೆ ಡಾ.ಲಕ್ಷಿ$್ಮ ಪಾಟೀಲ್ ಮಾಕಾ, ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ಶರಣಸತಿ ಸ್ಮರಣ ಸಂಚಿಕೆ ಸಂಪಾದಕ ಶರಣಗೌಡ ಪಾಟೀಲ್ ಪಾಳಾ, ಉಪ ಸಂಪಾದಕ ಪ್ರೊ.ಯಶವಂತರಾಯ ಅಷ್ಟಗಿ ಇತರರಿದ್ದರು.ಶರಣ ವೈದ್ಯ ಸೇವಾ ರತ್ನ ಪ್ರಶಸ್ತಿಡಾ.ಪಿ.ಎಂ.ಬಿರಾದಾರ್, ಡಾ.ಪ್ರತಿಮಾ ಮತ್ತು ಡಾ.ಎಸ್.ಬಿ.ಕಾಮರೆಡ್ಡಿ, ಡಾ.ಮನಾಲಿ ಮತ್ತು ಡಾ.ಸಚಿನ್ ದೇಶಪಾಂಡೆ, ಡಾ.ವಂದನಾ ಮತ್ತು ಡಾ.ಸಂತೋಷ ಕಾಮಶೆಟ್ಟಿ, ಡಾ.ವೀರಮ್ಮ ಮತ್ತು ಡಾ.ನಂದೀಶ ಜೀವಣಗಿ, ಡಾ.ಶರಣಮ್ಮ ಮತ್ತು ಡಾ.ನಂದೀಶ ನಿಷ್ಠಿ, ಡಾ.ಆಯಿಶಾ ಫಾತಿಮಾ ಮತ್ತು ಡಾ.ಮಹ್ಮದ್ ಅಬ್ದುಲ್ ಬಷೀರ್, ಡಾ.ರಾಜಶ್ರೀ ಮತ್ತು ಡಾ.ವಿಶ್ವನಾಥರೆಡ್ಡಿ, ಡಾ.ವೀಣಾ ಮತ್ತು ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ರೂಪಾಲಿ ಮತ್ತು ಡಾ.ಮಂಜುನಾಥ ದೋಶೆಟ್ಟಿ, ಗೌರಿ ಮತ್ತು ಡಾ.ಮಂಜುನಾಥ ಅಣಕಲ್, ಮಾನಸಾ ಮತ್ತು ಡಾ.ಪ್ರಶಾಂತ ಕುಲಕರ್ಣಿ, ಡಾ.ಸಿದ್ದಮ್ಮ ಮತ್ತು ಡಾ.ವಿರೇಶ ಆಳಂದ ಅವರಿಗೆ ಶರಣ ವೈದ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸಿದ್ಧ ಸಂಗೀತ ಗಾಯಕ ಮಲ್ಲಿಕಾರ್ಜುನ ಮಣ್ಣೂರಗೆ ವಿಶೇಷ ಸನ್ಮಾನ ಮಾಡಲಾಯಿತು.

ವೈದ್ಯರು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿನ ತವೈದ್ಯರು ಶರಣ ಸಂಸ್ಥಾನ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪ ಅವರ ಸೇವೆ ಮಾಡಿದ್ದಾರೆ. ಪ್ರಶಸ್ತಿ ಪುರಸತ ಎಲ್ಲ ವೈದ್ಯರಿಗೂ ಶರಣರ ಆಶೀರ್ವಾದ ಇರಲಿ. ,

Leave a Reply

Your email address will not be published. Required fields are marked *