ಮಸ್ಕಿ ತಾಲೂಕಿನ ಹಾಲಾಪೂರ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ, ಸರಸ್ವತಿ ಭಾವಚಿತ್ರಕ್ಕೆ ಪೂಜೆಯೊಂದಿಗೆ ಶ್ರೀ ಜಗದೀಶಚಂದ್ರ ತಾತನವರಿಂದ ಶ್ಲೋಕ ಪಠಿಸಿದರು. ಉದ್ಘಾಟನೆಯನ್ನು ಶ್ರೀ ದಂಡಗುಂಡಪ್ಪ ತಾತನವರು ಜಂಗಮರಹಳ್ಳಿ ನೆರವೇರಿಸಿದರು. ಮಲ್ಲಪ್ಪ ಮುಖ್ಯ ಗುರುಗಳು ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರಂತರ ಕಠಿಣ ಪರಿಶ್ರಮ ಇರಬೇಕು , ಹಾಲಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಶಾಲೆಯ ವಿಚಾರದಲ್ಲಿ ಬಹಳಷ್ಟು ಸಹಾಯ ಸಹಕಾರ ಪ್ರೀತಿ ಅಭಿಮಾನ ಉಳ್ಳವರು, ಅವರ ಗುಣ ಮೆಚ್ಚುವಂಥದ್ದು ಎಂದೂ ಹೇಳಿದರು. ಈ ವೇಳೆಯಲ್ಲಿ ವೀರಭದ್ರಪ್ಪ ತಾತ, ಶಾಲೆಯ ಭೂಧಾನಿಗಳಾದ ಶ್ರೀಮತಿ ಬಸ್ಸಮ್ಮ ಗೌಡಶಾನಿ, ಕರಿಯಪ್ಪ ಹಿರೇಕುರಬರ, ಎಸ್ ಡಿ ಎಂ ಸಿ ಅಧ್ಯಕ್ಷ ಶಾಬುದ್ದೀನ ಗುಡಿಹಾಳ, ಉಪಾಧ್ಯಕ್ಷ ಯಂಕಪ್ಪ ಪೊ.ಪಾ, ಶಾಲೆಯ ಮುಖ್ಯಗುರು ಸುಭಾಷ ಸಿಂಗ್ ಹಜಾರೆ, ಎರಿತಾತ ಮಾಪಾ, ರವಿ ದೇಸಾಯಿ, ಬಸವರಾಜ ಜಂಗಮರಳ್ಳಿ, ಮರಿಗೌಡ ಮಾಪಾ, ಬಸವರಾಜಗೌಡ, ವೆಂಕೋಬ ಪ್ರಾಂಶುಪಾಲರು, ನಾಗೇಶ್ ಪ್ರಾಚಾರ್ಯರು, ಸಿದ್ದು ಬಿ, ಲಕ್ಷ್ಮಣ ನಾಯಕ, ಯಂಕಪ್ಪ ಮಡಿವಾಳ, ಶಿವರಾಜ ಗುಡಿಹಾಳ, ಸಿದ್ದಾರ್ಥ ಪೊ.ಪಾ, ಅಮರೇಶ ವೈ, ಮಹಾಂತೇಶ ಪೂಜಾರಿ, ಚಂದಪ್ಪ ದೊಡ್ಮನಿ, ಶ್ರೀಕಾಂತ ಉಪನ್ಯಾಸಕರು, ಶಾಲಾ ಶಿಕ್ಷಕರಾದ ಆದೇಶಪ್ಪ, ರವೀಂದ್ರ ಕುಂಬಾರ, ಬಾಬುರಾವ, ಯಮನಪ್ಪ, ಕೃಷ್ಣಮೂರ್ತಿ, ಕಿರಣ್ ಕುಮಾರ ಮತ್ತು ಶಿಕ್ಷಕಿಯರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Leave a Reply

Your email address will not be published. Required fields are marked *