ರಾಯಚೂರು : ಈ ಬಾರಿ ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಅಂಕಿ ಅಂಕಿಗಳ ಪ್ರಕಾರ ರಾಯಚೂರು ನಗರ 35 ರಿಂದ 37 ಡಿಗ್ರಿ ಸೆಲ್ಸಿಯಸ್ ಆಸುಪಾಸು. ಆದರೆ, ಜನತೆ ಅನುಭವಿಸುತ್ತಿರುವ ತಾಪಮಾನ ತೀವ್ರತೆ ನಗರದಲ್ಲಿ ಹೆಚ್ಚಾಗುತ್ತಿದೇ.ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು,ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ 36 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಕೃಷಿ ವಿವಿ ಆವರಣದಲ್ಲಿರುವ ತಾಪಮಾನ ವಿಭಾಗದ ತಾಪಮಾನ ದಾಖಲು ವ್ಯವಸ್ಥೆ ಇದೆ. ಆದರೆ ರಾಯಚೂರು ನಗರ ಸುಮಾರು ಒಂದು ಕಿ.ಮೀ ದೂರ ಇದೆ. ಹೀಗಾಗಿ ಅಲ್ಲಿನ ತಾಪಮಾನಕ್ಕೂ ಹಾಗೂ ನಗರದಲ್ಲಿ ದಾಖಲಾಗುವ ತಾಪಮಾನಕ್ಕೂ ವ್ಯತ್ಯಾಸವಿದೆ.

ಹಗಲು ಬಿಸಿಲಿನ ತಾಪಕ್ಕೆ ಕಾದು ಕೆಂಡವಾಗುವ ಈ ಬೆಟ್ಟ ರಾತ್ರಿ ಹಗಲು ತಾನು ದಾಖಲು ಮಾಡಿಕೊಂಡ ಬಿಸಿಯನ್ನು ಹೊರ ಹಾಕುತ್ತದೆ. ಈ ಬಿಸಿ ತಾಪವನ್ನು ನಗರ ಜನತೆ ಪ್ರತಿ ವರ್ಷ ಬಿಸಿಲು ಕಾಲದ ದಿನಗಳಲ್ಲಿ ಅನಿವಾರ್ಯವಾಗಿ ಅನುಭವಿಸಲೇಬೇಕಾದ ಸ್ಥಿತಿ ಇದೆ.ಮಣ್ಣಿನ ಮಡಿಕೆಗೆ ಬಾರಿ ಬೇಡಿಕೆ
ಪ್ರತಿ ವರ್ಷ ಬಿಸಿಲು ಕಾಲದಲ್ಲಿ ಮಣ್ಣಿನಿಂದ ತಯಾರಿಸಿದ ಮತ್ತು ನೀರು ಕುಡಿಯಲು ಬಳಸುವ ಹೂಜಿ, ಮಡಕೆ, ಹರವೆ, ಗಡಿಗೆಗಳ ಮಾರಾಟ ಕಳೆದ ಒಂದು ವಾರದಿಂದ ನಗರಕ್ಕೆ ಮಾರಾಟಗಾರರು ಬಂದಿದ್ದು, ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ತಯಾರಾದ ಗಡಿಗೆ, ಹೂಜಿಗಳನ್ನು ಕೆಲವರು ವ್ಯಾಪಾರ ಮಾಡಿದರೆ, ಯಾದಗಿರಿ,ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಹಾಗೂ ತೆಲಂಗಾಣದ ನಾರಾಯಣಪೇಟೆ, ಗದ್ವಾಲ್ ಹಾಗೂ ಮತ್ತಿತರ ಕಡೆಯ ಜನರೂ ಇಂಥ ಹೂಜಿಗಳನ್ನು ಮಾರಾಟಕ್ಕೆ ತಂದಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿದೆ. ವ್ಯಾಪಾರ ಮಾತ್ರ ಕಡಿಮೆ ಆಗುತ್ತಿದೆ. ಯಾಕೋ ಗೊತ್ತಿಲ್ಲ. ಒಂದು ಹೂಜಿ, ಗಡಿಗೆಗೆ ಸುಮಾರು 75 ರೂಪಾಯಿ ಇಂದ 450 ರೂಪಾಯಿ ವರೆಗೆ ವಿವಿಧ ಮಣ್ಣಿನ ಗಡಿಗೆ ಹಾಗೂ ಬಟೆಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜತೆಗೆ ಮಡಿಕೆ ತಯಾರಿಸುವ ಕಲಾವಿದರು ಮಡಿಕೆ ಮೇಲೆ ವಿವಿಧ ಕಲಾಕೃತಿಗಳ ಚಿತ್ರಗಳನ್ನು ರಚಿಸಿ ಮಾರಾಟ ಮಾಡುತ್ತಿದ್ದಾರೆ. ಮಡಿಕೆಗಳು ನೋಡುಗರ ಗಮನ ಸೆಳೆಯುತ್ತಿವೆ.

ಹೆಚ್ಚಾದ ಹಣ್ಣು ಎಳೆ ನೀರಿನ ದರ
ಕಳೆದ ವರ್ಷ 30 ರೂಪಾಯಿಗೊಂದು ಇದ್ದ. ಎಳೆ ನೀರು ಈ ವರ್ಷ 40 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಪ್ರಶ್ನಿಸಿದರೆ ಮಾಲ್ ಶಾರ್ಟೆಜ್, ಹೋಲ್‌ಸೇಲ್‌ನಲ್ಲಿ ತಂದು ಇಲ್ಲಿ ಮಾರಲೂ ಎಳೆ ನೀರು ಸಿಗುತ್ತಿಲ್ಲ. ದಿನಕ್ಕೆ ಒಂದೆರಡು ಲೋಡ್ ಬಂದ್ರೂ ಕೆಲವೇ ತಾಸಿನಲ್ಲಿ ಖಾಲಿ ಆಗುತ್ತವೆ ಎಂದು ಎಳೆ ನೀರು ವ್ಯಾಪಾರಸ್ಥರು ತಮ್ಮ ಸಮಸ್ಯೆ ಹೇಳ್ಕೊತ್ತಾರೆ.
ಇದರ ಜತೆಗೆ ಒಂದು ಕಲ್ಲಂಗಡಿ ಹಣ್ಣಿನ ಬೆಲೆ 40-50 ರೂಪಾಯಿಗೇರಿ ೆ! ಕರಬೂಜಾ, ಸೌತೆ ಹಣ್ಣಿಗೂ ಡಿಮ್ಯಾಂಡ್ ! ಫ್ರಿಜ್- ಕೂಲರ್‌ಗಳ ಮಾರಾಟ ಜೋರಾಗಿದೆ. ಸಮ್ಮರ್ ಆಫರ್ ಸ್ಟೀಮ್ ಘೋಷಣೆಗಳೂ ಗ್ರಾಹಕರನ್ನು ಸೆಳೆಯುತ್ತಿವೆ.ಬಿಸಿಲ ತಾಪಕ್ಕೆ ತತ್ತರಿಸುತ್ತಿರುವ ಜನತೆ ಸ್ವಲ್ಪ ತಂಪಾಗಲೂ ತಮ್ಮ ಜೇಬಿಗೂ ಸ್ವಲ್ಪ ಬಿಸಿ ತಟ್ಟಿಸಿಕೊಳ್ಳಲೇಬೇಕಾದ ಸ್ಥಿತಿ ಕಾಣುತ್ತಿದೆ.

ಎಂದಿನಂತೆ ಪ್ರತಿ ವರ್ಷ ಕುಟುಂಬ ಸಮೇತ ಜಿಲ್ಲೆಗೆ ಮಡಿಕೆಗಳನ್ನು ಮಾರಾಟ ಮಾಡಲು ನಾವು ಜಿಲ್ಲೆಗೆ ಬರುತ್ತೇವೆ. ಈ ಬಾರಿ ತಣ್ಣನೇಯ ಬಾಟಲೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ವ್ಯಾಪಾರ ಜೋರಾಗಿದೆ. ದಿನಕ್ಕೆ 30 ರಿಂದ 40 ಮಡಿಕೆಗಳು ಮಾರಾಟವಾಗುತ್ತಿವೆ. ಇನ್ನು ಎರಡು ತಿಂಗಳು ವ್ಯಾಪಾರ ಮಾಡಲು ಸಮಯವಿದೆ. ಹೆಚ್ಚಿನ ವ್ಯಾಪಾರ ಆಗುವ ಸಾಧ್ಯತೆ ಇದೆ.
ಭೀಮರಾಯ ಮಡಿಕೆ ವ್ಯಾಪಾರಿ ಯಾದಗಿರಿ.

Leave a Reply

Your email address will not be published. Required fields are marked *