ಸಿಂಧನೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮಾ.5ರಂದು ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ನಾವೀನ್ಯತಾ ಮೇಳವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಸ್ವಯಂವಾಗಿ ತಯಾರಿಸಿದ 20ಕ್ಕೂ ಹೆಚ್ಚು ನವೀನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ, ತಮ್ಮ ಸೃಜನಾತ್ಮಕತೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಮೆರೆದರು.

ಈ ಆವಿಷ್ಕಾರ ಮೇಳಕ್ಕೆ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿ, ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೇಳವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಅನ್ವೇಷಣಾ ಮನೋಭಾವ ಬೆಳೆಸುವ ವೇದಿಕೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರು ರವೀಂದ್ರಗೌಡ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ. ಇಂತಹ ನಾವೀನ್ಯತಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆ ಕೌಶಲ್ಯಗಳನ್ನು ವೃದ್ಧಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದು ಹೇಳಿದರು.

ನಂತರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ರಾಯಚೂರು ಜಿಲ್ಲೆಯ ವಲಯ ಮುಖ್ಯಸ್ಥರಾದ ಜ್ಯೋತಿಬಾ ಸೂರ್ಯವಂಶಿ ಅವರು ಮಾತನಾಡಿ, ಪ್ರತಿಯೊಂದು ಮಾದರಿಯ ಸಾಧಕ-ಬಾಧಕಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮವನ್ನು ತಾಲೂಕು ಸಂಚಾಲಕರಾದ ಶಿವಗೇನಪ್ಪ ಕೊಮ್ಮನೂರು, ಗೌಡನಬಾವಿ ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ: ಶಾಲೆಯ ಶಿಕ್ಷಕರಾದ ರಾಮದಾಸ್, ತುಳಸಿದಾಸ್, ವೀರೇಶಪ್ಪ, ಅಂಜನಾದೇವಿ, ವಾಸಂತಿ ಕೆ.ಖಾಜಾ ಬನ್ನಿ, ರೇಷ್ಮಾ, ಚೆನ್ನವೀರಮ್ಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *