ಮಸ್ಕಿ: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಯಮನೂರಪ್ಪ ದರ್ಗಾದ ೩೬ನೇ ವರ್ಷದ ಉರುಸು ಗುರುವಾರ ಅದ್ಧೂರಿಯಾಗಿ ಜರುಗಿತು.
ಕಿಲ್ಲಾ ಬಡಾವಣೆ ಬಳಿಯ ಹಜರತ್ ಮೌಲಾಲಿ ದರ್ಗಾದಿಂದ ಗಂಧದ ಮೆರವಣಿಗೆಯೂ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ದರ್ಗಾ ತಲುಪಿತು. ದರ್ಗಾದಲ್ಲಿ ಜಾವೇದ್ ಖಾಜಿ ಕುರಾನ್ ಪಠಣ ಮಾಡಿದ ಬಳಿಕ ಗದ್ದುಗೆಗೆ ಪುಷ್ಪಾರ್ಚನೆ ಮಾಡಲಾಯಿತು.
ಪಟ್ಟಣದ ಗಣ್ಯರು ದರ್ಗಾಕ್ಕೆ ಭೇಟಿ ನೀಡಿ ಯಮನೂರಪ್ಪ ದರ್ಶನ ಪಡೆದರು. ದರ್ಗಾ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ನೇತ್ರತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಚಿದಾನಂದ ಜೋಗಿನ್, ಹನುಮಂತ ತೋಳದಿನ್ನಿ, ಶಂಕರಗೌಡ ಪಾಟೀಲ್, ಯಮನೂರ ಬುದ್ದಿನ್ನಿ, ವೆಂಕಟೇಶ ಮಂಗನಾಳ, ಮೈನು ಕಿಲ್ಲಾ, ನರಸಪ್ಪ, ದ್ಯಾಮಪ್ಪ, ಪಂಪಣ್ಣ, ದುರ್ಗಪ್ಪ ಮುದ್ದಾಪೂರ ಸೇರಿದಂತೆ ಇನ್ನಿತರರಿದ್ದರು.

